ಕಾಸರಗೋಡು: ಕೋವಿಡ್ ಪ್ರತಿರೋಧ ಚಟುವಟಿಕೆಗಳ ಅಂಗವಾಗಿ ಜನಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಮಕ್ಕಳಿಗಾಗಿ ನಡೆಸಿದ್ದ ಮೊಬೈಲ್ ಸೆಲ್ಫಿ ವೀಡಿಯೋ ಸ್ಪರ್ಧೆ ಈ ವಲಯಕ್ಕೆ ವಿಭಿನ್ನ ಆಕರ್ಷಣೆ ನೀಡಿದೆ.
ಐ.ಇ.ಸಿ. ಜಿಲ್ಲಾ ಮಟ್ಟದ ಸಂಚಲ ಸಮಿತಿ ಹತ್ತು ವರ್ಷಕ್ಕಿಂತ ಕೆಳಗಿನ ವಯೋಮಾನದ ಮಕ್ಕಳಿಗಾಗಿ ಈ ಸ್ಪರ್ಧೆ ನಡೆಸಿತ್ತು. ಕನ್ನಡ, ತುಳು, ಮಲೆಯಾಳಂ ಮತ್ತು ಇಂಗ್ಲೀಷ್ ಭಾಷೆಗಳಲ್ಲಿ ಸ್ಪರ್ಧೆ ಏರ್ಪಡಿಸಲಾಗಿತ್ತು.
ಸ್ಪರ್ಧೆಯಲ್ಲಿ ಚೆಮ್ನಾಡ್ ನಿವಾಸಿ ಝಮೀರ್-ಅಲ್ ಹಾನಾ ದಂಪತಿ ಪುತ್ರಿ ಸುಹರಾ ಝೇಬಾ ಪ್ರಥಮ ಬಹುಮಾನ ಪಡೆದರು. ಕಾರಡ್ಕ ನಿವಾಸಿ ಸೇತುರಾಜ್-ಕೃಷ್ಣಕೃಪಾ ದಂಪತಿ ಪುತ್ರ ಅತುಲ್ ಕೃಷ್ಣ ದ್ವಿತೀಯ, ಮಾಲಕ್ಕಲ್ ಪುದುಪ್ಪರಂಬಿಲ್ ನಿವಾಸಿ ಅರುಣ್ ಚಾಕೋ-ರೀನಾ ಮೇರಿ ದಂಪತಿ ಪುತ್ರಡೋನ್ ಜಾನ್ ತೃತೀಯ ಬಹುಮಾನ ಗಳಿಸಿದರು. ಪೆÇ್ರೀತ್ಸಾಹಕ ಬಹುಮಾನಗಳನ್ನು ಶಂಕರಂಪಾಡಿಯ ವಿಜಯನ್ ಶಂಕರಂಪಾಡಿ- ಪಿ.ಸುನಿತಾ ದಂಪತಿ ಪುತ್ರಿ ವೇದಾ, ಋತುಶ್ರೀ ಕೆ.ಮಾಧವ್ ಪಡೆದರು. ಮೊದಲ ಮೂರು ಬಹುಮಾನ ರೂಪದಲ್ಲಿ 5 ಸಾವಿರ ರೂ. ಮೂರು ಸಾವಿರ ರೂ., 2 ಸಾವಿರ ರೂ. ನಗದು ನಿಕ್ಷೇಪದ ನ್ಯಾಷನಲ್ ಸೇವಿಂಗ್ಸ್ ಕಿಸಾನ್ ವಿಕಾಸ ಪತ್ರ ಮತ್ತು ಅರ್ಹತಾಪತ್ರ, ಪೆÇ್ರೀತ್ಸಾಹಕ ಬಹುಮಾನವಾಗಿ ಅರ್ಹತಾಪತ್ರ ನೀಡಲಾಗುವುದು.
ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅವರು ಅಧ್ಯಕ್ಷರಾಗಿರುವ ಜೂರಿ ಪಾನೆಲ್ ವಿಜೇತರ ಆಯ್ಕೆ ನಡೆಸಿದೆ. ಕೇರಳ ತುಳು ಅಕಾಡೆಮಿ ಅಧ್ಯಕ್ಷ ಉಮೇಶ್ ಎಂ.ಸಾಲ್ಯಾನ್, ಮಾಸ್ಟರ್ ಯೋಜನೆ ಸಂಚಾಲಕಿ ಪಿ.ವಿದ್ಯಾ, ಜಿಲ್ಲಾ ಮಾಸ್ ಮೀಡಿಯಾ ಅಧಿಕಾರಿ ಅಬ್ದುಲ್ ಲತೀಫ್, ಡೆಪಯೂಟಿ ಮಾಸ್ ಮೀಡಿಯಾ ಅಧಿಕಾರಿ ಎಸ್.ಸಯಾನಾ, ಸಮಾಜ ಸುರಕ್ಷಾ ಮಿಷನ್ ಜಿಲ್ಲಾ ಸಂಚಾಲಕ ಜಿಷೋ ಜೇಮ್ಸ್ ಈ ಸಮಿತಿಯಲ್ಲಿದ್ದಾರೆ.
ಶಿಶು ದಿನಾಚರಣೆ ಅಂಗವಾಗಿ ನಡೆಯುವ ಸಮಾರಂಭದಲ್ಲಿ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಬಹುಮಾನ ವಿತರಿಸುವರು. ರಾಷ್ಟ್ರೀಯ ಆರೋಗ್ಯ ವಿಭಾಗ ಬಹುಮಾನದ ಪ್ರಾಯೋಜಕರಾಗಿದ್ದಾರೆ.