ಬದಿಯಡ್ಕ: ಬಿಜೆಪಿಯ ಹಿರಿಯ ನೇತಾರ, ರಾಜ್ಯಸಮಿತಿ ಸದಸ್ಯ ಎಂ.ಸಂಜೀವಶೆಟ್ಟಿ ಮೊಟ್ಟೆಕುಂಜ ಅವರು ಕುಂಬ್ಡಾಜೆ ಗ್ರಾಮಪಂಚಾಯಿತಿಯ 7 ವಾರ್ಡಿನ ಅಭ್ಯರ್ಥಿಯಾಗಿ ಬುಧವಾರ ಚುನಾವಣಾ ಅಧಿಕಾರಿ ಅಜಿಕುಮಾರ್ ಅವರಿಗೆ ನಾಮಪತ್ರ ಸಲ್ಲಿಸಿದರು. ಅವರೊಂದಿಗೆ ವಿವಿಧ ವಾರ್ಡುಗಳ ಅಭ್ಯರ್ಥಿಗಳೂ ನಾಮಪತ್ರ ಸಲ್ಲಿಸಿದ್ದರು. ಪಕ್ಷದ ನೇತಾರರಾದ ರವೀಂದ್ರ ರೈ ಗೋಸಾಡ, ಶಶಿಧರ ತೆಕ್ಕೆಮೂಲೆ, ಪ್ರಭಾಕರ ರೈ, ರಾಜೇಶ್ ಶೆಟ್ಟಿ ಹಾಗೂ ಕಾರ್ಯಕರ್ತರು ಜೊತೆಗಿದ್ದರು.