ಕಾಸರಗೋಡು: ಕೋವಿಡ್ ತಪಾಸಣೆಗೆ ಒಳಗಾಗುವ ನಿಟ್ಟಿನಲ್ಲಿ ಕಾಸರಗೋಡು ಜಿಲ್ಲೆಯಲ್ಲಿ ಕೆಲವೆಡೆ ಜನ ಹಿಂದೇಟು ಹಾಕುತ್ತಿರುವುದು ವರದಿಯಾಗಿರುವ ಹಿನ್ನೆಲೆಯಲ್ಲಿ ಜಿಲ್ಲಾ ವೈದ್ಯಾಧಿಕಾರಿ ಸಜ್ಜುಗೊಳಿಸಿರುವ ಮೊಬೈಲ್ ಸ್ವಾಬ್ ಕಲೆಕ್ಷನ್ ಘಟಕಗಳನ್ನು ಬಳಸಿ ಕಾಸರಗೋಡು, ಕಾಞಂಗಾಡ್ ಬಸ್ ನಿಲ್ದಾಣಗಳಲ್ಲಿ ಉಚಿತ ರೂಪದಲ್ಲಿ ಆಂಟಿಜೆನ್ ಟೆಸ್ಟ್ ನಡೆಸುವ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ತಿಳಿಸಿದರು. ಈ ಎರಡೂ ಕಡೆ ಪೆÇಲೀಸ್, ಕಂದಾಯ, ನಗರಸಭೆ ಸಿಬ್ಬಂದಿಯನ್ನು ಆಯಾ ಇಲಾಖೆಗಳು ನೇಮಿಸಲಿವೆ ಎಂದವರು ತಿಳಿಸಿದರು.
ಕೋವಿಡ್ ಪ್ರತಿರೋಧ ಚಟುವಟಿಕೆಗಳ ಅವಲೋಕನ ನಡೆಸುವ ನಿಟ್ಟಿನಲ್ಲಿ ಗುರುವಾರ ನಡೆದ ಕೋವಿಡ್ ಕೋರ್ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು.
ಟಾಟಾ ಆಸ್ಪತ್ರೆಗೆ ಉಪಕರಣಗಳ ಖರೀದಿಗೆ ಆಡಳಿತಾನುಮತಿ:
ಟಾಟಾ ಕೋವಿಡ್ ಆಸ್ಪತ್ರೆಗಾಗಿ ಉಪಕರಣಗಳ ಖರೀದಿ ನಡೆಸಲು ಆಡಳಿತಾನುಮತಿ ಲಭಿಸಿದೆ ಎಂದು ಜಿಲ್ಲಾಧಿಕಾರಿ ಸಭೆಯಲ್ಲಿ ತಿಳಿಸಿದರು. ಇದಕ್ಕೆ ತುರ್ತು ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಜಿಲ್ಲಾ ವೈದ್ಯಾಧಿಕಾರಿಗೆ ಹೊಣೆ ನೀಡಲಾಗಿದೆ. ಆಸ್ಪತ್ರೆಗೆ ಅಗತ್ಯವಾಗಿ ಬಾಕಿಯುಳಿದಿರುವ ರಸ್ತೆ ಡಾಮರೀಕರಣ, ವಿದ್ಯುದೀಕರಣ, ನೀರಾವರಿ ಸಂಪರ್ಕ ಇತ್ಯಾದಿ ಚಟುವಟಿಕೆಗಳು ಸಂಬಂಧಪಟ್ಟ ಇಲಾಖೆಗಳು ನ.30ರ ಮುಂಚಿತವಾಗಿ ಪೂರ್ಣಗೊಳಿಸುವಂತೆ ಜಿಲ್ಲಾಧಿಕಾರಿ ತಿಳಿಸಿದರು.
ಕಾಞಂಗಾಡ್ ಜಿಲ್ಲಾ ಆಸ್ಪತ್ರೆಯಲ್ಲಿ ಕೋವಿಡ್ ಚಿಕಿತ್ಸೆ ಕೈಬಿಟ್ಟು ಇತರ ಚಿಕಿತ್ಸೆಗಳಿಗಾಗಿ ಮಾತ್ರ ಬಿಟ್ಟುಕೊಡಲು ಕ್ರಮ ಆರಂಭಿಸಲಾಗಿದೆ. ಇದರ ಅಂಗವಾಗಿ ಟಾಟಾ ಆಸ್ಪತ್ರೆಗೆ ಬೇಕಾದ ಸಜ್ಜೀಕರಣ ನ.25ರ ಮುಂಚಿತವಾಗಿ ಪೂರ್ಣಗೊಳಿಸಲು ಜಿಲ್ಲಾ ವೈದ್ಯಾಧಿಕಾರಿಗೆ ಹೊಣೆ ನೀಡಲಾಗಿದೆ.
ಜಿಲ್ಲೆಯಲ್ಲಿ 7 ಸಿ.ಎಫ್.ಎಲ್.ಟಿ.ಸಿ.ಗಳಲ್ಲಿ ಮಾತ್ರ ಸದ್ರಿ ರೋಗಿಗಳನ್ನು ದಾಖಲಿಸಲಾಗಿದೆ. ಆದರೆ ಅತ್ಯಗತ್ಯವಾಗಿರುವ ಒಂದು ಯಾ ಎರಡು ಸಿ.ಎಫ್.ಎಲ್.ಟಿ.ಸಿ.ಗಳನ್ನು ಮಾತ್ರ ಉಳಿಸಿಕೊಂಡು, ಬಾಕಿಯಿರುವವನ್ನು ತೆರವುಗೊಳಿಸಲು ಅಗತ್ಯದ ಕ್ರಮ ಕೈಗೊಳ್ಳುವಂತೆ ಜಿಲ್ಲಾ ವೈದ್ಯಾಧಿಕಾರಿಗೆ ಆದೇಶ ನೀಡಲಾಗಿದೆ.
ಇತರ ಪ್ರಧಾನ ತೀರ್ಮಾನಗಳು
ಕಾಸರಗೋಡು-ಮಂಗಳೂರು ಅಂತಾರಾಜ್ಯ ರಸ್ತೆಯಲ್ಲಿ ಕೆ.ಎಸ್.ಆರ್.ಟಿ.ಸಿ. ಬಸ್ ಸೇವೆ ಪುನರಾರಂಭಿಸುವ ತೀರ್ಮಾನ ಸಂಬಂಧ ರಾಜ್ಯ ಸೆರಕಾರಕ್ಕೆ ಸಲ್ಲಿಸಿರುವ ಅರ್ಜಿ ಕುರಿತು ಪ್ರದಾನ ಕಾರ್ಯದರ್ಶಿ ಮಟ್ಟದಲ್ಲಿ ಕೈಗೊಳ್ಳುವ ತೀರ್ಮಾನ ಪ್ರಕಾರ ಜಿಲ್ಲೆಯಲ್ಲಿ ಕ್ರಮ ಕೈಗೊಳ್ಳಲಾಗುವುದು.
ಪಡಿತರ ಕಿಟ್ ಗಳು, ಇತರ ಪಡಿತರ ಸಾಮಾಗ್ರಿಗಳ ವಿತರಣೆ ಇತ್ಯಾದಿಗಳು ಯಾವುದೇ ತಡೆಯಿಲ್ಲದೆ ಸಾರ್ವಜನಿಕರಿಗೆ ಲಭಿಸುವಂತೆ ಖಚಿತತೆ ಮೂಡಿಸಲು ಜಿಲ್ಲಾ ಸಪ್ಲೈ ಅಫೀಸರ್ ಅವರಿಗೆ ಹೊಣೆ ನೀಡಲಾಗಿದೆ.
ಪರವನಡ್ಕ ದೇಳಿ ರಸ್ತೆಯಲ್ಲಿ ಲಾಕ್ ಡೌನ್ ನಂತರ ಬಸ್ ಸಂಚಾರ ಪುನರಾರಂಭ ಸಂಬಂಧ ಲಭಿಸಿದ ದೂರಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ಕೆ.ಎಸ್.ಆರ್.ಟಿ.ಸಿ. ಅಧಿಕಾರಿಯಲ್ಲಿ ವರದಿ ಆಗ್ರಹಿಸಿದ್ದಾರೆ.
ನ.21ರಿಂದ ಡಿ.14 ವರೆಗೆ ನಡೆಯಲಿರುವ ಚಾರ್ಟೆಡ್ ಅಕೌಂಟೆಂಟ್ ಪರೀಕ್ಷೆಯನ್ನು ಕೋವಿಡ್ ಕಟ್ಟುನಿಟ್ಟುಗಳನ್ನು ಪಾಲಿಸಿ ನಡೆಸಲು ಚಿನ್ಮಯಾ ಅಕಾಡೆಮಿಗೆ ಅನುಮತಿ ನೀಡಲಾಗಿದೆ.