HEALTH TIPS

ರಂಗಕರ್ಮಿ ಉದಯ ಸಾರಂಗ ಅವರ ರಂಗ ನಾಟಕಗಳ ಸಂಕಲನ ಬಿಡುಗಡೆ-ದಲಿಯನೇ ಬಂದು ಜೋಳಿಗೆಯಿಂದ ತೆಗೆದು ಪುಸ್ತಕ ಹಸ್ತಾಂತರ!


          ಕಾಸರಗೋಡು    : ಪರಿಸರ ಕಾಳಜಿ, ದಬ್ಬಾಳಿಕೆ, ಶೋಷಣೆ,  ಅಸಮಾನತೆ, ಅಸ್ಪೃಶ್ಯತೆಯ ವಿರುದ್ಧದ ದನಿಯಾಗಿ ಉದಯ ಸಾರಂಗ ಅವರ ನಾಟಕ ಕೃತಿಗಳು ರೂಪುಗೊಂಡಿದೆ ಎಂದು ಹಿರಿಯ ಪತ್ರಕರ್ತ, ಕವಿ ರಾಧಾಕೃಷ್ಣ ಕೆ.ಉಳಿಯತ್ತಡ್ಕ ಅವರು ಹೇಳಿದರು. 

       ಯುವ ರಂಗಕರ್ಮಿ ಉದಯ ಸಾರಂಗ ಅವರ ದಲಿಯನ ಡೋಲು ಮತ್ತು ಬೆಟ್ಟದ ಗಿಳಿ ರಂಗ ನಾಟಕಗಳ ಸಂಕಲನವನ್ನು ಭಾನುವಾರ ಸಂಜೆ ಕಾಸರಗೋಡು ಜಿಲ್ಲಾ ಲೈಬ್ರರಿ ಕೌನ್ಸಿಲ್ ತೆರೆದ ಆವರಣದಲ್ಲಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು. 

    ಸಂಸ್ಕøತಿಗೆ ಪೂರಕವಾದ, ಸಮಾಜಮುಖಿ ನಾಟಕಗಳ ಆಶಯ-ಸಂದೇಶಗಳು ಸಾರ್ವಕಾಲಿಕವಾಗಿದ್ದಾಗ ಆ ರಂಗ ಸಾಕ್ಷಾತ್ಕಾರ ಗೆಲ್ಲುತ್ತದೆ. ಸಾಮಾಜಿಕ ತಲ್ಲಣಗಳಿಗೆ ಸ್ಪಂಧಿಸುವ ಧ್ವನಿಗಳು ಮೌಲ್ಯಗಳನ್ನು ಬಿತ್ತುವ ಮೂಲಕ ಸಮಾಜವನ್ನು ಬೆಳೆಸುತ್ತದೆ. ನೆಲಮೂಲ ಸಂಸ್ಕøತಿ ಬದಲಾಗುವ ವರ್ತಮಾನದಲ್ಲಿ ಅದನ್ನು ಉಳಿಸುವ ಪೂರಕ ಚಟುವಟಿಕೆ ರಂಗಭೂಮಿಯಿಂದ ಸಾಧ್ಯ ಎಂದು ರಾಧಾಕೃಷ್ಣ ಕೆ ಉಳಿಯತ್ತಡ್ಕ ಈ ಸಂದರ್ಭ ತಿಳಿಸಿದರು.  

           ಕಾಸರಗೋಡು ಜಿಲ್ಲಾ ಲೈಬ್ರೆರಿಯಲ್ಲಿ ರಂಗ ಕುಟೀರ ಕಾಸರಗೋಡು ಆಯೋಜಿಸಿದ ರಂಗ ನಾಟಕಗಳ ಸಂಕಲನ ಕೃತಿ ಬಿಡುಗಡೆ ಸಮಾರಂಭದಲ್ಲಿ ಕೇರಳ ತುಳು ಅಕಾಡೆಮಿ ಅಧ್ಯಕ್ಷ, ರಂಗ ನಿರ್ದೇಶಕ ಉಮೇಶ್ ಎಂ.ಸಾಲಿಯಾನ್ ಅಧ್ಯಕ್ಷತೆ ವಹಿಸಿ ಮಾತನಾಡಿ ಭಾಷೆಗೂ ಮೀರಿದ ರಂಗಾವಿಷ್ಕಾರಗಳು ರಂಗಭೂಮಿಯ ಗರಿಮೆಗಳಾಗಿ ಸದಾ ಜ್ಯೋತಿಯಂತೆ ಪ್ರಕಾಶಿಸುತ್ತದೆ. ಗಡಿನಾಡು ಕಾಸರಗೋಡಿನ ಹಳೆ ತಲೆಮಾರಿನ ರಂಗ ಚಟುವಟಿಕೆಗಳು ಅವಿಸ್ಮರಣೀಯವಾಗಿದ್ದು ಬದಲಾದ ಇಂದಿನ ಕಾಲಮಾನದಲ್ಲಿ ಹೊಸತನದ ಮೂಸೆಯಲ್ಲಿ ಉದಯ ಸಾರಂಗರಂತಹ ರಂಗಾಸಕ್ತರ ತ್ಯಾಗದ ಮೂಲಕ ಮತ್ತೊಮ್ಮೆ ಉಚ್ಚ್ರಾಯತೆಗೆ ಬರಲಿ ಎಂದು ಹಾರೈಸಿದರು.


      ಕಾರ್ಯಕ್ರಮದಲ್ಲಿ ಕೇರಳ ರಾಜ್ಯಲೈಬ್ರೆರಿ ಕೌನ್ಸಿಲ್ ಸದಸ್ಯ ಅಹಮ್ಮದ್ ಹುಸೈನ್ ಮಾಸ್ತರ್ ಪೈವಳಿಕೆ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಕುಂಬಳೆ ಉಪಜಿಲ್ಲೆ ವಿದ್ಯಾಧಿಕಾರಿ ಯತೀಶ್ ಕುಮಾರ್ ರೈ ಶುಭಹಾರೈಸಿದರು. 

        ಕಾರ್ಯಕ್ರಮದಲ್ಲಿ ಉದಯ ಸಾರಂಗ ಪ್ರಾಸ್ತಾವಿಕವಾಗಿ ಮಾತನಾಡಿ ತಮ್ಮ ರಂಗಭೂಮಿಯ ಅನುಭವ, ಸಾಗಿಬಂದ ದಾರಿಗಳ ಬಗ್ಗೆ ಮಾತನಾಡಿ ಸ್ವಾಗತಿಸಿದರು. ಪತ್ರಕರ್ತ, ರಂಗ ಸಂಯೋಜಕ ಜಯ ಮಣಿಯಂಪಾರೆ ಕಾರ್ಯಕ್ರಮ ನಿರೂಪಿಸಿದರು. ಕಮಲಾಕ್ಷ ನಾಯಕ್ ನಲ್ಕ ವಂದಿಸಿದರು.

        : ಪುಸ್ತಕ ಬಿಡುಗಡೆ ವೇಳೆ ಖ್ಯಾತ ಜಾನಪದ ಕಲಾವಿದ ಶಂಕರ ಸ್ವಾಮಿಕೃಪಾ ಅವರು ದಲಿಯನ ವೇಶಗಳನ್ನು ಧರಿಸಿ ತೆಂಬೆರೆ ನುಡಿಸುತ್ತಾ ಸಭೆಯಲ್ಲಿ ಸಾಗಿಬಂದು ಜೋಳಿಗೆಯಿಂದ ನಾಟಕ ಸಂಕಲನ ಹೊತ್ತಗೆಯನ್ನು ತೆಗೆದು ರಾಧಾಕೃಷ್ಣ ಕೆ ಉಳಿಯತ್ತಡ್ಕರಿಗೆ ಹಸ್ತಾಂತರಿಸಿದ್ದು ಅತ್ಯಂತ ಮನೋಹರವಾಗಿ ಪ್ರಶಂಸೆಗೆ ಪಾತ್ರವಾಯಿತು.  



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries