ಕಾಸರಗೋಡು: ಫ್ಯಾಶನ್ ಗೋಲ್ಡ್ ಜುವೆಲ್ಲರಿ ಹೂಡಿಕೆ ವಂಚನೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಮಂಜೇಶ್ವರ ಶಾಸಕ ಎಂ.ಸಿ.ಕಮರುದ್ದೀನ್ ರಿಗೆ ಅನಾರೋಗ್ಯದ ಕಾರಣ ಕಾಸರಗೋಡು ಜಿಲ್ಲಾ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅಧಿಕ ಮಧುಮೇಹದಿಂದಾಗಿ ಅವರು ಆಯಾಸದಿಂದ ಬಳಲುತ್ತಿದ್ದರು. ರಿಮಾಂಡ್‍ನಲ್ಲಿರುವ ಎಂ.ಸಿ.ಕಮರುದ್ದೀನ್ ಅವರನ್ನು ಮಂಗಳವಾರ ಬೆಳಿಗ್ಗೆ 11 ಕ್ಕೆ ಕಾಞಂಗಾಡ್ ಜಿಲ್ಲಾ ಜೈಲಿನಿಂದ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ವೈದ್ಯಕೀಯ ಪರೀಕ್ಷೆಯಲ್ಲಿ ಹೆಚ್ಚಿನ ಮಟ್ಟದ ಮಧುಮೇಹ ಕಂಡುಬಂದಿದೆ. ಇಸಿಜಿ ಪರೀಕ್ಷೆಯನ್ನೂ ನಡೆಸಲಾಯಿತು. ಅವರ ಆರೋಗ್ಯ ಸ್ಥಿತಿ ತೃಪ್ತಿಕರವಾಗಿಲ್ಲದಿದ್ದರೆ ಅವರನ್ನು ಪರಿಯಾರಂ ವೈದ್ಯಕೀಯ ಕಾಲೇಜಿಗೆ ಸ್ಥಳಾಂತರಿಸಲಾಗುವುದು ಎಂದು ತಿಳಿದುಬಂದಿದೆ.
ಲೀಗ್ ನಾಯಕ, ಕಾಸರಗೋಡು ಶಾಸಕ ಎನ್.ಎ.ನೆಲ್ಲಿಕುನ್ನು ಮತ್ತು ಲೀಗ್ ಜಿಲ್ಲಾ ಖಜಾಂಚಿ ಕಲ್ಲಟ್ರ ಮಾಹಿನ್ ಹಾಜಿ ಅವರು ಆಸ್ಪತ್ರೆಗೆ ಧಾವಿಸಿದರು. ಏತನ್ಮಧ್ಯೆ, ಕಮರುದ್ದೀನ್ ಅವರನ್ನು ಬಂಧನದಿಂದ ಬಿಡುಗಡೆ ಮಾಡಲು ಕೋರಿ ಅರ್ಜಿಯನ್ನು ನ್ಯಾಯಾಲಯ ಮಂಗಳವಾರ ಕೇಳಿದೆ. ಅವರನ್ನು ಒಂದು ದಿನ ಪೆÇಲೀಸ್ ಕಸ್ಟಡಿಯಲ್ಲಿ ಬಿಟ್ಟುಕೊಡಲು ಆದೇಶಿಸಲಾಗಿದೆ. ಆಸ್ಪತ್ರೆಯಿಂದ ಹೊರಬಂದ ಬಳಿಕ ತನಿಖಾ ತಂಡವು ಶಾಸಕರನ್ನು ವಿಚಾರಣೆಗೆ ಕರೆದೊಯ್ಯಲಿದೆ.
ಈ ಮಧ್ಯೆ ಎಂ.ಸಿ ಕಮರುದ್ದೀನ್ ಜಾಮೀನು ಕೋರಿ ಹೈಕೋರ್ಟ್ ನ್ನು ಸಂಪರ್ಕಿಸಲು ನಿರ್ಧರಿಸಿದ್ದರು. ಬಂಧನದ ಮೊದಲ ಮೂರು ಪ್ರಕರಣಗಳಲ್ಲಿ ಜಾಮೀನು ಕೋರಿ ಹೈಕೋರ್ಟ್‍ನ್ನು ಸಂಪರ್ಕಿಸಲು ಕಮರುದ್ದೀನ್ ನಿರ್ಧರಿಸಿದ್ದರು. ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಮತ್ತು ಹೆಚ್ಚಿನ ಪ್ರಕರಣಗಳಲ್ಲಿ ಬಂಧನಗಳನ್ನು ದಾಖಲಿಸಲಾಗುತ್ತಿರುವುದರಿಂದ ಕಮರುದ್ದೀನ್ ಜಾಮೀನು ಅರ್ಜಿಯೊಂದಿಗೆ ಸುಪ್ರೀಂ ಕೋರ್ಟ್ ನ್ನು ಸಂಪರ್ಕಿಸುವರೆಂದು ತಿಳಿದುಬಂದಿದೆ.