ಕೊಚ್ಚಿ: ಚಿನ್ನ ಕಳ್ಳಸಾಗಣೆ ಪ್ರಕರಣದ ಆರೋಪಿಗಳಾದ ಸ್ವಪ್ನಾ ಸುರೇಶ್ ಮತ್ತು ಸರಿತ್ ಅವರು ನ್ಯಾಯಾಲಯದಲ್ಲಿ ಖಾಸಗಿಯಾಗಿ ಮಾತನಾಡಲು ಇಚ್ಚೆ ವ್ಯಕ್ತಪಡಿಸಿದ್ದಾರೆ. ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಹಾಜರುಪಡಿಸಿದಾಗ ಪೋಲೀಸರು ಅವರ ಸುತ್ತುವರೆದಿರುವ ಕಾರಣ ಇಬ್ಬರೂ ಮಾತನಾಡಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದ ಪ್ರಸಂಗ ಇಂದು ನಡೆಯಿತು.
ಮಾಹಿತಿಯನ್ನು ವಕೀಲರ ಮೂಲಕ ರವಾನಿಸುವಂತೆ ನ್ಯಾಯಾಲಯ ನಿರ್ದೇಶಿಸಿದೆ. ನ್ಯಾಯಾಲಯವು ಪ್ರತಿವಾದಿಗಳಿಗೆ ತಮ್ಮ ವಕೀಲರನ್ನು ಭೇಟಿಯಾಗಲು ಸಮಯವನ್ನು ನೀಡಿತು.
ಸುತ್ತಲೂ ಪೋಲೀಸರು ಇರುವುದರಿಂದ ಏನನ್ನೂ ಹೇಳಲಾಗುವುದಿಲ್ಲ- ಸ್ವಪ್ನಾ ಹಾಗೂ ಸರಿತ್ ರಿಂದ ನ್ಯಾಯಾಲಯದೊಂದಿಗೆ ಖಾಸಗಿ ವಿಚಾರಣೆಗೆ ಮನವಿ!
0
ನವೆಂಬರ್ 30, 2020
Tags