ತ್ರಿಶೂರ್: ಕೇರಳ ವರ್ಮಾ ಕಾಲೇಜಿನ ಪ್ರಾಂಶುಪಾಲ ಎ ಜಯದೇವನ್ ರಾಜೀನಾಮೆ ನೀಡಿದ್ದಾರೆ. ಸಿಪಿಎಂ ಮುಖಂಡ ಎ ವಿಜಯರಾಘವನ್ ಅವರ ಪತ್ನಿ ಉಪ ಪ್ರಾಂಶುಪಾಲರ ಹುದ್ದೆಗೆ ನೇಮಕಗೊಂಡಿದ್ದನ್ನು ವಿರೋಧಿಸಿ ರಾಜೀನಾಮೆ ನೀಡಿರುವುದಾಗಿ ಅವರು ತಿಳಿಸಿದ್ದಾರೆ. ಈ ಬಗ್ಗೆ ಜಯದೇವನ್ ಅವರು ಕೊಚ್ಚಿನ್ ದೇವಸ್ವಂ ಮಂಡಳಿಗೆ ಪತ್ರ ಸಲ್ಲಿಸಿರುವರು.
ವಿಜಯರಾಘವನ್ ಅವರ ಪತ್ನಿ ಪ್ರೊ. ಬಿಂದು ಅವರನ್ನು ಕೆಲವು ದಿನಗಳ ಹಿಂದೆ ಉಪ ಪ್ರಾಂಶುಪಾಲರನ್ನಾಗಿ ನೇಮಿಸಲಾಗಿತ್ತು. ಜೊತೆಗೆ ಪ್ರಾಂಶುಪಾಲರ ಅಧಿಕಾರವನ್ನು ಉಪ ಪ್ರಾಂಶುಪಾಲರಿಗೆ ಹಂಚಲಾಯಿತು. ಕೇರಳ ವರ್ಮದಲ್ಲಿ ಉಪ ಪ್ರಾಂಶುಪಾಲರ ಮೊದಲ ನೇಮಕಾತಿ ಇದಾಗಿದೆ. ಜಯದೇವನ್ ಅವರ ಸೇವಾವಧಿ ಇನ್ನೂ ಏಳುವರ್ಷಗಳ ಕಾಲವಿರುವಾಗಲೇ ಈ ರಾಜೀನಾಮೆ ಸಲ್ಲಿಕೆಯಾಗಿದೆ.
ಯುಜಿಸಿ ಮಾನದಂಡಗಳ ಪ್ರಕಾರ ಬಿಂದು ಅವರನ್ನು ಉಪ ಪ್ರಾಂಶುಪಾಲರನ್ನಾಗಿ ನೇಮಿಸಲಾಗಿದೆ ಎಂದು ದೇವಸ್ವಂ ವಿವರಿಸಿದರು. ಜಯದೇವನ್ ಅವರು ತಿಳಿಸಿರುವ ಪತ್ರದಲ್ಲಿ ಉಪ ಪ್ರಾಂಶುಪಾಲರನ್ನು ನೇಮಕಗೊಳಿಸುವಾಗ ತನ್ನಲ್ಲಿ ಯಾವೊಂದು ವಿಚಾರವನ್ನೂ ತಿಳಿಸದೆ ಮತ್ತು ಸಮಾಲೋಚಿಸದೆ ಏಕಪಕ್ಷೀಯ ನೆಲೆಯಲ್ಲಿ ನೇಮಿಸಲಾಯಿತು. ಎರಡು ಕೇಂದ್ರಗಳ ಅಧಿಕಾರ ಆಡಳಿತ ಬಿಕ್ಕಟ್ಟನ್ನು ಸೃಷ್ಟಿಸುತ್ತವೆ ಎಂದು ಜಯದೇವನ್ ಪತ್ರದಲ್ಲಿ ತಿಳಿಸಿದ್ದಾರೆ.