ಪತ್ತನಂತಿಟ್ಟು: ಶಬರಿಮಲೆ ಯಾತ್ರಾರ್ಥಿಗಳಿಗೆ ರಾಜ್ಯ ಸರ್ಕಾರ ಕೋವಿಡ್ ಭಾಗವಾಗಿ ಹೊಸ ಮಾರ್ಗಸೂಚಿಗಳನ್ನು ಹೊರಡಿಸಿದೆ. ಯಾತ್ರಿಕರು ಕೋವಿಡ್ ನಕಾರಾತ್ಮಕ ಪ್ರಮಾಣಪತ್ರವನ್ನು ಹೊಂದಿರಬೇಕು. ಆಗಮನಕ್ಕೆ 24 ಗಂಟೆಗಳ ಮೊದಲು ತೆಗೆದುಕೊಂಡ ಪ್ರಮಾಣಪತ್ರವನ್ನು ಕೈಯಲ್ಲಿರಿಸಿಕೊಂಡಿರಬೇಕು. ಮಾರ್ಗಸೂಚಿಯನ್ನು ಆರೋಗ್ಯ ಕಾರ್ಯದರ್ಶಿ ಹೊರಡಿಸಿದ್ದಾರೆ.
ಪ್ರತಿಜನಕ ಪರೀಕ್ಷೆಯು ನಕಾರಾತ್ಮಕವಾಗಿದ್ದರೂ, ಎಲ್ಲಾ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು. ಶಬರಿಮಲೆ ತಲುಪಿದಾಗ, ಪ್ರತಿ 30 ನಿಮಿಷಗಳಿಗೊಮ್ಮೆ ಕೈ ತೊಳೆಯಬೇಕು. ಹತ್ತುವ ಮತ್ತು ದೇವರ ದರ್ಶನಕ್ಕೆ ನಿಂತಾಗ ಎರಡು ಅಡಿ ಅಂತರವನ್ನು ಕಾಯ್ದುಕೊಳ್ಳಬೇಕು. ಮಾಸ್ಕ್ ಧರಿಸಬೇಕು. ಕೋವಿಡ್ ಗುಣಮುಖನಾಗಿದ್ದರೆ, ಅವರು ತಮ್ಮ ದೈಹಿಕ ಸಾಮಥ್ರ್ಯವನ್ನು ನಿರ್ಣಯಿಸಿ, ಆರೋಗ್ಯವಾಗಿರುವ ಬಗ್ಗೆ ಖಚಿತಪಡಿಸಿಕೊಂಡ ನಂತರವೇ ಶಬರಿಮಲೆ ಬೆಟ್ಟ ಏರಬೇಕು ಎಂದು ಸ|ಊಚಿಸಲಾಗಿದೆ.
ಇದೇ ವೇಳೆ ಯಾವುದೇ ರೀತಿಯ ರೋಗಲಕ್ಷಣಗಳನ್ನು ಹೊಂದಿದ್ದರೆ ತೀರ್ಥಯಾತ್ರೆಯಿಂದ ದೂರವಿರಬೇಕು. ನೀಲಕ್ಕಲ್ ಮತ್ತು ಪಂಪಾದಲ್ಲಿ ಜನಸಂದಣಿಯಾಗದಂತೆ ಗಮನಿಸಬೇಕು. ಈ ಮಾರ್ಗಸೂಚಿ ಯಾತ್ರಿಕರೊಂದಿಗೆ ಬರುವ ಚಾಲಕರು ಮತ್ತು ಸಹಾಯಕರಿಗೆ ಅನ್ವಯಿಸುತ್ತದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.