ಲಂಡನ್: ಕೊರೋನಾ ಸೋಂಕಿನ ಎರಡನೇ ಅಲೆಯಲ್ಲಿ ಪಾಸಿಟಿವ್ ಪ್ರಕರಣಗಳು ಗಮನಾರ್ಹ ಏರಿಕೆಯಾಗಿರುವ ಹಿನ್ನೆಲೆಯಲ್ಲಿ ಬ್ರಿಟನ್ ನಲ್ಲಿ ಮತ್ತೆ ಲಾಕ್ ಡೌನ್ ಜಾರಿಯಾಗುತ್ತಿದೆ.
ಗುರುವಾರದಿಂದ (ನವೆಂಬರ್ 5) ಲಾಕ್‌ಡೌನ್ ನಾಲ್ಕು ವಾರಗಳವರೆಗೆ ಜಾರಿಯಲ್ಲಿರುತ್ತದೆ ಎಂದು ಪ್ರಧಾನಿ ಬೋರಿಸ್ ಜಾನ್ಸನ್ ಹೇಳಿದ್ದಾರೆ. ಆದರೆ, ದೇಶದ ಶಿಕ್ಷಣ ಸಂಸ್ಥೆಗಳಿಗೆ ಲಾಕ್ ಡೌನ್ ನಿಂದ ವಿನಾಯಿತಿ ಕಲ್ಪಿಸಿದೆ.
ಕೊರೋನಾ ಪ್ರಕರಣಗಳು ವೇಗವಾಗಿ ಹೆಚ್ಚಾಗುತ್ತಿರುವ ಕಾರಣ ಸೋಂಕು ಪ್ರಸರಣ ತಡೆಯಲು ಅನ್ಯ ಮಾರ್ಗವಿಲ್ಲದೆ ಲಾಕ್‌ಡೌನ್ ವಿಧಿಸುತ್ತಿರುವುದಾಗಿ ಎಂದು ಪ್ರಧಾನಿ ಸಮರ್ಥಿಸಿಕೊಂಡಿದ್ದಾರೆ.
ಕೊರೋನಾ ಮೊದಲ ಅಲೆಗಿಂತ ಎರಡನೇ ಅಲೆಯಲ್ಲಿ ಸಾವಿನ ಸಂಖ್ಯೆ ಹೆಚ್ಚಾಗಬಹುದು ಎಂದು ವೈದ್ಯಕೀಯ ತಜ್ಞರ ಎಚ್ಚರಿಕೆ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಂಡಿದ್ದೇವೆ ಎಂದು ಅವರು ಹೇಳಿದ್ದಾರೆ.
ಸಮರಸ ಸುದ್ದಿಯ ನವೀನ ಮಾದರಿಯ ಯೂಟ್ಯೂಬ್ ಚಾನೆಲ್ ಗೆ ಓದುಗರ ಪ್ರತಿಕ್ರಿಯೆ ಮಹತ್ವಪೂರ್ಣದ್ದಾಗಿದ್ದು ಚಾನೆಲ್ ಚಂದಾದಾರರಾಗಿ (SUBSCRIBE) ಬೆಲ್ ಬಟನ್ ಅನುಮೋದಿಸುವ ಮೂಲಕ ನಮ್ಮನ್ನು ಪ್ರೋತ್ಸಾಹಿಸಬೇಕೆಂದು ವಿನಂತಿ.
ಸಮರಸ ಸುದ್ದಿ ಬಳಗ