ಕಾಸರಗೋಡು: ಕಾಸರಗೋಡು ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ ವತಿಯಿಂದ ಕೇರಳ ಪಿ.ಎಸ್.ಸಿ.ಯ ವಿವಿಧ ಸ್ಪರ್ಧಾ ಪರೀಕ್ಷೆಗಳಿಗೆ ಸಿದ್ಧತೆ ನಡೆಸುವ ಉದ್ಯೋಗಾರ್ಥಿಗಳಿಗಾಗಿ ಉಚಿತ ರೂಪದಲ್ಲಿ ಒಂದು ತಿಂಗಳ ಅವಧಿಯ ಸಮಗ್ರ ತರಬೇತಿ ನೀಡಲಾಗುವುದು. ಎಸ್.ಎಸ್.ಎಲ್.ಸಿ ತೇರ್ಗಡೆಹೊಂದಿರುವ ಜಿಲ್ಲೆಯ ಎಲ್ಲ ವಿಭಾಗಗಳ ಉದ್ಯೋಗಾರ್ಥಿಗಳು ಭಾಗವಹಿಸಬಹುದು. ಅರ್ಜಿಯನ್ನು ನೇರವಾಗಿ ಯಾ ತಪಾಲು ಮೂಲಕ ಅಥವಾ ಇ-ಮೇಲ್ ಮೂಲಕ ಕಾಸರಗೋಡು ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ(ದೂರವಾಣಿ ಸಂಖ್ಯೆ: 04994-255582.), ಹೊಸದುರ್ಗ ಟೌನ್ ಉದ್ಯೋಗ ವಿನಿಮಯ ಕೇಂದ್ರ (ದೂರವಾಣಿ ಸಂಖ್ಯೆ: 0467-2209068.), ಮಂಜೇಶ್ವರ ಬ್ಲೋಕ್ ಪಂಚಾಯತ್ ಕಚೇರಿಯಲ್ಲಿ ಚಟುವಟಿಕೆ ನಡೆಸುವ ಮಾಹಿತಿ ಮತ್ತು ಸಹಾಯಕ ಬ್ಯೂರೋಗಳಿಗೆ ನ.30ರ ಮುಂಚಿತವಾಗಿ ಕಳುಹಿಸಬೇಕು. ಇ-ಮೇಲ್ : deeksgd.emp.lbr@kerala.gov.in