ಕಾಸರಗೋಡು: ವಾಹನ ಚಾಲನೆ ಪರವಾನಗಿಗೆ ಅರ್ಜಿ ಸಲ್ಲಿಸುವ ಮಂದಿ ಕೋವಿಡ್ ತಪಾಸಣೆ ನಡೆಸಿ ನೆಗೆಟಿವ್ ಸರ್ಟಿಫಿಕೆಟ್ ಹಾಜರು ಪಡಿಸಿದರೆ ಮಾತ್ರ ಪರವಾಗಿ ಪರೀಕ್ಷೆ ನಡೆಸಬಹುದಾಗಿದೆ ಎಂದು ಜಿಲ್ಲಾ ಕೋವಿಡ್ ಕೋರ್ ಸಮಿತಿ ಸಭೆ ಆದೇಶಿಸಿದೆ.
ಮುಕ್ತ ಮೈದಾನಗಳಲ್ಲಿ ಆಟಕ್ಕೆ ಅನುಮತಿಯಿಲ್ಲ:
ಮುಕ್ತ ಮೈದಾನಗಳಲ್ಲಿ, ಬೀಚ್ ಗಳಲ್ಲಿ ಇತ್ಯಾದಿ ಕಡೆ ಜನಗುಂಪು ಸೇರಿ ಕೆಲವೆಡೆ ಆಟವಾಡುತ್ತಿರುವುದು ಸೆಕ್ಟರ್ ಮೆಜಿಸ್ಟ್ರೇಟ್ ಗಳ ಸಭೆಯಲ್ಲಿ ವರದಿಯಾಗಿದೆ ಎಂದು ಹೆಚ್ಚುವರಿ ದಂಡನಧಿಕಾರಿ ಎನ್.ದೇವಿದಾಸ್ ತಿಳಿಸಿದರು. ಟರ್ಫ್ ಗ್ರೌಂಡ್ ಗಳಲ್ಲಿ ಸಂಹಿತೆ ಪಾಲಿಸಿ, ಪ್ರೇಕ್ಷಕರಿಲ್ಲದೆ, ಗರಿಷ್ಠ 20 ಮಂದಿ ಮಾತ್ರ ಆಟವಾಡಲು ಅನುಮತಿಯಿದೆ. ಉಳಿದಂತೆ ಮುಕ್ತ ಮೈದಾನಗಳಲ್ಲಿ ಆಟವಾಡಲು ಅನುಮತಿಯಿಲ್ಲ ಎಂದು ಜಿಲ್ಲಧಿಕಾರಿ ತಿಳಿಸಿದರು. ಆದೇಶ ಉಲ್ಲಂಘಿಸುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಪೆÇಲೀಸ್ ವರಿಷ್ಟಾಧಿಕಾರಿಗೆ ಅವರು ಆದೆಶ ನೀಡಿದರು.
ಪ್ರವಾಸಿ ತಾಣಗಲಲ್ಲಿ ಕಡ್ಡಾಯವಾಗಿ ಕೋವಿಡ್ ಕಟ್ಟುನಿಟ್ಟುಗಳನ್ನು ಪಾಲಿಸುವಂತೆ ತಿಳಿಸಲಾಗಿದೆ. ಜಿಲ್ಲೆಯ ಅಂಗಡಿ, ಹೋಟೆಲ್ ಗಳ ಸಹಿತ ವ್ಯಾಪಾರ ಸಂಸ್ಥೆಗಳ ಚಟುವಟಿಕೆ ಸಮಯ ರಾತ್ರಿ 9 ಗಂಟೆ ವರೆಗೆ ಇರುವುದು. ತಳ್ಳುಗಾಡಿಗಳಲ್ಲಿ ಪಾರ್ಸೆಲ್ ಮಾತ್ರ ವಿತರಿಸಬಹುದು. ಈ ಸಮಸ್ಥೆಗಳ ಸಿಬ್ಬಂದಿ ಗ್ಲೌಸ್, ಮಾಸ್ಕ್ ಧರಿಸಬೇಕು, ಜನ ಗುಂಪು ಸೇರಕೂಡದು. ಆದೇಶ ಉಲ್ಲಂಘಿಸಿದಲ್ಲಿ ತಳ್ಳುಗಾಡಿಗಳ ತೆರವು ಸಹಿತ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಡಿ.ಶಿಲ್ಪಾ, ಉಪಜಿಲ್ಲಾಧಿಕಾರಿ ಡಿ.ಆರ್.ಮೇಘಶ್ರೀ, ಹೆಚ್ಚುವರಿ ದಂಡನಾಧಿಕಾರಿ ಎನ್.ದೇವಿದಾಸ್, ಜಿಲ್ಲಾ ವೈದ್ಯಧಿಕಾರಿ ಎ.ವಿ.ರಾಮದಾಸ್, ಜಿಲ್ಲಾ ವಾರ್ತಧಿಕಾರಿ ಮಧುಸೂದನನ್ ಎಂ. ಕೋರ್ ಸಮಿತಿ ಸದಸ್ಯರು ಉಪಸ್ಥಿತರಿದ್ದರು.