ಕಾಸರಗೋಡು: ಮಕ್ಕಳ ರಂಗಭೂಮಿ ತಜ್ಞ ಉದಯ ಸಾರಂಗ್ ಅವರು ರಚಿಸಿದ "ದಲಿಯನ ಡೋಲು" ಎಂಬ ನಾಟಕ ಸಂಕಲನದ ಕೃತಿ ಬಿಡುಗಡೆ ಕಾರ್ಯಕ್ರಮ ಇಂದು(ನ.8 ಕ್ಕೆ) ಅಪರಾಹ್ನ 3ಕ್ಕೆ ಕಾಸರಗೋಡಿನ ಪಿಲಿಕುಂಜೆ ಸಾರ್ವಜನಿಕ ಗ್ರಂಥಾಲಯದಲ್ಲಿ ಜರಗಲಿದೆ.
ಕಾಸರಗೋಡಿನ ಸಾಂಸ್ಕøತಿಕ ವೇದಿಕೆಯಾದ ರಂಗ ಕುಟೀರ ಆಯೋಜಿಸುವ ಕಾರ್ಯಕ್ರಮದಲ್ಲಿ ಕವಿ,ಪತ್ರಕರ್ತ ರಾಧಾಕೃಷ್ಣ ಕೆ.ಉಳಿಯತ್ತಡ್ಕ ಕೃತಿ ಬಿಡುಗಡೆಗೊಳಿಸುವರು. ಕೇರಳ ತುಳು ಆಕಾಡೆಮಿ ಅಧ್ಯಕ್ಷ, ರಂಗ ನಿರ್ದೇಶಕ ಎಂ.ಉಮೇಶ್ ಸಾಲಿಯಾನ್ ಸಭೆಯ ಅಧ್ಯಕ್ಷತೆ ವಹಿಸುವರು. ಜಿಲ್ಲಾ ಲೈಬ್ರರಿ ಕೌನ್ಸಿಲ್ ಸದಸ್ಯ ಆಹಮ್ಮದ್ ಹುಸೈನ್ ಮಾಸ್ತರ್ ಮುಖ್ಯ ಅತಿಥಿಗಳಾಗಿರುವರು. ಕುಂಬಳೆ ಉಪಜಿಲ್ಲಾ ವಿದ್ಯಾಧಿಕಾರಿ ಯತೀಶ್ ಕುಮಾರ್ ರೈ ಶುಭಾಶಂಸನೆಗೈಯುವರು.