ತಿರುವನಂತಪುರ: ರಾಜ್ಯ ಬಿಜೆಪಿಯಲ್ಲಿ ರಾಜ್ಯಾಧ್ಯಕ್ಷರ ವಿರುದ್ದ ಅಸಂತೃಪ್ತ ಮುಖಂಡರು ಜೊತೆಯಾಗುತ್ತಿರುವ ಬೆನ್ನಿಗೇ ಬಿಡಿಜೆಎಸ್ ಅಧ್ಯಕ್ಷ ತುಷಾರ್ ವೆಲ್ಲಪಳ್ಳಿ ಕೆ.ಸುರೇಂದ್ರನ್ ವರನ್ನು ಬೆಂಬಲಿಸಿ ರಂಗಕ್ಕಿಳಿದಿದ್ದು ಕುತೂಹಲ ಮೂಡಿಸಿದೆ. ಬಿಜೆಪಿ ಸಹಿತ ಬಿಡಿಜೆಎಸ್ ಸದಸ್ಯರು ಕೆಲವರು ನಿನ್ನೆ ದೆಹಲಿಯಲ್ಲಿ ಬಿಜೆಪಿ ಮುಖಂಡರನ್ನು ಭೇಟಿಯಾದರು ಎನ್ನಲಾಗುತ್ತಿದೆ.
ತುಷರ್ ವೆಲ್ಲಾಪಳ್ಳಿ ಅವರು ಸುರೇಂದ್ರನ್ ಅವರನ್ನು ಬೆಂಬಲಿಸಿ ದೆಹಲಿಗೆ ತೆರಳಿರುವರು. ಏತನ್ಮಧ್ಯೆ, ದೆಹಲಿಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಮತ್ತು ಸಂಘಟನೆಯ ಉಸ್ತುವಾರಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅವರೊಂದಿಗೆ ಚರ್ಚೆ ನಡೆಸಿದ್ದೇನೆ ಎಂದು ತುಷಾರ್ ವೆಲ್ಲಾಪಳ್ಳಿ ಹೇಳಿದ್ದಾರೆ.
ಕೇರಳದ ಪ್ರಸ್ತುತ ರಾಜಕೀಯ ಪರಿಸ್ಥಿತಿಯನ್ನು ಅವರು ವಿವರವಾಗಿ ಚರ್ಚಿಸಿದ್ದಾರೆ ಎಂದು ತುಷಾರ್ ಅವರು ಫೇಸ್‍ಬುಕ್ ಪೆÇೀಸ್ಟ್‍ನಲ್ಲಿ ತಿಳಿಸಿದ್ದಾರೆ. ಕೆ ಸುರೇಂದ್ರನ್ ರಾಜ್ಯ ಅಧ್ಯಕ್ಷರಾಗುವುದರೊಂದಿಗೆ ಬಿಜೆಪಿಯಲ್ಲಿ ಹೊಸ ಜಾಗೃತಿ ಮತ್ತು ಸಂಘಟನಾತ್ಮಕ ಬಲ ಉಂಟಾಗಿದೆ ಎಂದು ತುಷರ್ ಹೇಳಿದರು. ಮುಂದಿನ ವರ್ಷಗಳಲ್ಲಿ ಇದು ಒಂದು ದೊಡ್ಡ ಶಕ್ತಿಯಾಗಲಿದೆ ಎಂದು ಅವರು ಆಶಾವಾದ ವ್ಯಕ್ತಪಡಿಸಿದರು.
'ಎಡ-ಬಲ ರಾಜಕೀಯ ಹೊಂದಾಣಿಕೆಗಳನ್ನು ನೋಡಿ ಜನರು ಬೇಸತ್ತಿದ್ದಾರೆ. ಈ ಹೊಂದಾಣಿಕೆಗಳ ಭಾಗವಾಗಿ, ವಿರೋಧವನ್ನು ರಾಜಕೀಯವಾಗಿ ಬಳಸದೆ ನಿಷ್ಕ್ರಿಯಗೊಳಿಸಲಾಗಿದೆ. ಎಷ್ಟೋ ದುರ್ವಾಸನೆ ಬೀರುವ ಭ್ರಷ್ಟಾಚಾರ ಹಗರಣಗಳು ಕೇರಳದಲ್ಲಿ ಪುರಾವೆಗಳೊಂದಿಗೆ ಹೊರಬಂದಿವೆ ಎಂದು ತುಷಾರ್ ವೆಲ್ಲಾಪಳ್ಳಿ ಹೇಳಿದರು.
ರಾಜ್ಯ ಬಿಜೆಪಿಯಲ್ಲಿ ಶೋಭಾ ಸುರೇಂದ್ರನ್, ಪಿಎಂ ವೇಲಾಯುಧನ್ ಸೇರಿದಂತೆ ಹಿರಿಯ ನಾಯಕರು ಕೆ ಸುರೇಂದ್ರನ್ ವಿರುದ್ಧ ಕತ್ತಿಮಸೆದಿದ್ದಾರೆ. ಇದರ ಬೆನ್ನಲ್ಲೇ, 24 ರಾಜ್ಯ ನಾಯಕರು ಸಹಿ ಮಾಡಿದ ದೂರನ್ನು ಕೇಂದ್ರ ನಾಯಕತ್ವಕ್ಕೆ ಸಲ್ಲಿಸಲಾಗಿದೆ. ಅದರ ಜೊತೆಗೆ ಸುರೇಂದ್ರನ್ ರಾಜ್ಯ ಅಧ್ಯಕ್ಷರಾಗಿರುವ ಇಂದು ಬಿಜೆಪಿ ಮತ್ತು ಅದರ ಮಿತ್ರಪಕ್ಷಗಳಲ್ಲಿ ಪುನರುಜ್ಜೀವನ ಕಂಡುಬಂದಿದೆ ಎಂದು ಹೇಳಿಕೆಯೊಂದಿಗೆ ತುಷಾರ್ ವೆಲ್ಲಾಪಳ್ಳಿ ಪ್ರಕರಣ ಹೊಸ ದಿಶೆಯತ್ತ ಸಾಗುವ ಮುನ್ಸೂಚನೆ ನೀಡಿದರು.