ಬೆಂಗಳೂರು: ಬೆಂಗಳೂರು ಮಾದಕವಸ್ತು ಪ್ರಕರಣದಲ್ಲಿ ಮೊಹಮ್ಮದ್ ಅನೂಪ್ ವಿರುದ್ಧ ಜಾರಿ ನಿರ್ದೇಶನಾಲಯ ನ್ಯಾಯಾಲಯದಲ್ಲಿ ವರದಿ ಸಲ್ಲಿಸಿದೆ. ಇಡಿ ವರದಿಯ ಪ್ರಕಾರ ಮೊಹಮ್ಮದ್ ಅನೂಪ್ ನಿರಂತರವಾಗಿ ಮಾದಕವಸ್ತು ವ್ಯಾಪಾರ ಮಾಡುತ್ತಿರುವುದನ್ನು ಒಪ್ಪಿಕೊಂಡಿರುವುದಾಗಿ ತಿಳಿಸಲಾಗಿದೆ. ಬಿನೀಶ್ ಕೊಡಿಯೇರಿಯೊಂದಿಗೆ ನಿಕಟನಾಗಿ ಆತನೂ ಈ ವಹಿವಾಟಲ್ಲಿ ಕೈಜೋಡಿಸಿರುವುದಾಗಿ ಅನೂಪ್ ತಪೆÇ್ಪಪ್ಪಿಕೊಂಡಿದ್ದಾನೆ ಎಂದು ಇಡಿ ನ್ಯಾಯಾಲಯಕ್ಕೆ ತಿಳಿಸಿದೆ.
ಇಡಿ ವರದಿಯ ಪ್ರಕಾರ, ಬಿನೀಶ್ ನಿಯಮಿತವಾಗಿ ದೊಡ್ಡ ಮೊತ್ತದ ಹಣವನ್ನು ಅನೂಪ್ ಅವರ ಖಾತೆಗೆ ವರ್ಗಾಯಿಸಿದ್ದನು. ಅನೂಪ್ ಬಿನೀಶ್ ಅವರ ಆದೇಶದ ಮೇರೆಗೆ ನಡೆದುಕೊಂಡಿದ್ದಾನೆ ಮತ್ತು ಪಾಲುದಾರ ಕಂಪನಿಯಿಂದ ಅನೂಪ್ ತೆಗೆದುಕೊಂಡ ಸಾಲ ಮತ್ತು ಇತರ ವಿಷಯಗಳ ಬಗ್ಗೆ ತನಿಖೆ ನಡೆಸಬೇಕು ಎಂದು ಇಡಿ ಶನಿವಾರ ನ್ಯಾಯಾಲಯದಲ್ಲಿ ಸಲ್ಲಿಸಿದ ವರದಿಯಲ್ಲಿ ತಿಳಿಸಿದೆ.