ಕಾಸರಗೋಡು: ಚುನಾವಣೆಯಲ್ಲಿ ರಿಸರ್ವ್ ಪೋಲಿಂಗ್ ಡ್ಯೂಟಿಗೆ ನೇಮಕಗೊಂಡಿರುವ ಸಿಬ್ಬಂದಿಯ ತರಬೇತಿ ದಿನಾಂಕಗಳಲ್ಲಿ ಬದಲಾವಣೆ ನಡೆಸಲಾಗಿದೆ ಎಂದು ಜಿಲ್ಲಾ ಚುನಾವಣೆ ಅಧಿಕಾರಿಯಾಗಿರುವ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ತಿಳಿಸಿರುವರು.
ರಿಸರ್ವ್ ಪೋಲಿಂಗ್ ಡ್ಯೂಟಿಗೆ ನೇಮಕಗೊಂಡಿರುವ ಪ್ರಿಸೈಡಿಂಗ್ ಆಪೀಸರ್ ಗಳಿಗೆ, ಫಸ್ಟ್ ಪೋಲಿಂಗ್ ಆಫೀಸರ್ ಗಳಿಗೆ ಮಾತ್ರ ಇಲ್ಲಿನ ಬದಲಾವಣೆ ಅನ್ವಯವಾಗಲಿದೆ. ಈ ಸಿಬ್ಬಂದಿ ಇ-ಡ್ರಾಪ್ ಸೈಟ್ ಪರಿಶೀಲಿಸಬೇಕು. ತರಬೇತಿ ದಿನಾಂಕದಲ್ಲಿ ಬದಲಾವಣೆಗಳಿದ್ದಲ್ಲಿ ಅದಕ್ಕೆ ತಕ್ಕಂತೆ ನಿಗದಿತ ದಿನಾಂಕ, ಜಾಗ, ಸಮಯದಲ್ಲಿ ತರಬೇತಿ ತರಗತಿಗಳಲ್ಲಿ ಹಾಜರಾಗುವಂತೆ ಜಿಲ್ಲಾಧಿಕಾರಿ ತಿಳಿಸಿರುವರು.