ವಾಷಿಂಗ್ಟನ್: ವಿಶ್ವದೆಲ್ಲೆಡೆ ಈಗ ಎಲ್ಲಿ ನೋಡಿದರೂ ಅಮೆರಿಕಾ ಅಧ್ಯಕ್ಷೀಯ ಚುನಾವಣೆ ಬಗ್ಗೆಯೇ ಚರ್ಚೆಯಾಗುತ್ತಿದೆ. ಈ ಚುನಾವಣೆಯಲ್ಲಿ, ಹಲವು ಜನರು ಮತದಾನ ಕೇಂದ್ರಗಳಿಗೆ ತೆರಳಿ ಮತ ಚಲಾಯಿಸಿದ್ದಾರೆ. ಕೆಲ ಮಂದಿ ಮೇಲ್-ಇನ್ ಬ್ಯಾಲೆಟ್ ವಿಧಾನ ಬಳಸಿದ್ದಾರೆ. ಆದರೆ, ಈ ಚುನಾವಣೆಯಲ್ಲಿ ಬಾಹ್ಯಾಕಾಶದಿಂದಲೂ ಮತ ಚಲಾಯಿಸಬಹುದು ಎಂಬುದು ಗೊತ್ತೆ?
ತಂತ್ರಜ್ಞಾನದ ಈ ಯುಗದಲ್ಲಿ, ಬಾಹ್ಯಾಕಾಶದಿಂದಲೂ ಜನರು ತಮ್ಮ ಮತದಾನದ ಹಕ್ಕು ಚಲಾಯಿಸಲು ಇಲ್ಲಿನ ಕಾನೂನುಗಳು ಅವಕಾಶ ಮಾಡಿಕೊಡುತ್ತವೆ.ಅಮೆರಿಕಾದ ಬಾಹ್ಯಕಾಶ ಸಂಶೋಧನಾ ಸಂಸ್ಥೆ (ನಾಸಾ)ದ ಗಗನ ಯಾತ್ರಿ ಕೇಟ್ ರೂಬಿನ್ಸ್ ತಮ್ಮ ಮತವನ್ನು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ (ಐ ಎಸ್ ಎಸ್)ದ ಪೆÇೀಲಿಂಗ್ ಬೂತ್ ನಿಂದ ಚಲಾಯಿಸಿದ್ದಾರೆ. ತೇಲಾಡುವ ಸ್ಥಿತಿಯಲ್ಲಿ ಅವರು ಮತ ಚಲಾಯಿಸುತ್ತಿರುವುದು ಇದು ಎರಡನೇ ಬಾರಿ ಎಂಬುದು ವಿಶೇಷ. ಅವರು 2016 ರಲ್ಲಿ ಐಎ???ಸ್ ನಲ್ಲಿ ಇದ್ದಾಗಲೂ ಇದೇ ರೀತಿಯಲ್ಲಿ ಮತದಾನದ ಹಕ್ಕನ್ನು ಬಳಸಿಕೊಂಡಿದ್ದರು. ಅಂತರಿಕ್ಷ ಕೇಂದ್ರದಿಂದ ಅಮೆರಿಕದ ಗಗನಯಾತ್ರಿಗಳು ತಮ್ಮ ಮತದಾನ ಹಕ್ಕು ಚಲಾಯಿಸಲಿ ಎಂದು 1990ರಲ್ಲಿ ಟೆಕ್ಸಾಸ್ ಸರ್ಕಾರ ಕಾನೂನು ರೂಪಿಸಿತ್ತು.1997ರಿಂದ ಅಮೆರಿಕಾ ಗಗನ ಯಾತ್ರಿಗಳು ತಮ್ಮ ಮತದಾನ ಹಕ್ಕುಗಳನ್ನು ಬಳಸಿಕೊಳ್ಳುತ್ತಿದ್ದಾರೆ.
ನಾಸಾ ಗಗನಯಾತ್ರಿ ಡೇವಿಡ್ ವುಲ್ಫ್ 1997 ರಲ್ಲಿ ಮಿರ್ ಬಾಹ್ಯಾಕಾಶ ಕೇಂದ್ರದಿಂದ ಮತ ಚಲಾಯಿಸಿ, ಬಾಹ್ಯಾಕಾಶದಿಂದ ಮತ ಚಲಾಯಿಸಿದ ಮೊದಲ ಅಮೆರಿಕನ್ ಎಂಬ ದಾಖಲೆ ನಿರ್ಮಿಸಿದ್ದಾರೆ. ಆದರೆ, ಮತ ಚಲಾಯಿಸುವ ಮೊದಲು ಗಗನ ಯಾತ್ರಿಕರು ಇದಕ್ಕಾಗಿ ನೋಂದಾಯಿಸಿಕೊಳ್ಳಬೇಕು. ಈ ಪ್ರಕ್ರಿಯೆ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ನಾಸಾ ತನ್ನ ಅಧಿಕೃತ ವೆಬ್‍ಸೈಟ್‍ನಲ್ಲಿ ವಿವರಿಸಿದೆ.