ಎರ್ನಾಕುಳಂ: ಕೋವಿಡ್ ವ್ಯಾಪಕತೆಯ ಮಧ್ಯೆ ರಾಜ್ಯ ಸ್ಥಳೀಯಾಡಳಿತ ಸಂಸ್ಥೆಗಳ ಚುನಾವಣೆಗೆ ದಿನಗಣನೆ ಆರಂಭಗೊಂಡಿದ್ದು ರಾಜಕೀಯ ಪಕ್ಷಗಳ ಸ್ಪರ್ಧಾಗಳು, ಪಕ್ಷಗಳ ಕಾರ್ಯಕರ್ತರು ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಗಳನ್ನು ಆರೋಗ್ಯ ಇಲಾಖೆ ಸ್ಪಷ್ಟಪಡಿಸಿದೆ. ಈ ಬಗ್ಗೆ ನಿಖರ ಜಾಗೃತಿಗಾಗಿ ವಿಸ್ಕøತ ಮಾಹಿತಿ ಲೇಖನ ಆನ್‍ಲೈನ್‍ನಲ್ಲಿ ಲಭ್ಯವಾಗುವಂತೆ ಮಾಡಲು ಆರೋಗ್ಯ ಇಲಾಖೆ ಹಾಗೂ ಚುನಾವಣಾ ಆಯೋಗ ಉತ್ಸುಕತೆ ವ್ಯಕ್ತಪಡಿಸಿದೆ.
ಸಾಮಾಜಿಕ ಮಾಧ್ಯಮಗಳ ಮೂಲಕ ನೋಟಿಸ್ ಮತ್ತು ಕರಪತ್ರಗಳ ಸಾಕಷ್ಟು ಪ್ರಚಾರಕ್ಕೆ ತರಬಹುದಾಗಿದ್ದು ಮುದ್ರಿಸಿದ ಕರಪತ್ರ, ನೋಟೀಸ್ ಗಳನ್ನು ಬಳಸದಂತೆ ಚುನಾವಣಾ ಆಯೋಗ ನಿರ್ದೇಶಿಸಿದೆ. ಕರಪತ್ರಗಳು ಅಥವಾ ನೋಟಿಸ್‍ಗಳನ್ನು ಸ್ವೀಕರಿಸಿದ ತಕ್ಷಣ ಕೈಗಳನ್ನು ಸೋಪ್ ಮತ್ತು ಸ್ಯಾನಿಟೈಜರ್‍ನಿಂದ ಸ್ವಚ್ಚಗೊಳಿಸಬೇಕು ಎಂದು ಆರೋಗ್ಯ ಇಲಾಖೆ ತಿಳಿಸಿದೆ.
ಇತರ ಸಲಹೆಗಳು: "ಅಭ್ಯರ್ಥಿ ಸೇರಿದಂತೆ ಗರಿಷ್ಠ ಐದು ಜನರಿಗೆ ಮಾತ್ರ ಮನೆಮನೆ ಭೇಟಿ ನೀಡಲು ಅನುಮತಿ ಇದೆ. ಮನೆ ಪ್ರವೇಶಿಸದೆ ಹೊರಗಿನಿಂದ ಮತ ಕೇಳಬೇಕು. ಅಭ್ಯರ್ಥಿಗಳು ಮತ್ತು ತಂಡದ ಸದಸ್ಯರು ಮೂಗು ಮತ್ತು ಬಾಯಿಯನ್ನು ಮುಚ್ಚಿಕೊಳ್ಳಲು ಸರಿಯಾಗಿ ಮಾಸ್ಕ್ ಧರಿಸಬೇಕು ಮತ್ತು ಮಾತನಾಡುವಾಗ ಎರಡು ಮೀಟರ್ ಅಂತರ ಕಾಯ್ದುಕೊಳ್ಳಬೇಕು ಎಮದು ನಿರ್ದೇಶಿಸಲಾಗಿದೆ.
"ಜ್ವರ, ಕೆಮ್ಮು ಮತ್ತು ನೋಯುತ್ತಿರುವ ಗಂಟಲಿನಂತಹ ರೋಗಲಕ್ಷಣಗಳನ್ನು ಹೊಂದಿರುವ ಜನರು ಯಾವುದೇ ಕಾರಣಕ್ಕೂ ಪ್ರಚಾರ ಕಾರ್ಯಕ್ಕಿಳಿಯಬಾರದು. ಇಂತಹ ರೋಗಲಕ್ಷಣಗಳನ್ನು ಹೊಂದಿರುವ ಮನೆಯವರು ಕೂಡಾ ಮತ ಯಾಚಿಸಲು ಬಂದವರನ್ನು ಭೇಟಿಯಾಗಬಾರದು.
ಕೋವಿಡ್ ಪರೀಕ್ಷಾ ಫಲಿತಾಂಶಗಳು ಋಣಾತ್ಮಕವಾದ ಬಳಿಕ ಅಭ್ಯರ್ಥಿಯು ನೇರವಾಗಿ ರೋಗಿಗಳ ಮನೆಗಳಿಗೆ ಅಥವಾ ಸಂಪರ್ಕತಡೆಗೆ ಹೋಗಬಾರದು.
"ಸಾರ್ವಜನಿಕ ಸಭೆಗಳು ಮತ್ತು ಕುಟುಂಬ ಕೂಟಗಳನ್ನು ಕೋವಿಡ್ ನಿಯಮಗಳಿಗೆ ಅನುಸಾರವಾಗಿ ಮಾತ್ರ ನಡೆಸಬೇಕು. ಸಭೆ ನಡೆಯುವ ಸ್ಥಳಗಳಲ್ಲಿ ನೈರ್ಮಲ್ಯ, ಸಾಬೂನು ಮತ್ತು ನೀರನ್ನು ಒದಗಿಸಬೇಕು. ಸಾಮಾಜಿಕ ದೂರವನ್ನು ಕಾಯ್ದುಕೊಳ್ಳಬೇಕು"ಎಂದು ಕಠಿಣವಾಗಿ ನಿರ್ದೇಶನ ನೀಡಲಾಗಿದೆ.