ಬದಿಯಡ್ಕ: ತ್ರಿಸ್ತರ ಪಂಚಾಯಿತಿ ಚುನಾವಣಾ ಕಾವು ಏರುತ್ತಿದ್ದು, ಬದಿಯಡ್ಕ ಗ್ರಾಮಪಂಚಾಯಿತಿಯ ಹಾಲಿ ಅಧ್ಯಕ್ಷ, ಕಾಂಗ್ರೆಸ್ಸ್ ನ ಹಿರಿಯ ಮುಖಂಡರಾಗಿದ್ದು ಇದೀಗ ಬಿಜೆಪಿಗೆ ಪಕ್ಷಾಂತರಗೊಂಡಿರುವ ಕೆ.ಎನ್.ಕೃಷ್ಣ ಭಟ್ ಅವರು 14ನೇ ಪಟ್ಟಾಜೆ ವಾರ್ಡು ಪ್ರತಿನಿಧಿಸಲು ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯಾಗಿ ಬೆಂಬಲಿಗರೊಂದಿಗೆ ಚುನಾವಣಾಧಿಕಾರಿಗೆ ನಾಮಪತ್ರ ಸಲ್ಲಿಸಿದರು.
ಮಧೂರು ಶ್ರೀ ಕ್ಷೇತ್ರ, ಪೆರಡಾಲ ಶ್ರೀ ಉದನೇಶ್ವರ ದೇವಸ್ಥಾನ, ಚುಕ್ಕಿನಡ್ಕ ಶ್ರೀ ಅಯ್ಯಪ್ಪ ಭಜನಾ ಮಂದಿರಗಳಿಗೆ ತೆರಳಿ ಪ್ರಾರ್ಥನೆ ಸಲ್ಲಿಸಿದ್ದರು. ಹಾಗೂ ವಾರ್ಡಿನ ಹಿರಿಯ ಮತದಾರರನ್ನು ಭೇಟಿಯಾಗಿ ಆಶೀರ್ವಾದ ಪಡೆದರು.