ಬದಿಯಡ್ಕ: ಕೇರಳ ಮತ್ತು ಕೇಂದ್ರ ಸರ್ಕಾರದ ವ್ಯಾಪಾರಿ ವಿರುದ್ದ ಜಿ.ಎಸ್.ಟಿ. ಗೊಂದಲ, ಕೋವಿಡ್ ಹೆಸರಲ್ಲಿ ವ್ಯಾಪಾರಿಗಳಿಗೆ ತೊಂದರೆ ನೀಡುವುದು, ವ್ಯಾಟ್ ಹೆಸರಲ್ಲಿ ಗೊಂದಲ ಸೃಷ್ಟಿಸುವುದು, ರಾಷ್ಟ್ರೀಯ ಹೆದ್ದಾರಿ ಅಗಲೀಕರಣದ ಭಾಗವಾಗಿ ಒಕ್ಕಲೆಬ್ಬಿಸಿದ ವ್ಯಾಪಾರಿಗಳಿಗೆ ಘೋಶಿಸಿದ್ದ ಪರಿಹಾರ ನೀಡದಿರುವುದು ಮೊದಲಾದ ವ್ಯಾಪಾರಿ ದ್ರೋಹ ಕ್ರಮಗಳಿಗೆ ಎದುರಾಗಿ ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿ ನೀರ್ಚಾಲು ಘಟಕದ ನೇತೃತ್ವದಲ್ಲಿ ಮಂಗಳವಾರ ನೀರ್ಚಾಲು ಪೇಟೆಯಲ್ಲಿ ಪ್ಲೇ ಕಾರ್ಡ್ ಪ್ರತಿಭಟನೆ ನಡೆಯಿತು.
ನೀರ್ಚಾಲು ಘಟಕದ ಅಧ್ಯಕ್ಷ ಎಂ.ಸುಬ್ರಹ್ಮಣ್ಯ ಭಟ್ ಅವರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಪ್ರಧಾನ ಕಾರ್ಯದರ್ಶಿ ರವಿ ನೀರ್ಚಾಲು, ಉಪಾಧ್ಯಕ್ಷ ನಾರಾಯಣ ಇ., ಖಜಾಂಜಿ ಪ್ರಶಾಂತ್ ಪೈ ಸಹಿತ ಸದಸ್ಯರು ಪಾಲ್ಗೊಂಡರು. ಮುಷ್ಕರಕ್ಕೆ ಹೋಟೆಲ್ ಮತ್ತು ರೆಸ್ಟೋರೆಂಟ್ ಮಾಲಕರ ಸಂಘಟನೆಯೂ ಬೆಂಬಲ ನೀಡಿತ್ತು.