ಕಾಸರಗೋಡು: ಕೋವಿಡ್ ಪ್ರತಿರೋಧ ನಡೆಸುವ ನಿಟ್ಟಿನಲ್ಲಿ ಕಾಸರಗೋಡು ಐ.ಇ.ಸಿ.ಸಂಚಾಲನ ಸಮಿತಿ ಜಿಲ್ಲೆಯಲ್ಲಿ ಆರಂಭಿಸಿರುವ ಕೋವಿಡ್ ಟೆಸ್ಟ್ ಚಾಲೆಂಜನ್ನು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ವಹಿಸಿಕೊಂಡಿದ್ದಾರೆ.
ಡಿ.14 ವರೆಗೆ ಮುಂದುವರಿಯುವ ಕೋವಿಡ್ ಟೆಸ್ಟ್ ಚಾಲೆಂಜನ್ನು ಮೊದಲ ದಿನ ಹೆಚ್ಚುವರಿ ದಂಡನಾಧಿಕಾರಿ ಎನ್. ದೇವಿದಾಸ್ ಅವರು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅವರಿಗೆ ಚಾಲೆಂಜ್ ನಡೆಸಿದ್ದರು. ಈ ಚಾಲೆಂಜ್ ವಹಿಸಿಕೊಂಡ ಜಿಲ್ಲಾಧಿಕಾರಿ ಶುಕ್ರವಾರ ಬೆಳಗ್ಗೆ ಕಲೆಕ್ಟರೇಟ್ ನಲ್ಲಿ ಆಂಟಿಜೆನ್ ಟೆಸ್ಟ್ ಗೆ ಒಳಗಾದರು. ಟೆಸ್ಟ್ ಗೆ ಒಳಗಾಗುತ್ತಿರುವ ಫೆÇಟೋದ ಜೊತೆಗೆ "ನಾನು ಕೋವಿಡ್ ಟೆಸ್ಟ್ ಗೆ ಒಳಗಾದೆ. ನೀವು?" ಎಂದು ಬರೆದು#ಛಿoviಜ ಣಣse ಛಿhಚಿಟಟeಟಿgeಎಂಬ ಟಾಗ್ ಲೈನ್ ನಲ್ಲಿ ಜಿಲ್ಲಾಧಿಕಾರಿ ಅವರ ಅಧಿಕೃತ ಫೇಸ್ ಬುಕ್ ಪೇಜ್ ನಲ್ಲಿ ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಡಿ.ಶಿಲ್ಪಾ ಅವರಿಗೆ ಚಾಲೆಂಜ್ ಮಾಡಿದರು. ಮುಂದಿನ ದಿನಗಳಲ್ಲಿ ಜಿಲ್ಲೆಯ ಹಿರಿಯ ಅಧಿಕಾರಿಗಳು, ಸಾಮಾಜಿಕ, ಸಾಂಸ್ಕøತಿಕ ರಂಗಗಳ ಹಿರಿಯರು ಚಾಲೆಂಜ್ ವಹಿಸಿಕೊಳ್ಳುವ ನಿರೀಕ್ಷೆಯಿದೆ. ಟೆಸ್ಟ್ ನ ಸಂಖ್ಯೆ ಹೆಚ್ಚಳಗೊಳಿಸುವ ಉದ್ದೇಶದಿಂದ ಕೋವಿಡ್ ಟೆಸ್ಟ್ ಚಾಲೆಂಜ್ ಗೆ ಕಾಸರಗೋಡು ಜಿಲ್ಲೆಯಲ್ಲಿ ನಾಂದಿಯಾಗಿದೆ. ಕೋವಿಡ್ ಟೆಸ್ಟ್ ಚಾಲೆಂಜ್ ಎಂಬ ಹಾಷ್ ಟಾಗ್ ನಲ್ಲಿ ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ಸಾರ್ವಜನಿಕರು ಚಾಲೆಂಜ್ ನಲ್ಲಿ ಭಾಗಿಗಳಾಗಬಹುದು.