ಬೆಂಗಳೂರು: ತನಿಖಾಧಿಕಾರಿಗಳು ವಿಚಾರಣೆಯ ಹೆಸರಲ್ಲಿ ತಾನು ಮಾಡದ ತಪ್ಪುಗಳನ್ನು ಒಪ್ಪುವಂತೆ ಒತ್ತಡ ಹಾಕುತ್ತಿದ್ದಾರೆ ಎಂದು ಜಾರಿ ನಿರ್ದೇಶನಾಲಯದ ವಿಚಾರ ಎದುರಿಸುತ್ತಿರುವ ಬಿನೀಶ್ ಕೊಡಿಯೇರಿ ಆರೋಪಿಸಿರುವರು.
ಇದೇ ವೇಳೆ ಬಿನೀಶ್ ಅವರನ್ನು ಭೇಟಿಯಾಗಲು ಆಸ್ಪತ್ರೆಗೆ ಆಗಮಿಸಿದ್ದ ಸಹೋದರ ಬಿನೋಯ್ ಕೊಡಿಯೇರಿ ಹಾಗೂ ವಕೀಲರನ್ನು ಆಸ್ಪತ್ರೆಯ ಅಧಿಕೃತರು ತಡೆಹಿಡಿದು ಭೇಟಿ ನಿರಾಕರಿಸಿದರೆಂದೂ ಆರೋಪ ಕೇಳಿಬಂದಿದೆ. ಜಾರಿ ನಿರ್ದೇಶನಾಲಯ ವಿಚಾರಣೆ ವೇಳೆ ಅನಾರೋಗ್ಯಕ್ಕೆ ಒಳಗಾದ ಬಿನೇಶ್ ಕೊಡಿಯೇರಿಯನ್ನು ಭಾನುವಾರ ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಮಾದಕವಸ್ತು ಪ್ರಕರಣಕ್ಕೆ ಸಂಬಂಧಿಸಿದಂತೆ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ಕೂಡಾ ಬಿನೀಶ್ ವಿರುದ್ಧ ಕ್ರಮ ಕೈಗೊಂಡಿದೆ. ಬಿನೀಶ್ ವಿರುದ್ಧ ಜಾರಿ ನಿರ್ದೇಶನಾಲಯ ದಾಖಲಿಸಿದ ಪ್ರಕರಣದ ವಿವರಗಳನ್ನು ನೇರವಾಗಿ ಎನ್‍ಸಿಬಿ ವಲಯ ನಿರ್ದೇಶಕ ಇಡಿ ಕೇಂದ್ರ ಕಚೇರಿಯಲ್ಲಿ ಸಂಗ್ರಹಿಸಲಾಗಿದೆ. ಇಂದು ಇಡಿ ಕಸ್ಟಡಿ ಅವಧಿ ಮುಗಿದಲ್ಲಿ ಎನ್‍ಸಿಬಿ ಬಿನೀಶ್‍ನನ್ನು ಬಂಧನದಲ್ಲಿ ಮುಂದುವರಿಸಬಹುದು ಎಂದು ವರದಿಯಾಗಿದೆ.
ಈ ಮಧ್ಯೆ ಮಲಯಾಳಂ ಚಿತ್ರೋದ್ಯಮವು ಮಾದಕ ದ್ರವ್ಯ ವ್ಯವಹಾರದಲ್ಲಿ ಭಾಗಿಯಾಗಿದೆ. ಇದರ ಹಿಂದೆ ಬೃಹತ್ ಕುಳಗಳ ಕೈಗಳಿವೆ. ಈ ಬಗ್ಗೆ ಸಮಗ್ರ ತನಿಖೆ ಆಗಬೇಕೆಂದು ಶನಿವಾರ ಬಿಜೆಪಿ ರಂಗಕ್ಕಿಳಿದಿತ್ತು. ಬಿನೀಶ್ ಕೊಡಿಯೇರಿ ಮತ್ತು ಮುಖ್ಯಮಂತ್ರಿಯ ಮಾಜಿ ಪ್ರಧಾನ ಕಾರ್ಯದರ್ಶಿ ಎಂ.ಶಿವಶಂಕರ್ ಅವರು ತನಿಖೆ ಎದುರಿಸುತ್ತಿರುವುದರಿಂದ ಯುಡಿಎಫ್ ನಿನ್ನೆ ದ್ರೋಹದ ದಿನವನ್ನಾಗಿ ಆಚರಿಸಿತು. ಜೊತೆಗೆ ಬಿಜೆಪಿಯು ಕೇರಳದಾತ್ಯಂತ ಪ್ರತಿಭಟನಾ ಶೃಂಖಲೆ ನಡೆಸಿತು.