ತಿರುವನಂತಪುರ: ಬಿನೀಶ್ ಕೊಡಿಯೇರಿಯ ಬೇನಾಮಿಗಳೆಂದು ಶಂಕಿಸಲಾಗಿರುವ ನಾಲ್ವರಿಗೆ ಇಡಿ ನೋಟಿಸ್ ಕಳುಹಿಸಿದೆ. ಕಾರ್ ಪ್ಯಾಲೇಸ್ ಮಾಲೀಕ ಅಬ್ದುಲ್ ಲತೀಫ್, ಅನಿಕುಟ್ಟನ್, ಅರುಣ್ ಮತ್ತು ರಶೀದ್ ಎಂಬವರಿಗೆ ನೋಟಿಸ್ ನೀಡಲಾಗಿದೆ. ಅವರು ನವೆಂಬರ್ 18 ರಂದು ಬೆಂಗಳೂರಿನ ಇಡಿ ಕಚೇರಿಯಲ್ಲಿ ಹಾಜರಾಗಬೇಕಿದೆ.
ಬಿನೀಶ್ ಕೊಡಿಯೇರಿಯೊಂದಿಗೆ ದೊಡ್ಡ ಮೊತ್ತದ ಹಣವನ್ನು ವಿನಿಮಯ ಮಾಡಿಕೊಂಡಿರುವುದು ಕಂಡುಬಂದಿದೆ ಎಂಬ ಆಧಾರದ ಮೇಲೆ ನೋಟಿಸ್ ನೀಡಲಾಗಿದೆ. ಅಬ್ದುಲ್ ಲತೀಫ್ ಅವರಿಗೆ ಈ ಹಿಂದೆ ನೋಟಿಸ್ ನೀಡಲಾಗಿದ್ದರೂ ಹಾಜರಾಗಿರಲಿಲ್ಲ. ಆತ ಪರಾರಿಯಾಗಿದ್ದಾನೆ ಎಂಬ ವದಂತಿ ಹಬ್ಬಿದೆ.
ಇಡಿ ಪ್ರಕಾರ, ಬಿನೀಶ್ ನಿರ್ವಹಿಸುತ್ತಿರುವ ಖಾತೆಗಳಲ್ಲಿ ಹೆಚ್ಚಿನ ಹಣವನ್ನು ಜಮಾ ಮಾಡಲಾಗಿದೆ. ಡ್ರಗ್ಸ್ ಪ್ರಕರಣದ ಆರೋಪಿ ಅನೂಪ್ ಮೊಹಮ್ಮದ್ ಅವರ ಖಾತೆಗೆ ಅನಿಕುಟ್ಟನ್ ಹಣವನ್ನು ಜಮಾ ಮಾಡಿದ್ದಾನೆ ಎಂದು ಇಡಿ ಆರೋಪಿಸಿದೆ. ನಾಲ್ವರನ್ನೂ ಪ್ರಶ್ನಿಸಬೇಕು ಎಂದು ಬಿನೀಶ್ ಅವರ ರಿಮಾಂಡ್ ವರದಿ ನ್ಯಾಯಾಲಯಕ್ಕೆ ತಿಳಿಸಿದೆ.