ಮುಳ್ಳೇರಿಯ: ಕೋವಿಡ್ ಸೋಂಕು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದರಿಂದ, ವ್ಯಾಪಾರಿಗಳು ಮತ್ತು ಕೈಗಾರಿಕೋದ್ಯಮಿಗಳ ಸಮನ್ವಯ ಸಮಿತಿಯ ಅಡೂರು ಘಟಕವು ಕೋವಿಡ್ ನಿಯಂತ್ರಣ ಕರ್ತವ್ಯದಲ್ಲಿರುವ ಅಧಿಕಾರಿಗಳೊಂದಿಗೆ ಕೋವಿಡ್ ತಡೆಗಟ್ಟುವ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾರೆ.
ಜಿಲ್ಲಾಡಳಿತದ "ಮ್ಯಾಶ್" ಯೋಜನೆಯ ಶಿಕ್ಷಕರ ಸಹಯೋಗದೊಂದಿಗೆ ಅಡೂರಿನ ಎಲ್ಲಾ ಅಂಗಡಿಗಳಲ್ಲಿ ತಪಾಸಣೆ ಮತ್ತು ಜಾಗೃತಿ ಕಾರ್ಯಕ್ರಮಗಳನ್ನು ನಡೆಸಲಾಯಿತು. ವ್ಯಾಪಾರವನ್ನು ಸುಧಾರಿಸುವ ಸಲುವಾಗಿ ಕೋವಿಡ್ ಹರಡುವುದನ್ನು ತಡೆಯುವ ಅಗತ್ಯವನ್ನು ವ್ಯಾಪಾರಿ ಮುಖಂಡರು ಸಂಘಟನೆಯ ವ್ಯಾಪಾರಿ ಸದಸ್ಯರಿಗೆ ಮನವರಿಕೆ ಮಾಡುತ್ತಿರುವರು. ಮುಂದಿನ ದಿನಗಳಲ್ಲಿ ಸಾಮಾಜಿಕ ಮಾಧ್ಯಮಗಳ ಮೂಲಕ ಜಾಗೃತಿ ಮೂಡಿಸಲು ಸಜ್ಜಾಗಿದೆ.
ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿ ಮತ್ತು ಕೈಗಾರಿಕೋದ್ಯಮಿಗಳ ಸಮನ್ವಯ ಸಮಿತಿಯ ಅಡೂರು ಘಟಕದ ಅಧ್ಯಕ್ಷ ಎಂ.ಪಿ. ಮೊಯಿದ್ದೀನ್ ಕುಂಞÂ, ಉಪಾಧ್ಯಕ್ಷ ಸಿ.ಮಾಧವನ್, ಖಜಾಂಚಿ ಎ.ಸಿ. ಚಂದ್ರಶೇಖರನ್, ಮಚೆರ್ಂಟ್ ಯೂತ್ ವಿಂಗ್ ಅಧ್ಯಕ್ಷ ಅನಸ್, ಮಹಿಳಾ ವಿಂಗ್ ಕಾರ್ಯಕರ್ತರಾದ ಶ್ರೀಲಕ್ಷ್ಮಿ ಮತ್ತು ವಿಜಯಲಕ್ಷ್ಮಿ ಹಾಗೂ ಮಾಶ್ ನೋಡಲ್ ಅಧಿಕಾರಿಗಳಾದ ಎ.ಎಂ.ಅಬ್ದುಲ್ ಸಲಾಮ್, ಎ.ಗಂಗಾಧರನ್, ಕೆ.ಶಶಿಧರನ್, ಡಿ.ಕೆ. ತಾಹಿರಾ ಮತ್ತು ಬಿ.ಜಯಕರ ನೇತೃತ್ವ ವಹಿಸಿದ್ದರು.