ಕಾಸರಗೋಡು: ಸ್ಥಳೀಯಾಡಳಿತ ಸಂಸ್ಥೆಗಳ ಚುನಾವಣೆ ಸಂಬಂಧ ನಾಮಪತ್ರಿಕೆ ಸಲ್ಲಿಕೆ ಪ್ರಕ್ರಿಯೆ ಪೂರ್ಣಗೊಂಡಿದೆ. ಇಂದು(ನ.20) ಸೂಕ್ಷ್ಮ ತಪಾಸಣೆ ನಡೆಯಲಿದೆ.
ಸೂಕ್ಷ್ಮ ತಪಾಸಣೆಗಾಗಿ ಶುದ್ಧ ವಾಯುಸಂಚಾರವಿರುವ, ರೋಗಾಣುಮುಕ್ತ ಸಭಾಂಗಣ ಸಿದ್ಧಗೊಂಡಿದೆ. ಸೂಕ್ಷ್ಮ ತಪಾಸಣೆ ಅವಧಿಯಲ್ಲಿ ಪ್ರತಿ ವಾರ್ಡ್ ಮಟ್ಟದ ಅಭ್ಯರ್ಥಿ ಗಳಿಗೆ, ಬೆಂಬಲಿಗರಿಗೆ, ಏಝೆಂಟರಿಗೆ ಮಾತ್ರ ಪ್ರವೇಶವಿರುವುದು. ಗರಿಷ್ಠ 30 ಮಮದಿಗೆ ಮಾತ್ರ ಪ್ರವೇಶ ನೀಡಲಾಗುವುದು. ಸಮಾಜಿಕ ಅಂತರ ಪಾಲಿಸಿ ಕುಳಿತುಕೊಳ್ಳಬೇಕು. ಈ ಅವಧಿಯಲ್ಲಿ ಚುನಾವಣೆ ಅಧಿಕಾರಿ, ಸಹಾಯಕ ಚುನಾವಣೆ ಅಧಿಕಾರಿ ಮಾಸ್ಕ್, ಗ್ಲೌಸ್, ಫೇಸ್ ಶೀಲ್ಡ್ ಧರಿಸಿ, ಸಾನಿಟೈಸರ್ ಕಡ್ಡಾಯವಾಗಿ ಇರಿಸಿಕೊಳ್ಳಬೇಕು. ಕಾನೂನು ರೀತ್ಯಾ ಎಲ್ಲ ವ್ಯವಸ್ಥೆಗಳೂ ಇಲ್ಲಿರುವುವು. ರಾಜ್ಯ ಚುನಾವಣೆ ಆಯೋಗದ ಆದೇಶ ಪ್ರಕಾರ ಚಟುವಟಿಕೆ ನಡೆಯಲಿದೆ.
ನಿಖರ ಕಾರಣಗಳಿಲ್ಲದೆ ನಾಮಪತ್ರಿಕೆ ಅನರ್ಹವಾಗದು:
ನಾಮಪತ್ರಿಕೆ ಅನರ್ಹಗೊಳಿಸುವ ಕಾಯಿದೆಗಳ ಅನುಸಾರದ ತಪಾಸಣೆಯ ನಂತರವೇ ನಡೆಯಲಿದೆ. ಕೇರಳ ಪಂಚಾಯತ್ ಕಾಯಿದೆ/ಕೇರಳ ಮುನಿಸಿಪಾಲಿಟಿ ಕಾಯಿದೆ ಪ್ರಕಟಿಸಿರುವ ಕಾರಣಗಳಲ್ಲಿ ಮಾತ್ರ ಸೂಕ್ಷ್ಮ ತಪಾಸಣೆಯ ನಂತರ ಅನರ್ಹಗೊಳಿಸುವ ಪ್ರಕ್ರಿಯೆ ಇರುವುದು. ನಾಮಪತ್ರಿಕೆ ಸಲ್ಲಿಸಿದ ಅಭ್ಯರ್ಥಿ ಸಂಬಮಧಪಟ್ಟ ಸ್ಥಳೀಯಾಡಳಿತ ಸಂಸ್ಥೆಯ ಸದಸ್ಯರಾಗುವ ನಿಟ್ಟಿನಲ್ಲಿ ಕಾನೂನುಪ್ರಕಾರ ಅರ್ಹರಲ್ಲ ಎಂದೋ, ಆ ಅಭ್ಯರ್ಥಿ ನಗರಸಭೆಯ ಯಾ ಗ್ರಾಮಪಂಚಾಯತ್ ನ ಸದಸ್ಯರಾಗಲು ಅನರ್ಹರಾಗಲು ಸ್ಪಷ್ಟಗೊಂಡಲ್ಲಿ ನಾಮಪತ್ರಿಕೆ ಅನರ್ಹಗೊಳಿಸಲಾಗುವುದು.
ನಾಮಪತ್ರಿಕೆ ನಿಗದಿತ 2ನೇ ನಂಬ್ರ ಫಾರಂ ನಲ್ಲಿ ಸಲ್ಲಿಸಿದರೂ, ನಾಮ ಬೆಂಬಲ ಪತ್ರಿಕೆಯಲ್ಲಿ ಅಭ್ಯರ್ಥಿಯ, ಬೆಂಬಲಿಗರ ಸಹಿಯಿಲ್ಲದೇ ಇದ್ದಲ್ಲಿ ನಾಮಪತ್ರಿಕೆ ಅನರ್ಹಗೊಳಿಸಲಾಗುವುದು.
ಅಭ್ಯರ್ಥಿ ಸ್ಪರ್ಧಿಸುವ ಸ್ಥಳೀಯಾಡಳಿತ ಸಂಸ್ಥೆಯ ಯಾವುದೇ ವಿದಾನಸಭೆ ಕ್ಷೇತ್ರ(ವಾರ್ಡ್) ದ ಮತದಾರ ಆಗಿರಬೇಕಿದೆ. ಆದರೆ ನಾಮ ಬೆಂಬಲ ನಡೆಸುವ ವೇಳೆ ಅಬ್ಯೃತೀ ಸ್ಪರ್ಧಿಸುವ ವಿಧಾನಸಭೆ ಕ್ಷೇತ್ರದ ಯಾ ವಾಡ್ರ್ನ ಮತದಾರ ಆಗಿರಬೇಕಿರುವುದು ಕಡ್ಡಾಯ. ಒಬ್ಬರು ಒಂದಕ್ಕಿಂತ ಅಧಿಕ ಸ್ಥಲೀಯಾಡಳಿತ ಸಂಸ್ಥೆಗಳಿಗೆ ನಾಮ ಬೆಂಬಲ ಪತ್ರಿಕೆ ಸಲ್ಲಿಸಿದ್ದರೆ ಅವನ್ನು ಅನರ್ಹಗೊಳಿಸಲಾಗುವುದು. ಜೊತೆಗೆ ಅಭ್ಯರ್ಥಿ ಯಥಾ ಸಂಖ್ಯೆ ಯ ಠೇವಣಿ ಇರಿಸದೇ ಇದ್ದಲ್ಲಿ, ಸತ್ಯವಾuಟಿಜeಜಿiಟಿeಜ್ಮಲ, ದೃಡವಾuಟಿಜeಜಿiಟಿeಜ್ಮಲದಲ್ಲಿ ಸಹಿ ಮಾಡದಿದ್ದಲ್ಲಿ ಅನರ್ಹಗೊಳಿಸಲಾಗುವುದು.
ಮಹಿಳೆ, ಪರಿಶಿಷ್ಟ ಜಾತಿ-ಪಂಗಡದ ಮೀಸಲಾತಿ ಕ್ಷೇತ್ರಗಳಲ್ಲಿ ಈ ವಿಭಾಗಕ್ಕೇ ಸೇರದೇ ಇರುವ ಮಂದಿ ನಾಮಪತ್ರಿಕೆ ಸಲ್ಲಿಸಿದ್ದರೆ, ಅಬ್ಯರ್ಥಿ ನಾಮಬೆಂಬಲ ಪತ್ರಿಕೆಯಲ್ಲಿ ವಯೋಮಾನ ನಿಖರವಾಗಿ ನಮೂದಿಸದೇ ಇದ್ದಲ್ಲಿ ಅನರ್ಹಗೊಳಿಸಲಾಗುವುದು. ಅಭ್ಯರ್ಥಿ ಬೇರೆ ಯಾವುದೇ ಕ್ಷೇತ್ರದ ಮತದಾರರಾಗಿದ್ದರೆ, ಸಂಬಂಧಪಟ್ಟ ಮತದಾರ ಪಟ್ಟಿಯ ದೃಡೀಕರಿಸಿದ ನಕಲು ನಾಮಬೆಂಬಲ ಪತ್ರದೊಂದಿಗೆ ಯಾ ಸೂಕ್ಷ್ಮ ತಪಾಸಣೆ ವೇಳೆ ಹಾಜರುಪಡಿಸದೇ ಇದ್ದಲ್ಲಿ ಅನರ್ಹಗೊಳಿಸಲಾಗುವುದು.
ಯಾವುದಾದರೂ ಒಂದು ನಾಮಬೆಂಬಲ ಪತ್ರಿಕೆ ಸ್ವೀಕೃತವಾಗಿದ್ದಲ್ಲಿ, ಅನರ್ಹಗೊಳಿಸುವ ಪತ್ರಿಕೆಗಳಿಗೆ ಸಂಬಂಧಿಸಿದ ಆದೇಶದ ದೃಡೀಕೃತ ನಕಲು ಅಭ್ಯರ್ಥಿ ಬಯಸಿದಲ್ಲಿ ನೀಡಲಾಗುವುದು.