ಕುಂಬಳೆ: ಕೇಂದ್ರ ಸರ್ಕಾರದ ಕೃಷಿ ಮಸೂದೆಯನ್ನು ವಿರೋಧಿಸಿ ಕೃಷಿಕ ಕಾಂಗ್ರೆಸ್ ಮಂಜೇಶ್ವರ ವಿಧಾನ ಸಭಾ ಸಮಿತಿಯ ವತಿಯಿಂದ ಕುಂಬಳೆ ಅಂಚೆ ಕಚೇರಿ ಪರಿಸರದಲ್ಲಿ ಮಂಗಳವಾರ ಪ್ರತಿಭಟನೆ ನಡೆಯಿತು.
ಪ್ರತಿಭಟನೆಯನ್ನು ಕುಂಬಳೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ವಾಮಿ ಕುಟ್ಟಿ ಉದ್ಘಾಟಿಸಿದರು. ಕರ್ಷಕ ಕಾಂಗ್ರೆಸ್ ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು ಕುಂಬಳೆ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಲಕ್ಷ್ಮಣ್ ಪ್ರಭು ಕುಂಬ್ಳೆ ಅವರು ಕೃಷಿ ಮಸೂದೆ ಬಗ್ಗೆ ಮಾತನಾಡಿದರು.ಬ್ಲಾಕ್ ಉಪಾಧ್ಯಕ್ಷ ಶಿವರಾಮ ಆಳ್ವ, ಬ್ಲಾಕ್ ಕಾರ್ಯದರ್ಶಿಗಳಾದ ರವಿ ಪೂಜಾರಿ, ಲೋಕನಾಥ್ ಶೆಟ್ಟಿ, ಯುವ ಕಾಂಗ್ರೆಸ್ ಉಪಾಧ್ಯಕ್ಷ ನಿಝಾರ್ ಅರಿಕ್ಕಾಡಿ, ಕುಂಬಳೆ ಮಂಡಲ ಅಧ್ಯಕ್ಷ ಗಣೇಶ ಭಂಡಾರಿ ಕುತ್ತಿಕ್ಕಾರ್, ಹನೀಫ್ ಕುಂಬ್ಳೆ. ರಾಮ ಕಾರ್ಲೆ, ರಿಯಾಜ್ ಮೊಗ್ರಾಲ್, ಶ್ರೀಧರ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.