ತಿರುವನಂತಪುರ: ಮುಖ್ಯಮಂತ್ರಿಯ ಹೆಚ್ಚುವರಿ ಖಾಸಗಿ ಕಾರ್ಯದರ್ಶಿ ಸಿಎಂ ರವೀಂದ್ರನ್ ಗೆ ಕೋವಿಡ್ ದೃಢಪಟ್ಟಿರುವುದರಿಂದ ಅವರು ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಜಾರಿ ನಿರ್ದೇಶನಾಲಯವು ವಿಚಾರಣೆಗೆ ಇಂದು ಹಾಜರಾಗುವಂತೆ ಈ ಹಿಂದೆ ಸೂಚನೆ ನೀಡಿದ್ದು ಇದೀಗ ಕೋವಿಡ್ ಖಚಿತಗೊಂಡಿದ್ದರಿಂದ ವಿಚಾರಣೆಗೆ ಗೈರಾಗಲಿದ್ದಾರೆಂದು ತಿಳಿದುಬಂದಿದೆ. ಐಟಿ ಇಲಾಖೆಯ ಯೋಜನೆಗಳು ಸೇರಿದಂತೆ ಇತರ ಪ್ರಕರಣಗಳಿಗೆ ಸಂಬಂಧಿಸಿ ಅನಗತ್ಯ ನೆರವು ನೀಡಲಾಗಿದೆಯೆ ಎಂಬ ಅನುಮಾನದ ಮೇಲೆ ಪ್ರಶ್ನಿಸಲು ಇಡಿ ವಿಚಾರಣೆಗೆ ಆದೇಶಿಸಿತ್ತು.
ಎಂ.ಶಿವಶಂಕರನ್ ಅವರನ್ನು ಶುಕ್ರವಾರ ಪ್ರಶ್ನಿಸಿದಾಗ ಸಿಎಂ ರವೀಂದ್ರನ್ ಅವರ ಪಾತ್ರದ ಬಗ್ಗೆ ನಿಖರತೆ ಮೂಡಿ ಅವರನ್ನೂ ಪ್ರಶ್ನಿಸುವ ನಿರ್ಧಾರ ಕೈಗೊಂಡಿತ್ತು. ಕೋವಿಡ್ ದೃಢಪಟ್ಟ ಹಿನ್ನೆಲೆಯಲ್ಲಿ ರವೀಂದ್ರನ್ ಅವರನ್ನು ಇಂದು ತಿರುವನಂತಪುರ ವೈದ್ಯಕೀಯ ಕಾಲೇಜಿಗೆ ದಾಖಲಿಸುವ ಸಾಧ್ಯತೆಯೂ ಇದೆ ಎನ್ನಲಾಗಿದೆ.
ಎಂ.ಶಿವಶಂಕರನ್ ಅವರಲ್ಲದೆ, ಇಡಿ ಅಧಿಕೃತರು ಸಿಎಂ ಕಚೇರಿಯಲ್ಲಿರುವ ಶಿವಶಂಕರ್ ಗೆ ನಿಕಟರಾದ ಇತರ ಇಬ್ಬರು ಪ್ರಮುಖರನ್ನು ಪ್ರಶ್ನಿಸಲಿದೆ ಎಂದು ವರದಿಯಾಗಿದೆ. ಸಿಎಂ ರವೀಂದ್ರನ್ ಅವರಲ್ಲಿ ಒಬ್ಬರು. ಶಿವಶಂಕರ್ ಅವರಲ್ಲದೆ, ಸಿಎಂ ರವೀಂದ್ರನ್ ಅವರು ಸಿ.ಎಂ ಕಚೇರಿಯಿಂದ ಕರೆ ಮಾಡಿದ್ದಾರೆ ಎಂದು ಸ್ವಪ್ನಾ ಹೇಳಿದ್ದರು.