ತಿರುವನಂತಪುರ: ರಾಜ್ಯದಲ್ಲಿ ಡಿಸೆಂಬರ್ 8, 10 ಮತ್ತು 14 ರಂದು ನಡೆಯಲಿರುವ ಸ್ಥಳೀಯಾಡಳಿತ ಸಂಸ್ಥೆಗಳ ಚುನಾವಣೆಗೆ ಅಧಿಸೂಚನೆ ಇಂದು ಹೊರಡಿಸಲಾಗುತ್ತಿದೆ ಎಂದು ರಾಜ್ಯ ಚುನಾವಣಾ ಆಯೋಗಅ ಅಧ್ಯಕ್ಷ ವಿ.ಭಾಸ್ಕರ್ ಪ್ರಕಟಿಸಿದ್ದಾರೆ. ಅಭ್ಯರ್ಥಿಗಳು ಗುರುವಾರದಿಂದ ನಾಮಪತ್ರ ಸಲ್ಲಿಸಬಹುದು.
ಅರ್ಜಿಯನ್ನು ಆಯಾ ಸ್ಥಳೀಯ ಸಂಸ್ಥೆಗಳ ಚುನಾವಣಾ ಅಧಿಕಾರಿಗಳಿಗೆ ಸಲ್ಲಿಸಬೇಕು. ರಜಾದಿನಗಳನ್ನು ಹೊರತುಪಡಿಸಿ ಬೆಳಿಗ್ಗೆ 11 ರಿಂದ ಮಧ್ಯಾಹ್ನ 3 ರವರೆಗೆ ಅರ್ಜಿಗಳನ್ನು ಸಲ್ಲಿಸಬೇಕು. ನಾಮಪತ್ರ ಸಲ್ಲಿಕೆಗೆ ಕೊನೆಯ ದಿನಾಂಕ ನವೆಂಬರ್ 19 ಆಗಿದೆ.
ಅಭ್ಯರ್ಥಿಗಳು ಫಾರ್ಮ್ ಟು ಎ ಯಲ್ಲಿ ನಾಮಪತ್ರಗಳೊಂದಿಗೆ ಅಗತ್ಯ ಮಾಹಿತಿಯನ್ನು ಸಲ್ಲಿಸಬೇಕು. ಫಾರ್ಮ್ ಟು ಎ ಅನ್ನು ತಿದ್ದುಪಡಿ ಮಾಡಲಾಗಿದೆ. ಲಿಂಗ ಸೂಚಕದಲ್ಲಿ ಪುರುಷ / ಸ್ತ್ರೀ ಹಾಗೂ ಭಿನ್ನಲಿಂಗಿಗಳು(ಟ್ರಾನ್ಸ್ ಜೆಂಡರ್) ಎಂಬುದನ್ನೂ ಸೇರಿಸಲಾಗಿದೆ. ನಾಮಪತ್ರ ಘೋಷಣೆಯಲ್ಲೂ ಕೆಲವು ಬದಲಾವಣೆ ಇದೆ.
ಅಭ್ಯರ್ಥಿಯ ಪಾಸ್ಪೋರ್ಟ್ ಗಾತ್ರದ ಬಣ್ಣದ ಫೆÇೀಟೋವನ್ನು ಫಾರ್ಮ್ ಟು ಎ ನಲ್ಲಿ ಪೆÇೀಸ್ಟ್ ಮಾಡಬೇಕು. ನಿರೂಪದಲ್ಲಿರುವ ಎಲ್ಲಾ ಕಾಲಮ್‍ಗಳನ್ನು ಭರ್ತಿ ಮಾಡಬೇಕು. ಅಭ್ಯರ್ಥಿಯ ದೂರವಾಣಿ ಸಂಖ್ಯೆ, ಇ-ಮೇಲ್, ಸಾಮಾಜಿಕ ಮಾಧ್ಯಮ ಖಾತೆ, ಪಾನ್ ಸಂಖ್ಯೆ, ಅಭ್ಯರ್ಥಿಯ ಕುಟುಂಬ ಆಸ್ತಿ, ಹೊಣೆಗಾರಿಕೆ ಮತ್ತು ಬಾಕಿ ಮಾಹಿತಿ ಮತ್ತು ಅಭ್ಯರ್ಥಿಯ ಆದಾಯದ ಮೂಲವನ್ನು ತೋರಿಸಬೇಕು. ನ್ಯಾಯಾಲಯದಲ್ಲಿ ಪ್ರಕರಣಗಳು ಬಾಕಿ ಇದ್ದರೆ ಅಥವಾ ಶಿಕ್ಷೆಗೊಳಗಾದ ಪ್ರಕರಣಗಳು ಇದ್ದರೆ, ಸಂಬಂಧಿತ ಮಾಹಿತಿಯನ್ನು ಸಹ ಒದಗಿಸಬೇಕು.