ಕೆ.ಎಂ. ಶಶೀಧರ್ ನಿರ್ದೇಶಿಸುತ್ತಿರುವ ಪೃಥ್ವಿ ಅಂಬಾರ್ ನಟನೆಯ 'ಶುಗರ್ ಲೆಸ್' ಚಿತ್ರದ ಹೊಸ ಪೋಸ್ಟರ್ ವೊಂದನ್ನು ದೀಪಾವಳಿ ಪ್ರಯುಕ್ತ ಬಿಡುಗಡೆ ಮಾಡಿದ್ದಾರೆ.
ಈ ಸಿನಿಮಾದಲ್ಲಿ ಪ್ರಿಯಾಂಕ ತಿಮ್ಮೇಶ್ ನಾಯಕಿಯಾಗಿದ್ದಾರೆ. ರಿಲೀಸ್ ಮಾಡಿರುವ ಫೋಸ್ಟರ್ ನಲ್ಲಿ ಪೃಥ್ವಿ ಅಂಬರ್ ಹಾಗೂ ಪ್ರಿಯಾಂಕ ತಿಮ್ಮೇಶ್ ಇಬ್ಬರು ಕೃಷ್ಣ ಹಾಗೂ ರಾಧೆ ಗೆಟಪ್ ನಲ್ಲಿದ್ದಾರೆ.
ಪುಷ್ಕರ್ ಮಲ್ಲಿಕಾರ್ಜುನಯ್ಯ ಈ ಸಿನಿಮಾ ನಿರ್ಮಾಣ ಮಾಡುತ್ತಿದ್ದು, ಈ ಚಿತ್ರದ ಬಗ್ಗೆ ಪ್ರೇಕ್ಷಕರಿಗೆ ಸಾಕಷ್ಟು ಕುತೂಹಲ ಹೆಚ್ಚಿಸಿದೆ.