ನವದೆಹಲಿ: ಭಾರತದ ಅತ್ಯಂತ ವಿಶ್ವಾಸಾರ್ಹ ಶೈಕ್ಷಣಿಕ ಬ್ರಾಯಡ್ ಎಕ್ಸ್ಟ್ರಾ ಮಾರ್ಕ್ಸ್ 7 ವರ್ಷದೊಳಗಿನ ಮಕ್ಕಳಿಗಾಗಿ ಲಿಲ್ ಒನ್ ಎಂಬ ವಿಶೇಷ ಆಪ್ ಬಿಡುಗಡೆ ಮಾಡಿದೆ. ಮಕ್ಕಳಿಗೆ ಕಲಿಸುವ, ವಿವಿಧ ಚಟುವಟಿಕೆಗಳಲ್ಲಿ ತೊಡಗಿಸುವ ಮತ್ತು ಮನರಂಜಿಸುವ ಉದ್ದೇಶದಿಂದ ಈ ಆಪ್ ರೂಪುಗೊಂಡಿದ್ದು, ವಿವಿಧ ಪಾಠಗಳು ಹಾಗೂ ಆಟಗಳಲ್ಲಿ ಮಕ್ಕಳ ನೆಚ್ಚಿನ ಛೋಟಾ ಭೀಮ್ ಪಾತ್ರವನ್ನು ಬಳಕೆ ಮಾಡಿಕೊಂಡಿರುವುದು ವಿಶೇಷ. ಮಕ್ಕಳಿಗೆ ಮಾಹಿತಿಪೂರ್ಣ ಹಾಗೂ ಮನರಂಜನಾತ್ಮಕ ವಿಧಾನದಲ್ಲಿ ಕಲಿಸುವ ಸಲುವಾಗಿ ತಂತ್ರಜ್ಞಾನಾಧಾರಿತ ಶಿಕ್ಷಣದ ಪ್ರವರ್ತಕ ಸಂಸ್ಥೆಯಾಗಿರುವ ಎಕ್ಸ್ಟ್ರಾ ಮಾರ್ಕ್, ಛೋಟಾಭೀಮ್ ಸರಣಿಯ ಸೃಷ್ಟಿಕರ್ತರಾದ ಗ್ರೀನ್ ಗೋಲ್ಡ್ ಅನಿಮೇಷನ್ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡಿದೆ.
ಭಾರತೀಯ ಟೆಲಿವಿಷನ್ ಜಾಲದಲ್ಲಿ ಅತ್ಯಂತ ಜನಪ್ರಿಯವಾದ ಹಾಗೂ ಮಕ್ಕಳ ಅಚ್ಚುಮೆಚ್ಚಿನ ಕಾರ್ಟೂನ್ ಪಾತ್ರವಾಗಿರುವ ಛೋಟಾ ಭೀಮ್ ಕಳೆದೊಂದು ದಶಕದಲ್ಲಿ ಜಗತ್ತಿನಾದ್ಯಂತ 100 ದಶಲಕ್ಷಕ್ಕೂ ಅಧಿಕ ಮಕ್ಕಳನ್ನು ರಂಜಿಸಿದ್ದು, ಮಕ್ಕಳು ಛೋಟಾ ಭೀಮ್ ಜತೆ ಗುರುತಿಸಿಕೊಳ್ಳಲು ಇಷ್ಟ ಪಡುತ್ತಾರೆ. ಲಿಲ್ ಒನ್ ಆಪ್ನಲ್ಲಿ ಛೋಟಾ ಭೀಮ್ ಸರಣಿಯ ಚುಟ್ಕಿ, ರಾಜು, ಕಾಲಿಯಾ, ಜಗ್ಗು, ಇಂದುಮತಿ, ಟುನ್ಟುನ್ ಮೌಸಿ, ಧೋಲು ಮತ್ತು ಭೋಲು ಎಲ್ಲರೂ ಮಕ್ಕಳಿಗೆ ವಿವಿಧ ಪಾಠಗಳನ್ನು, ಮಾಹಿತಿಗಳನ್ನು ಹೇಳಿಕೊಡುವುದು ವಿಶೇಷ. ಛೋಟಾ ಭೀಮ್ ಮೊದಲ ಬಾರಿ ತರಗತಿಗಳನ್ನು ಪ್ರವೇಶಿಸಿದ್ದಾನೆ. ಮಕ್ಕಳಿಗೆ ವರ್ಣಮಾಲೆ, ಬಾಲಗೀತೆಗಳು, ಬಣ್ಣಗಳು, ಮೌಲ್ಯಗಳನ್ನು ಕಲಿಯಲು ನೆರವಾಗುತ್ತಾನೆ ಎಂದು ಗ್ರೀನ್ ಗೋಲ್ಡ್ ಅನಿಮೇಷನ್ನ ಸಿಎಸ್ಒ ಶ್ರೀನಿವಾಸ ಚಿಲಕಲಪುಡಿ ಮಾಹಿತಿ ನೀಡಿದರು.