ಕಾಸರಗೋಡು: ಕೋವಿಡ್ ವ್ಯಾಪಿಸುತ್ತಿರುವುದನ್ನು ತಡೆಗಟ್ಟಲು ಕಾಸರಗೋಡು ಜಿಲ್ಲಾಡಳಿತ ನಡೆಸುತ್ತಿರುವ ಕೆಲವೊಂದು ನಿಯತ್ರಣಾ ಕ್ರಮಗಳಿಂದ ಗಡಿಪ್ರದೇಶದ ಜನತೆ ಹೆಚ್ಚಿನ ಸಂಕಷ್ಟ ಅನುಭವಿಸುವಂತಾಗಿದೆ.
ಈಗಾಗಲೇ ತಲಪ್ಪಾಡಿ ಚೆಕ್ ಪೆÇೀಸ್ಟ್ (ಎನ್.ಎಚ್.66), ಅಡ್ಕಸ್ಥಳ, ಅಡ್ಯನಡ್ಕರಸ್ತೆ(ಎಸ್.ಎಚ್.55), ಆದೂರು-ಕೊಟ್ಯಾಡಿ-ಸುಳ್ಯ ರಾಜ್ಯ ಹೆದ್ದಾರಿ(ಎಸ್.ಎಚ್.55), ಪಾಣತ್ತೂರು-ಚೆಂಬೇರಿ-ಮಡಿಕೇರಿ(ಎಸ್.ಎಚ್.56), ಮಾಣಿಮೂಲೆ-ಸುಳ್ಯ ಎಂಬ ರಸ್ತೆಗಳಲ್ಲಿ ಚೆಕ್ ಪೆÇೀಸ್ಟ್ ಸಜ್ಜುಗೊಳಿಸಿ, ಆ್ಯಂಟಿಜೆನ್ ತಪಾಸಣೆಗೆ ಸೌಲಭ್ಯ ಜಾರಿಗೊಳಿಸಲು ಜಿಲ್ಲಾಡಳಿತ ಕೈಗೊಂಡ ತೀರ್ಮಾನ ಜನರಲ್ಲಿ ವ್ಯಾಪಕ ಅಸಮಧಾನಕ್ಕೆ ಕಾರಣವಾಗಿದ್ದು, ಈ ನಿಟ್ಟಿನಲ್ಲಿ ಜಿಲ್ಲಾಡಳಿತ ತನ್ನ ನಿಲುವು ಬದಲಾಯಿಸಿದೆ. ಜಿಲ್ಲಾಡಳಿತ ಹೊರಡಿಸಿರುವ ಆದೇಶದಲ್ಲಿ ವ್ಯಾಪಕ ಗೊಂದಲ ಎದ್ದುಕಾಣುತ್ತಿತ್ತು. ಜಿಲ್ಲೆಯ ಗಡಿ ಚೆಕ್ ಪೆÇೀಸ್ಟ್ ಗಳಲ್ಲಿ ಆರಂಭಿಸುವುದಾಗಿ ತಿಳಿಸಿದ್ದ ಆ್ಯಂಟಿಜೆನ್ ಟೆಸ್ಟ್ ಜಿಲ್ಲಾ ಮಟ್ಟದ ಕೊರೋನಾ ಕೋರ್ ಸಮಿತಿ ತೀರ್ಮಾನ ಪ್ರಕಾರ ಮುಂದೆ ತಿಳಿಸುವ ಸೂಚನೆ ವರೆಗೆ ಮುಂದೂಡಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಈಗಾಗಲೇ ತಿಳಿಸಿದ್ದಾರೆ. ಜಿಲ್ಲಾಡಳಿತ ಜಾರಿಗೊಳಿಸುತ್ತಿರುವ ಕೆಲವೊಂದು ಮಾನದಂಡಗಳು ಸೂಕ್ತ ರೀತಿಯಲ್ಲಿ ಪಾಲನೆಯಾಗುತ್ತಿಲ್ಲ ಎಂಬ ದೂರುಗಳು ವ್ಯಾಪಕವಾಗಿದೆ.