ಕಾಸರಗೋಡು: ಸ್ಥಳೀಯಾಡಳಿತ ಸಂಸ್ಥೆಗಳ ಚುನಾವಣೆ ಸಂಬಂಧ ಕರ್ತವ್ಯಕ್ಕೆ ನೇಮಕಗೊಂಡಿರುವ ಸಿಬ್ಬಂದಿಗೆ ತರಬೇತಿ ನೀಡಿಕೆಗಾಗಿ ಬ್ಲೋಕ್/ನಗರಸಭೆ ಮಟ್ಟದ ಮಾಸ್ಟರ್ ಟ್ರೈನಿಗಳಿಗೆ ತರಬೇತಿ ಕಾರ್ಯಕ್ರಮ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜರುಗಿತು. ಜಿಲ್ಲಧಿಕಾರಿ ಡಾ.ಡಿ.ಸಜಿತ್ ಬಾಬು ಉದ್ಘಾಟಿಸಿದರು. ಚುನಾವನೆ ವಿಭಾಗ ಸಹಾಯಕ ಜಿಲ್ಲಧಿಕಾರಿ ರಮೇಂದ್ರನ್ ಎ.ಕೆ., ತರಬೇತಿ ವಿಭಾಗ ನೋಡೆಲ್ ಅಧಿಕಾರಿ ಕೆ.ಬಾಲಕೃಷ್ಣನ್ ಉಪಸ್ಥಿತರಿದ್ದರು. ಜಿಲ್ಲಾ ಮಟ್ಟದ ಮಾಸ್ಟರ್ ತರಬೇತುದಾರರಾದ ಝುಬೈರ್ ಎಲ್.ಕೆ., ಹಂಝಾ ಎಂ., ಸುರೇಶ್ ಬಾಬು ಜಿ. ನಾರಾಯಣನ್ ಕೆ. ತರಗತಿ ನಡೆಸಿದರು. ಮುಂದಿನ ದಿನಗಳಲ್ಲಿ ಬ್ಲೋಕ್/ ನಗರಸಭೆ ಮಟ್ಟದ ತರಬೇತುದಾರರು ಚುನಾವಣೆಗೆ ನೇಮಕಗೊಂಡಿರುವ ಸಿಬ್ಬಂದಿಗೆ ತರಬೇತಿ ನೀಡಲಿದ್ದಾರೆ.