ಕಾಸರಗೊಡು: ಸ್ಥಳೀಯಾಡಳಿತ ಸಂಸ್ಥೆಗಳ ಚುನಾವಣೆ ನಡೆಯುವ ವೇಳೆ ಹಸುರು ಸಂಹಿತೆ ಪಾಲನೆ ಕಡ್ಡಾಯ ಎಂದು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ತಿಳಿಸಿದರು. ಚುನಾವಣೆ ಪ್ರಕ್ರಿಯೆ, ಅಭ್ಯರ್ಥಿಗಳ ಪ್ರಚಾರ ಸಹಿತ ಎಲ್ಲ ಚಟುವಟಿಕೆಗಳೂ ಪ್ರಕೃತಿ ಸೌಹಾರ್ದವಾಗಿ ನಡೆಸುವಲ್ಲಿ ಸಿಬ್ಬಂದಿ, ರಾಜಕೀಯ ಪಕ್ಷಗಳು, ಅಭ್ಯರ್ಥಿಗಳು ಸಹಕರಿಸುವಂತೆ ಅವರು ವಿನಂತಿಸಿದರು.
ಗಮನಿಸಬೇಕಾದ ವಿಚಾರಗಳು:
ಚುನಾವಣೆ ಪ್ರಚಾರ ಸಾಮಾಗ್ರಿಗಳಾಗಿ ಸುಲಭದಲ್ಲಿ ಮಣ್ಣಲ್ಲಿ ಬೆರೆಯುವ ಸಾಮಾಗ್ರಿಗಳನ್ನು ಮಾತ್ರ ಬಳಸಬೇಕು.
ಪ್ರಚಾರ ನಡೆಸುವಲ್ಲಿ ಪ್ಲಾಸ್ಟಿಕ್ ನಿರ್ಮಿತ ನೂಲು, ರಿಬ್ಬನ್ ಸಹಿತ ಸಾಮಾಗ್ರಿಗಳನ್ನು ಬಳಸಕೂಡದು. ಪ್ಲಾಸ್ಟಿಕ್, ಪಿ.ವಿ.ಸಿ. ನಿರ್ಮಿತ ಫಲಕ, ಭಿತ್ತಿಪತ್ರ, ಧ್ವಜ ಇತ್ಯಾದಿ ಬಳಸಕೂಡದು.
ಚುನಾವಣೆ ಪ್ರಕ್ರಿಯೆ ಸಂಬಒಧ ಎಲ್ಲ ಅಧಿಕೃತ ಅಗತ್ಯಗಳಿಗಾಗಿ ಕಾಟನ್ ಬಟ್ಟೆ, ಕಾಗದ, ಪಾಲಿ, ಏತ್ತಲಿನ್ ಇತ್ಯಾದಿ ವಸ್ತುಗಳನ್ನು ಮಾತ್ರ ಬಳಸಬೇಕು.
ಮತದಾನ ನಂತರ ಮತಗಟ್ಟೆಗಳಲ್ಲಿ ಉಳಿದುಕೊಳ್ಳುವ ಕಾಗದ ಸಹಿತ ಪಾಳುವಸ್ತುಗಳನ್ನು ತೆರವುಗೊಳಿಸಿ, ನಾಶಪಡಿಸುವ ನಿಟ್ಟಿನಲ್ಲಿ ಆಯಾ ಸ್ಥಳೀಯಾಡಳಿತ ಸಂಸ್ಥೆಗಳು ಕ್ರಮ ಕೈಗೊಳ್ಳಬೇಕು.
ಮತಗಟ್ಟೆಗಳಲ್ಲಿ, ವಿತರಣೆ-ಸ್ವೀಕಾರ ಕೇಂದ್ರಗಲಲ್ಲಿ ಕಂಡುಬರುವ ಜೈವಿಕ-ಅಜೈವಿಕ ತ್ಯಾಜ್ಯ ಗಳನ್ನು ವಿಂಗಡಿಸಿ ಸಂಗ್ರಹಿಸುವ ವ್ಯವಸ್ಥೆ, ನಂತರ ಅವನ್ನು ವೈಜ್ಞಾನಿಕ ವಾಗಿ ಸಂಸ್ಕರಣೆ ನಡೆಸುವ ಕ್ರಮಗಳನ್ನು ಸ್ಥಳೀಯಾಡಳಿತ ಸಂಸ್ಥೆಗಳ ಕಾರ್ಯದರ್ಶಿಗಳು ಕೈಗೊಳ್ಳಬೇಕು.
ಬಳಸಿದ ಮಾಸ್ಕ್, ಗ್ಲೌಸ್ ಇತ್ಯಾದಿಗಳನ್ನು ಪ್ರತ್ಯೇಕವಾಗಿ ಸಂಗ್ರಹಿಸಿ ಸಂಸ್ಕರಣೆ ನಡೆಸುವ ಸಿದ್ಧತೆಯ ಹೊಣೆ ಕಾರ್ಯದರ್ಶಿಗಳದು.
ಮತದಾನ ಕಳೆದ ನಂತರ ಪ್ರಕಟಣೆಗಳನ್ನು, ಫಲಕಗಳನ್ನು ಸ್ಥಾಪಿಸಿದವರೇ ತೆರವುಗೊಳಿಸಬೇಕು. ಇದನ್ನುನಡೆಸದೇ ಇದ್ದಲ್ಲಿ 5 ದಿನಗಳ ಅವಧಿಯಲ್ಲಿ ತೆರವುಗೊಳಿಸಿ ಸ್ಥಳೀಯಾಡಳಿತ ಸಂಸ್ಥೆಗಳ ಕಾರ್ಯದರ್ಶಿ ಸಂಬಮದಪಟ್ಟ ಅಭ್ಯರ್ಥಿಗಳಿಂದ ವೆಚ್ಚ ವಸೂಲಿ ಮಾಡಲಿದ್ದಾರೆ. ಈ ವಲಯದಲ್ಲಿ ಜಾರಿಯಲ್ಲಿರುವ ಎಲ್ಲ ಸರಕಾರಿ, ನ್ಯಾಯಾಲಯ ಆದೇಶ, ನಿಬಂಧನೆಗಳನ್ನು ಅಭ್ಯರ್ಥಿಗಳು, ಇತರ ಸಂಬಂಧಪಟ್ಟವರು ಕಡ್ಡಾಯವಾಗಿ ಪಾಲಿಸಬೇಕು.
ಒಂದೇ ಬಾರಿ ಬಳಸಿ ಬಿಸುಟುವ ಎಲ್ಲ ಪ್ಲಾಸ್ಟಿಕ್, ತತ್ಸಂಬಂಧಿ ಸಾಮಾಗ್ರಿಗಳನ್ನು ನಿಷೇಧಿಸಲಾಗಿದೆ. ಬಟ್ಟೆ ಎಂಬುದು ಕಾಟನ್ ಬಟ್ಟೆ ಮಾತ್ರ. ಯಾವ ರೀತಿಯ ವಸ್ತುವನ್ನು ಯಾವ ಸಂಸ್ಥೆಯಿಮದ ಮುಧ್ರಣ ನಡೆಸಲಾಗಿದೆ ಎಂದು ನಮೂದಿಸಬೇಕು.
ಆದೇಶ ಉಲ್ಲಂಘಿಸಿ ಮುದ್ರಣ ನಡೆಸಿದ ಸಂಸ್ಥೆಗಳ ವಿರುದ್ಧ ಪರವಾನಗಿ ರದ್ದು, ಅಬ್ಯರ್ಥಿ/ಪಕ್ಷಗಳಿಂದ / ಸಂಸ್ಥೆಗಳಿಂದ 10 ಸಾವಿರ ರೂ., 25 ಸಾವಿರ ರೂ., 50 ಸಾವಿರ ರೂ. ದಂಡ ವಸೂಲಿ ನಡೆಸಲಾಗುವುದು.