ತಿರುವನಂತಪುರ: ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ಬಿಜೆಪಿ ರಾಜ್ಯ ಅಧ್ಯಕ್ಷ ಕೆ.ಸುರೇಂದ್ರನ್ ಹೇಳಿದ್ದಾರೆ. ಸ್ಥಳೀಯ ಚುನಾವಣೆಯ ಫಲಿತಾಂಶಗಳು ಈ ನಿಟ್ಟಿನಲ್ಲಿ ಸ್ಪಷ್ಟ ಫಲಿತಾಂಶವನ್ನು ನೀಡುತ್ತದೆ ಎಂದು ಅವರು ಹೇಳಿದರು. ಪಕ್ಷದೊಳಗಿನ ಭಿನ್ನಾಭಿಪ್ರಾಯಗಳ ಹಿನ್ನೆಲೆಯಲ್ಲಿ ಕೇಂದ್ರ ನಾಯಕತ್ವ ದೆಹಲಿಗೆ ಕರೆಸಿಕೊಂಡ ಬಳಿಕ ಸುರೇಂದ್ರನ್ ಮಾಧ್ಯಮಗಳೊಂದಿಗೆ ಮಾತನಾಡುತ್ತಿದ್ದರು.
'ಕೇರಳ ಮತ್ತು ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದೆ. ಬಿಹಾರ ಮತ್ತು ಇತರ ರಾಜ್ಯಗಳಲ್ಲಿನ ಚುನಾವಣೆ ಫಲಿತಾಂಶಗಳು ಸಮೀಕ್ಷೆಗಳನ್ನು ಮೀರಿದೆ ಎಂದು ಕೆ ಸುರೇಂದ್ರನ್ ಹೇಳಿದ್ದಾರೆ.
ಕೇರಳದಲ್ಲಿ ಎಡ ಸರ್ಕಾರದ ಬಲ ಹದಗೆಡುತ್ತಿದೆ ಎಂದು ಸುರೇಂದ್ರನ್ ಆರೋಪಿಸಿದರು. ಎಡ-ಬಲ ರಂಗಗಳೆರಡೂ ಭ್ರಷ್ಟರು ಎಂದು ಸಾಬೀತಾಗಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ತನ್ನನ್ನು ಕರೆಸಿರುವುದರಲ್ಲಿ ವಿಶೇಷವೇನೂ ಇಲ್ಲ. ಮತ್ತು ಇದು ಸಾಮಾನ್ಯ ಭೇಟಿಯಾಗಿದೆ ಎಂದು ಸುರೇಂದ್ರನ್ ಹೇಳಿದ್ದಾರೆ. ಬಿಜೆಪಿಯಲ್ಲಿ ಬಹಿರಂಗ ಗುಂಪುಗಾರಿಕೆ-ಭಿನ್ನಮತ ವಿವಾದದ ಹಿನ್ನೆಲೆಯಲ್ಲಿ ದೆಹಲಿಗೆ ಕರೆಸಿಕೊಳ್ಳುವಂತೆ ಆರ್‍ಎಸ್‍ಎಸ್ ಸುರೇಂದ್ರನ್‍ಗೆ ಎಚ್ಚರಿಕೆ ನೀಡಿತ್ತು.
ಹುಟ್ಟಿಕೊಂಡಿರುವ ವಿವಾದವನ್ನು ತಕ್ಷಣ ಬಗೆಹರಿಸಲು ಆರ್‍ಎಸ್‍ಎಸ್ ಸುರೇಂದ್ರನ್‍ರನ್ನು ಕೇಳಿತು. ಕೆ.ಸುರೇಂದ್ರನ್ ವಿರುದ್ಧ ಶೋಭಾ ಸುರೇಂದ್ರನ್ ಸೇರಿದಂತೆ 24 ಮಂದಿ ಹಿರಿಯ ನಾಯಕರು ಬಿಜೆಪಿ ಕೇಂದ್ರ ನಾಯಕತ್ವ ಮತ್ತು ಆರ್‍ಎಸ್‍ಎಸ್‍ಗೆ ದೂರು ನೀಡಿದ್ದರು.