ತಿರುವನಂತಪುರ: ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಹೆಚ್ಚುವರಿ ಖಾಸಗಿ ಕಾರ್ಯದರ್ಶಿ ಸಿ.ಎಂ. ರವೀಂದ್ರನ್ ಅವರಿಗೆ ಜಾರಿ ನಿರ್ದೇಶನಾಲಯ ನೋಟಿಸ್ ನೀಡಿದೆ. ಎಂ.ಶಿವಶಂಕರ್ ಅವರ ಹೇಳಿಕೆಯನ್ನು ಆಧರಿಸಿ ನೋಟಿಸ್ ನೀಡಲಾಗಿದೆ. ಅವರು ಶುಕ್ರವಾರ ಕೊಚ್ಚಿಯಲ್ಲಿರುವ ಕಚೇರಿಗೆ ಹಾಜರಾಗಲಿದ್ದಾರೆ ಎಂದು ಇಡಿ ಸ್ಪಷ್ಟಪಡಿಸಿದೆ.
ಮಾಧ್ಯಮ ವರದಿಗಳ ಪ್ರಕಾರ, ಐಟಿ ಇಲಾಖೆಯಲ್ಲಿನ ವ್ಯವಹಾರಗಳಿಗೆ ಸಂಬಂಧಿಸಿದಂತೆ ನೋಟಿಸ್ ನೀಡಲಾಗಿದೆ. ಶಿವಶಂಕರ್ ಮತ್ತು ರವೀಂದ್ರನ್ ನಡುವಿನ ಕೆಲವು ವಹಿವಾಟುಗಳು ಅನುಮಾನಾಸ್ಪದವಾಗಿದ್ದವು. ಈ ಪರಿಸ್ಥಿತಿಯಲ್ಲಿ ಅವರಿಗೆ ಇಡಿ ನೋಟಿಸ್ ನೀಡಿದೆ ಎನ್ನಲಾಗುತ್ತಿದೆ.
ಲೈಫ್ ಮಿಷನ್ ಯೋಜನೆಯ ಜೊತೆಗೆ, ಜಾರಿ ನಿರ್ದೇಶನಾಲಯವು ಇತರ 4 ಪ್ರಮುಖ ಯೋಜನೆಗಳನ್ನು ಪರಿಶೀಲಿಸುತ್ತಿದೆ. ಕೆ ಫೆÇೀನ್, ಕೊಚ್ಚಿ ಸ್ಮಾರ್ಟ್ ಸಿಟಿ, ಟೆಕ್ನೋಪಾಕ್ರ್ನ ಟೊರೆಸ್ ಟೌನ್ ಮತ್ತು ಇ-ಮೊಬಿಲಿಟಿ ಯೋಜನೆಯ ಬಗ್ಗೆ ಇಡಿ ತನಿಖೆ ನಡೆಸುತ್ತಿದೆ. ಇಡಿ ಸಹಾಯಕ ನಿರ್ದೇಶಕ ಪಿ.ರಾಧಾಕೃಷ್ಣನ್ ಈ ಯೋಜನೆಗಳ ದಾಖಲೆಗಳನ್ನು ಕೋರಿ ಪತ್ರವನ್ನು ಸಲ್ಲಿಸಿದ್ದರು. ಯೋಜನೆಯ ಸೋಗಿನಲ್ಲಿ ಬೇರೆ ಯಾವುದೇ ವಹಿವಾಟು ನಡೆದಿದೆಯೇ ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ.