ಕುಂಬಳೆ: ಕುಂಬಳೆ ಸರಕಾರಿ ಹೈಯರ್ ಸೆಕೆಂಡರಿ ಶಾಲೆಗಾಗಿ ಕಿಫ್ ಬಿಯಿಂದ 3 ಕೀಟಿ ರೂ. ವೆಚ್ಚದಲ್ಲಿ ನೂತನ ಕಟ್ಟಡ ನಿರ್ಮಿಸಲಾಗುತ್ತಿದ್ದು, ಇದರ ಶಿಲಾನ್ಯಾಸ ಬುಧವಾರ ಜರುಗಿತು. ರಾಜ್ಯದ 46 ಕಟ್ಟಡಗಳ, 79 ಶಾಲಾ ಕಟ್ಟಡಗಳ ಉದ್ಘಾಟನೆ ಅಂಗವಾಗಿ ಈ ಸಮಾರಂಭವೂ ಜರುಗಿತು.
ವೀಡಿಯೋ ಕಾನ್ ಫೆರೆನ್ಸ್ ಮೂಲಕ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಈ ಕಾರ್ಯ ನೆರವೇರಿಸಿದರು. ಈ ಸಂದರ್ಭ ಮಾತನಾಡಿದ ಅವರು ರಾಜ್ಯ ಸರಕಾರದ ಸಾರ್ವಜನಿಕ ಶಿಕ್ಷಣ ಯಜ್ಞ ಯೋಜನೆ ರಾಜ್ಯದ ಸಾರ್ವಜನಿಕ ಶಿಕ್ಷಣಾಲಯಗಳ ಸಮಗ್ರ ಪ್ರಗತಿಗೆ ಮುನ್ನುಡಿ ಬರೆದಿದೆ. ಇದು ರಾಜ್ಯ ಸರಕಾರ ಸಾರ್ವಜನಿಕ ಶಿಕ್ಷಣ ಕ್ಷೇತ್ರದ ಬಗ್ಗೆ ತಲೆದಿರುವ ಕಾಳಜಿಗೆ ದ್ಯೋತಕ ಎಂದು ನುಡಿದರು.
ರಾಜ್ಯದ ಹಲವೆಡೆ ಖಾಸಗಿ ಶಾಲೆಗಳು ಅತ್ಯಾಧುನಿಕ ಸೌಲಭ್ಯಗಳೊಂದಿಗೆ ನೆಲೆಗೊಳ್ಳುತ್ತಿದ್ದರೆ ಸಾರ್ವಜನಿಕ ಶಿಕ್ಷಣಾಲಯಗಳು ದುಸ್ಥಿತಿಯಲ್ಲಿದ್ದುವು. ಇದಕ್ಕೆ ಬಲು ದೊಡ್ಡ ಬದಲಾವಣೆ ತರಲು ರಾಜ್ಯ ಸರಕಾರಕ್ಕೆ ಸಾಧ್ಯವಾಗಿದೆ. ಈಗ ಹೆತ್ತವರು ತಮ್ಮ ಮಕ್ಕಳನ್ನು ಸಾರ್ವಜನಿಕ ಶಿಕ್ಷಣಾಲಯಗಳಿಗೆ ಸೇರ್ಪಡೆಗೊಳಿಸಲು ಉತ್ಸುಕರಾಗುತ್ತಿದ್ದಾರೆ. ಶಿಕ್ಷಣವನ್ನು ಅರ್ಧದಲ್ಲೇ ಮೊಟಕುಗೊಳಿಸಿ ತೆರಳುವ ಕೆಲವು ವಿದ್ಯಾರ್ಥಿಗಳ ಕ್ರಮಕ್ಕೂ ನಿಯಂತ್ರಣ ಲಭಿಸಿದೆ. ಈ ಶೈಕ್ಷಣಿಕ ಬದಲಾವಣೆಗಳು ಪ್ರಜಾಪ್ರಭುತ್ವ ನೀತಿ ಪ್ರಬಲೀಕರಣಕ್ಕೆ ಪೂರಕವಾಗಿವೆ ಎಂದವರು ನುಡಿದರು.
ಈ ಸಂದರ್ಭ ಮಾತನಾಡಿದ ಹಣಕಾಸು ಸಚಿವ ಡಾ.ಥಾಮಸ್ ಐಸಕ್ ಅವರು 3683 ಕೋಟಿ ರೂ. ವೆಚ್ಚದಲ್ಲಿ ರಾಜ್ಯದ 2004 ಸರಕಾರಿ ಶಾಲೆಗಳ ಅಭಿವೃದ್ಧಿ ನಡೆದಿದೆ. ರಾಜ್ಯದ 125 ಶಾಲೆಗಳು ಮಾದರಿ ರೂಪದಲ್ಲಿ ಪ್ರಗತಿ ಸಾಧಿಸಿವೆ. ವಿವಿಧ ಇಲಾಖೆಗಳ ಸಹಕಾರದೊಂದಿಗೆ ಇದು ಸಾಧ್ಯವಾಗಿದೆ ಎಂದವರು
ಶಿಕ್ಷಣ ಸಚಿವ ಪೆÇ್ರ.ಸಿ.ರವೀಂದ್ರನಾಥ್ ಅಧ್ಯಕ್ಷತೆ ವಹಿಸಿದ್ದರು. ಸಾರ್ವಜನಿಕ ಶಿಕ್ಷಣ ಇಲಾಖೆ ಕಾರ್ಯದರ್ಶಿ ಎ.ಷಾಜಹಾನ್ ಉಪಸ್ಥಿತರಿದ್ದರು.
ಶಾಸಕ ಎಂ.ಸಿ.ಕಮರುದ್ದೀನ್ ಶಿಪಾಫಲಕ ಅನಾವರಣಗೊಳಿಸಿದರು. ಸೌರಶಕ್ತಿ ಘಟಕವನ್ನು ಜಿಲ್ಲಾ ಪಂಚಾಯತ್ ಅಧ್ಯಕ್ಷ ಎ.ಜಿ.ಸಿ.ಬಶೀರ್ ಉದ್ಘಾಟಿಸಿದರು. ಕುಂಬಳೆ ಗ್ರಾಮ ಪಂಚಾಯತ್ ಅಧ್ಯಕ್ಷ ಕೆ.ಎಲ್.ಪುಂಡರೀಕಾಕ್ಷ, ಜಿಲ್ಲಾ ಪಂಚಾಯತ್ ಸ್ಥಾಯೀ ಸಮಿತಿ ಅಧ್ಯಕ್ಷೆ ಫರೀದಾ ಝಕೀರ್, ಗ್ರಾಮ ಪಂಚಾಯತ್ ಸ್ಥಾಯೀ ಸಮಿತಿ ಅಧ್ಯಕ್ಷ ಎ.ಕೆ.ಆರಿಫ್, ಬ್ಲೋಕ್ ಪಂಚಾಯತ್ ಸದಸ್ಯ ಸತ್ಯಶಂಕರ ಭಟ್, ಗ್ರಾಮ ಪಂಚಾಯತ್ ಸದಸ್ಯ ರಮೇಶ್ ಭಟ್, ಶಿಕ್ಷನ ಉಪನಿರ್ದೇಶಕಿ ಕೆ.ವಿ.ಪುಷ್ಪಾ, ಡಿ.ಇ.ಒ. ಎನ್.ನಂದಿಕೇಶ, ಸಾರ್ವಜನಿಕ ಶಿಕ್ಷಣ ಜಿಲ್ಲಾ ಸಂಚಾಲಕ ದಿಲೀಪ್ ಕುಮಾರ್, ಶಾಲೆಯ ಪ್ರಾಂಶುಪಾಲ ಕೆ.ಪಿ.ಗಿರೀಶನ್, ಮುಖ್ಯಶಿಕ್ಷಕಿ ಲಿಂಡಮ್ಮ ಜಾನ್, ಪಿ.ಟಿ.ಎ. ಅಧ್ಯಕ್ಷ ಅಹಮ್ಮದಾಲಿ ಕುಂಬಳೆ, ಉಪಾದ್ಯಕ್ಷರಾದ ಕೊಗ್ಗು,ಯೂಸುಫ್ ಉಳುವಾರು, ಸ್ಟಾಫ್ ಸೆಕ್ರಟರಿ ವಿ.ಕೆ.ವಿ.ರಮೇಶ್, ಮಾಜಿ ಅಧ್ಯಕ್ಷರುಗಳಾದ ಅಶ್ರಫ್ ಬಾಯಾರು, ಸುರೇಶ್ ರಾವ್, ಫಾರೂಖ್ ಶಿರಿಯಾ, ಮುಹಮ್ಮದ್ ಆನೆಬಾಗಲು, ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳಾದ ರಘುದೇವನ್ ಮಾಸ್ಟರ್, ಜಯರಾಂ ಬಳ್ಳಂಕೂಡಲ್, ಅಶ್ರಫ್ ಕೊಡಿಯಮ್ಮೆ, ಮಂಜುನಥ ಆಳ್ವ, ಸುಧಾಕರ ಕಾಮತ್, ಶಾಲೆಯ ಸೀನಿಯರ್ ಅಸಿಸ್ಟೆಂಟ್ ಪಿ.ಉಮಾ ಮೊದಲಾದವರು ಉಪಸ್ಥಿತರಿದ್ದರು.
ಮೂರು ಅಂತಸ್ತಿನಕಟ್ಟಡದಲ್ಲಿ 15 ತರಗತಿ ಕೊಠಡಿಗಳು ಇರುವುವು. ಮೂರು ಅಂತಸ್ತಿನಲ್ಲೂ ಶೌಚಾಲಯ ಸೌಲಭ್ಯಗಳು ಇರುವುವು. ಪ್ರೌಢಶಾಲೆ ವಿಭಾಗಕ್ಕಾಗಿ ಈ ಕಟ್ಟಡ ಬಳಕೆಯಾಗಲಿದೆ.