ಕಾಸರಗೋಡು: ಜುವೆಲ್ಲರಿ ಹೂಡಿಕೆ ವಂಚನೆ ಪ್ರಕರಣದಲ್ಲಿ ಎರಡು ದಿನಗಳಿಂದ ಕಾಲ ಪೆÇಲೀಸ್ ಕಸ್ಟಡಿಯಲ್ಲಿರುವ ಮಂಜೇಶ್ವರ ಶಾಸಕ ಎಂ.ಸಿ ಖಮರುದ್ದೀನ್ ರನ್ನು ವಿಶೇಷ ತನಿಖಾ ತಂಡ (ಎಸ್‍ಐಟಿ) ಪ್ರಶ್ನಿಸುತ್ತಿದೆ. ಕಾಸರಗೋಡು ಜಿಲ್ಲಾ ಪೆÇಲೀಸ್ ಮುಖ್ಯಸ್ಥರ ಕಚೇರಿಯಲ್ಲಿ ವಿಚಾರಣೆ ನಡೆಯುತ್ತಿದೆ. ವಿಚಾರಣೆಗೆ ಶಾಸಕರು ಸಂಪೂರ್ಣ ಸಹಕಾರ ನೀಡುತ್ತಿದ್ದಾರೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ. ತಾನು ಯಾವುದೇ ತಪ್ಪು ಮಾಡಿಲ್ಲ ಮತ್ತು ಎಲ್ಲರೂ ತನಗೆ ಮೋಸ ಮಾಡಿದ್ದಾರೆ ಎಂದು ಖಮರುದ್ದೀನ್ ಪುನರುಚ್ಚರಿಸಿದರೆಂದು ತಿಳಿದುಬಂದಿದೆ.
ಜುವೆಲ್ಲರಿ ಹೂಡಿಕೆದಾರರ ಹಣದ ಜವಾಬ್ದಾರಿಯನ್ನು ಶಾಸಕರು ಒಪ್ಪಿಕೊಳ್ಳದಿರಲು ಸಾಧ್ಯವಿಲ್ಲ ಎಂದು ತನಿಖಾ ತಂಡ ತಿಳಿಸಿದೆ. ಹೂಡಿಕೆದಾರರ ಹಣವನ್ನು ಬಳಸಿದ ರೀತಿ, ಬೆಂಗಳೂರಿನಲ್ಲಿ ಭೂಮಿ ಸೇರಿದಂತೆ ಖಾಸಗಿ ಆಸ್ತಿ ಸಂಪಾದನೆಯ ವಿವರಗಳು ಮತ್ತು ಯಾವುದೇ ಬೇನಾಮಿ ವಹಿವಾಟು ನಡೆದಿದೆಯೇ ಎಂದು ತನಿಖಾ ತಂಡ ಪರಿಶೀಲಿಸುತ್ತಿದೆ. ವಿಚಾರಣೆ ಇಂದೂ ಮುಂದುವರಿಯಲಿದೆ. ಮೊದಲ ತನಿಖೆಯಲ್ಲಿ ಕೇವಲ 13 ಕೋಟಿ ರೂ.ಗಳ ವಂಚನೆ ಪತ್ತೆಯಾಗಿದೆ. ಇವುಗಳಿಗಿಂತ ಎರಡು ಪಟ್ಟು ಹೆಚ್ಚು ವಂಚನೆ ವಿಚಾರಣೆಗೆ ಬಾಕಿಯಿದೆ. ಈ ಬಗ್ಗೆ ತನಿಖಾ ತಂಡಕ್ಕೆ ವಿವರ ಸಂಗ್ರಹಕ್ಕೆ ಮತ್ತಷ್ಟು ಪ್ರಶ್ನಿಸಬೇಕಾಗಲಿದೆ.
ಏತನ್ಮಧ್ಯೆ, ಖಮರುದ್ದೀನ್ ಅವರ ಜಾಮೀನು ಅರ್ಜಿಯನ್ನು ಹೊಸದುರ್ಗ ನ್ಯಾಯಾಲಯ ಇಂದು ವಿಚಾರಣೆ ನಡೆಸಲಿದೆ. ಹೆಚ್ಚಿನ ಪ್ರಕರಣಗಳ ಹಿನ್ನೆಲೆಯಲ್ಲಿ ಖಮರುದ್ದೀನ್ ಬಂಧನವನ್ನು ಇಂದು ದಾಖಲಿಸುವ ಸಾಧ್ಯತೆಯಿದೆ. ಪೂಕೋಯಾ ತಂಙಳ್ ತಮ್ಮ ಮತ್ತು ಖಮರುದ್ದೀನ್ ವಿರುದ್ಧ ಚಂದೇರಾ ಠಾಣೆಯಲ್ಲಿ ನಿನ್ನೆ ಮತ್ತೆ ನಾಲ್ಕು ವಂಚನೆ ಪ್ರಕರಣಗಳನ್ನು ದಾಖಲಿಸಿಸಲಾಗಿದೆ. ಇದರೊಂದಿಗೆ ಶಾಸಕರ ವಿರುದ್ಧ 118 ವಂಚನೆ ಪ್ರಕರಣಗಳು ದಾಖಲಾಗಿವೆ. 118 ಪ್ರಕರಣಗಳಲ್ಲಿ 77 ಪ್ರಕರಣಗಳನ್ನು ಎಸ್‍ಐಟಿ ತನಿಖೆ ನಡೆಸುತ್ತಿದೆ. ಇತರ ಏಳು ಪ್ರಕರಣಗಳಲ್ಲಿ ಶಾಸಕರನ್ನು ವಿಶೇಷ ತಂಡ ಬಂಧಿಸಿದೆ. ನಾಪತ್ತೆಯಾದ ಮೊದಲ ಆರೋಪಿ ಪೂಕೋಯಾ ತಂಙಳ್ ಅವರು ಜಿಲ್ಲೆಯನ್ನು ತೊರೆದಿದ್ದಾರೆ ಎಂದು ತಿಳಿದುಬಂದಿದೆ. ಆತನ ಹುಡುಕಾಟ ತೀವ್ರಗೊಂಡಿದೆ ಎಂದು ತನಿಖಾ ತಂಡ ತಿಳಿಸಿದೆ.