HEALTH TIPS

ಲವ್ ಜಿಹಾದ್‍ಗೆ ಕಡಿವಾಣ ಹಾಕಲು ಕ್ರಮಕೈಗೊಳ್ಳಲು ಕೇರಳ ಸರ್ಕಾರಕ್ಕೆ ವಿಶ್ವಹಿಂದು ಪರಿಷತ್ ಆಗ್ರಹ-ಸಂಚಿಗೆ ಬಲಿಯಾಗುವ ಮುನ್ನ ಎಚ್ಚರ-ಶರಣ್ ಪಂಪ್ ವೆಲ್

  

         ಕಾಸರಗೋಡು: ದೇಶಾದಾದ್ಯಂತ ಲವ್ ಜಿಹಾದ್‍ನ ಪ್ರಕರಣಗಳು ಅಪಾಯಕಾರಿಯಾಗಿ ವಿಪರೀತವಾಗಿ ಹೆಚ್ಚುತ್ತಿದ್ದು ಮುಗ್ಧ ಅಮಾಯಕ ಹಿಂದೂ ಯುವತಿಯರು ಈ ಷಡ್ಯಂತ್ರಕ್ಕೆ ಬಲಿಯಾಗುತ್ತಿರುವುದು ಇಡೀ ಹಿಂದೂ ಸಮಾಜಕ್ಕೆ ಆತಂಕವನ್ನುಂಟುಮಾಡಿದೆ. ಅದೇ ರೀತಿ ಕೇರಳ ರಾಜ್ಯದಲ್ಲಿ  ಕೂಡ ಲವ್‍ಜಿಹಾದ್‍ನ ಪ್ರಕರಣಗಳು ಹೆಚ್ಚಾಗುತ್ತಿದ್ದು ಸಾವಿರಾರು ಹಿಂದು, ಕ್ರೈಸ್ತ ಹೆಣ್ಣುಮಕ್ಕಳು ಈ ಸಂಚಿಗೆ ಬಲಿಯಾಗುತ್ತಿದ್ದಾರೆ. ಎರಡು ದಿನಗಳ ಹಿಂದೆ ಮಂಜೇಶ್ವರ ಕಡಂಬಾರಿನ 22ರ  ಹರೆಯದ ಹೆಣ್ಣು ಮಗಳನ್ನು ಅನ್ಯಮತೀಯ ಯುವಕನೋರ್ವ  ಪ್ರೀತಿ ಪ್ರೇಮದ ಹೆಸರಿನಲ್ಲಿ ಅಪಹರಿಸಿ ವಿವಾಹವಾಗಲು ಯತ್ನಿಸುತ್ತಿದ್ದು, ಇದು ಲವ್ ಜಿಹಾದ್‍ನ ಮೂಲಕ ಹಿಂದುಗಳ ಮೇಲೆ ದಬ್ಬಾಳಿಕೆ ನಡೆಸಿ ಹಿಂದು ಹೆಣ್ಣು ಮಕ್ಕಳನ್ನು ಪ್ರೇಮಪಾಶಕ್ಕೆ ಸಿಲುಕಿಸಿ ಇಸ್ಲಾಮಿಗೆ ಮತಾಂತರ ಮಾಡಲಾಗುತ್ತಿರುವ ಷಡ್ಯಂತ್ರವಾಗಿದೆ.  ಪ್ರೇಮದ ಮುಖವಾಡ ಧರಿಸಿ ಇಸ್ಲಾಮಿಕ್ ಜಿಹಾದಿನ ಭಾಗವಾಗಿರುವ ಲವ್ ಜಿಹಾದನ್ನು ತಡೆಗಟ್ಟಲು ಕಠಿಣ ಕಾನೂನನ್ನು ರೂಪಿಸಿ ಮುಗ್ಧ ಅಮಾಯಕ ಹಿಂದೂ ಯುವತಿಯರನ್ನು ಹಿಂದೂ ಕುಟುಂಬಗಳನ್ನು ರಕ್ಷಿಸಲು ಕಠಿಣ ಕಾನೂನು ರೂಪೀಸಬೇಕೆಂದು ವಿಶ್ವ ಹಿಂದೂ ಪರಿಷತ್ತಿನ ವಿಭಾಗ ಕಾರ್ಯದರ್ಶಿ ಶರಣ್ ಪಂಪ್‍ವೆಲ್ ಅವರು ಶುಕ್ರವಾರ ಸಂಜೆ ಕಾಸರಗೋಡು ಪ್ರೆಸ್‍ಕ್ಲಬ್‍ನಲ್ಲಿ  ಕರೆದ ಸುದ್ದಿಗೋಷ್ಠಿಯಲ್ಲಿ ಕೇರಳ ಸರ್ಕಾರವನ್ನು ಒತ್ತಾಯಿಸಿದ್ದಾರೆ.

      ಲವ್ ಜಿಹಾದ್‍ಗೆ ಕಡಿವಾಣ ಹಾಕಲು ಬಜರಂಗದಳ ಸಿದ್ಧ. ಆದರೆ ಕಾಲೇಜ್ ಕ್ಯಾಂಪಸ್‍ಗಳು ಮಹಿಳಾ ಹಾಸ್ಟೆಲ್‍ಗಳು, ಹೊಟೇಲ್‍ಗಳು, ಸಿನಿಮಾ ಮಂದಿರಗಳು, ಬ್ಯೂಟಿ ಪಾರ್ಲರ್‍ಗಳು, ಮೊಬೈಲ್ ಸೆಂಟರ್‍ಗಳು, ಬಟ್ಟೆ ಅಂಗಡಿಗಳು ಮತ್ತು  ಮಹಿಳೆಯರು ಹೆಚ್ಚಾಗಿ ಬರುವ ವ್ಯಾಪಾರಿ ವ್ಯವಹಾರ ಕೇಂದ್ರಗಳನ್ನು ಗುರಿಯಾಗಿಟ್ಟುಕೊಂಡು ಸಂಚು ರೂಪಿಸಿ ಯುವತಿಯರನ್ನು ಪ್ರೀತಿ ಪ್ರೇಮದ ಹೆಸರಿನಲ್ಲಿ  ಲವ್ ಜಿಹಾದ್‍ಗೆ ಬಲಿಯಾಗುವಂತೆ ಮಾಡಲಾಗುತ್ತಿದೆ. ಇದರೊಂದಿಗೆ ಬೆದರಿಕೆ, ಬ್ಲಾಕ್‍ಮೇಲ್, ಅಪಹರಣದ ಮೂಲಕ ಹಿಂದೂ ಹೆಣ್ಣು ಮಕ್ಕಳನ್ನು ಇಸ್ಲಾಂಗೆ ಮತಾಂತರ ಮಾಡಲಾಗುತ್ತಿದೆ. ಇಂತಹ ಕೃತ್ಯಗಳಿಗೆ ಜಿಲ್ಲಾಡಳಿತ, ಪೆÇಲೀಸ್ ಇಲಾಖೆ ಕ್ರಮ ತೆಗೆದುಕೊಳ್ಳದಿದ್ದಲ್ಲಿ  ಮುಂದಿನ ದಿನಗಳಲ್ಲಿ ಬಜರಂಗದಳದ ಕಾರ್ಯಕರ್ತರೇ ಇದನ್ನು ತಡೆಯುವಂತಹ ಕಾರ್ಯವನ್ನು ಮಾಡಲಿದ್ದಾರೆ. ಅಂತಹ ಸಂದರ್ಭದಲ್ಲಿ  ಆಗುವ ಪರಿಣಾಮಗಳಿಗೆ ನೇರ ಜಿಲ್ಲಾಡಳಿತವೇ ಹೊಣೆ ಎಂದು ಈ ಮೂಲಕ ಎಚ್ಚರಿಸಿದ್ದಾರೆ. 

        ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು ಜಿಲ್ಲೆಯ ಅನೇಕ ಹಿಂದೂ ಕುಟುಂಬಗಳು ತಮ್ಮ ಮನೆಯ ಹೆಣ್ಣು ಮಕ್ಕಳನ್ನು ಲವ್ ಜಿಹಾದ್‍ನಿಂದಾಗಿ ಕಳೆದುಕೊಂಡು ಕಣ್ಣೀರಿನಲ್ಲಿ ಜೀವನ ನಡೆಸುತ್ತಿದ್ದಾರೆ. ಹಿಂದು ಸಮಾಜದ ಎಲ್ಲ ಜಾತಿ ವರ್ಗಗಳ ಮುಗ್ಧ ಹೆಣ್ಣು ಮಕ್ಕಳು ಈ ಸಂಚಿಗೆ ಬಲಿಯಾಗುತ್ತಿದ್ದಾರೆ. ಇದೊಂದು ಇಸ್ಲಾಮೀಕರಣದ ಸಂಚು ಇದನ್ನು ಜನರು ಸರಿಯಾಗಿ ಅರ್ಥ ಮಾಡಿಕೊಂಡು ಜಾಗೃತರಾಗಬೇಕು. ನಮ್ಮ ಮನೆಯ ಹೆಣ್ಣು ಮಕ್ಕಳಿಗೆ ಈ ಬಗ್ಗೆ  ಜಾಗೃತಿಯನ್ನು ಮೂಡಿಸಬೇಕು. ಜಾತಿ  ಸಂಘಟನೆಗಳು, ಸಂಘ ಸಂಸ್ಥೆಗಳು ಸಭೆಗಳನ್ನು  ನಡೆಸಿ ಲವ್ ಜಿಹಾದ್‍ನ ಬಗ್ಗೆ ಅರಿವು ಮೂಡಿಸಿ ಹೆಣ್ಣು ಮಕ್ಕಳು ಈ ಸಂಚಿಗೆ ಬಲಿಯಾಗದಂತೆ ಎಚ್ಚರ ವಹಿಸಲು ವಿಶ್ವ ಹಿಂದೂ ಪರಿಷತ್ತಿನ ವಿಭಾಗ ಕಾರ್ಯದರ್ಶಿ ಶರಣ್ ಪಂಪ್‍ವೆಲ್ ಆಗ್ರಹಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ  ವಿಎಚ್‍ಪಿ ವಿಭಾಗ ಕಾರ್ಯದರ್ಶಿ ಭುಜಂಗ ಕುಲಾಲ್, ಜಿಲ್ಲಾ ಕಾರ್ಯದರ್ಶಿ ಶಂಕರ ಭಟ್, ಜಿಲ್ಲಾ ಉಪಾಧ್ಯಕ್ಷ  ಎ.ಟಿ.ನಾಯ್ಕ್, ಜಿಲ್ಲಾ ಮಾತೃ ಶಕ್ತಿ  ಪ್ರಮುಖ್ ಮೀರಾ ಆಳ್ವ,  ಬಜರಂಗದಳ ಜಿಲ್ಲಾ ಸಂಚಾಲಕ್ ಶೈಲೇಶ್, ವಿಎಚ್‍ಪಿ ನೇತಾರರಾದ  ಪವನ್ ಹೊಸಂಗಡಿ , ಭರತ್ ಕನಿಲ, ಸುದಿನ್ ಇಡಿಯ, ಸುರೇಶ್ ಶೆಟ್ಟಿ ಪರಂಕಿಲ, ಜಯಂತಿ ಟಿ.ಶೆಟ್ಟಿ  ಉಪಸ್ಥಿತರಿದ್ದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries