ಉಪ್ಪಳ: ಬಾಯಾರು ಪದವಿನ ಕ್ಯಾಂಪೆÇ್ಕ ಸಮುಚ್ಚಯದಲ್ಲಿರುವ ಹೋಟೆಲ್ ನ ಮೇಲ್ಛಾವಣಿ ಗುರುವಾರ ರಾತ್ರಿ ಗಾಳಿ ಮಳೆಗೆ ಹಾರಿ ಹೋದ ಘಟನೆ ನಡೆದಿದೆ.
ಮೇಲ್ಛಾವಣಿ ಜೊತೆಯಲ್ಲಿ ಪೀಠೋಪಕರಣ ಹಾಗೂ ಇತರ ವಸ್ತುಗಳಿಗೆ ಹಾನಿಯಾಗಿದೆ. ಇದಲ್ಲದೆ ಕಟ್ಟಡದ ಇಲೆಕ್ಟ್ರಿಕಲ್ ವಯರಿಂಗ್ ಸಂಪೂರ್ಣವಾಗಿ ಹಾನಿಗೊಂಡಿದೆ.
ಕ್ಯಾಂಪೆÇ್ಕ ಕ್ಯಾಂಟೀನ್ ಎಂದೇ ಪ್ರಸಿದ್ಧಿ ಹೊಂದಿರುವ ಪ್ರಸ್ತುತ ಹೋಟೆಲ್ ಮೂಕಾಂಬಿಕಾ ಎಂಬ ಹೆಸರಿನಲ್ಲಿರುವ ಹೋಟೇಲನ್ನು ಗೋಪಾಲ ನಾಯ್ಕ ಎನ್ನುವವರು ಸುಮಾರು ನಾಲ್ಕು ವರ್ಷಗಳಿಂದ ನಿರ್ವಹಣೆ ಮಾಡುತ್ತಿದ್ದಾರೆ. ಪ್ರತಿದಿನವೂ ಹೋಟೆಲ್ ನಲ್ಲೆ ಮಲಗುವ ಅವರು ಗುರುವಾರ ಅಸೌಖ್ಯದಿಂದ ಆಸ್ಪತ್ರೆಯಲ್ಲಿರುವ ಪತ್ನಿಯನ್ನು ನೋಡಲು ತೆರಳಿದ ಕಾರಣದಿಂದ ಹೋಟೆಲ್ ನಲ್ಲಿ ತಂಗಿರಲಿಲ್ಲ. ಇದರಿಂದ ದೊಡ್ಡ ದುರ್ಘಟನೆಯಿಂದ ಪಾರಾದರು.