ಕುಂಬಳೆ: ಕುಂಬಳೆ ಸೀಮೆಯ ತಂತ್ರಿಗಳಾಗಿ ಇತ್ತೀಚೆಗೆ ನಿಧನರಾದ ದೇಲಂಪಾಡಿ ಬಾಲಕೃಷ್ಣ ತಂತ್ರಿಗಳ ಸ್ಥಾನಕ್ಕೆ ನೂತನರಾಗಿ ಆಯ್ಕೆಯಾದ ದೇಲಂಪಾಡಿ ಗಣೇಶ ತಂತ್ರಿವರ್ಯರಿಗೆ ಕುಂಬಳೆ ಕಣಿಪುರ ಶ್ರೀ ಗೋಪಾಲಕೃಷ್ಣ ದೇವಾಲಯದ ತಂತ್ರಕರ್ಮದ ಹಕ್ಕು ಬಾಧ್ಯತೆಗಳ ಹಸ್ತಾಂತರ ಕಾರ್ಯಕ್ರಮ ಶನಿವಾರ ಕಣಿಪುರ ಶ್ರೀಕ್ಷೇತ್ರದಲ್ಲಿ ನಡೆಯಿತು.
ಕುಂಬಳೆ ಅರಸು ಮನೆತನದ ಮಾಯಿಪ್ಪಾಡಿ ಅರಮನೆಯ ದಾನ ಮಾರ್ತಾಂಡ ವರ್ಮ ರಾಜ ಯಾನೆ ರಾಮಂತರಸರಾದ ನ್ಯಾಯವಾದಿ ರಾಜೇಂದ್ರ ರಾಯ, ಅರಮನೆಯ ರಾಜಗುರುಗಳಾದ ಚಕ್ರಪಾಣಿದೇವ ಪೂಜಿತ್ತಾಯ, ಕುಂಟಾರು ವಾಸುದೇವ ತಂತ್ರಿ, ಸೀಮೆಯ ಎಂಟು ಮನೆತನದ ಪ್ರತಿನಿಧಿಗಳು, ಕಣಿಪುರ ಕ್ಷೇತ್ರದ ಪ್ರಧಾನ ಅರ್ಚಕ ಮಾಧವ ಅಡಿಗ, ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ರಘುನಾಥ ಪೈ, ಕಾರ್ಯದರ್ಶಿ ಜಯಕುಮಾರ್, ಕಾರ್ಯನಿರ್ವಹಣಾಧಿಕಾರಿ ಪಿ.ಸಿ.ಕೃಷ್ಣವರ್ಮ ರಾಜ, ಪ್ರಬಂಧಕ ರಾಜಶೇಖರ, ವೆಂಕಟಕೃಷ್ಣ ಭಟ್, ಕುಂಬಳೆ ಗ್ರಾ.ಪಂ.ಅಧ್ಯಕ್ಷ ಪುಂಡರೀಕಾಕ್ಷ ಕೆ.ಎಲ್., ಪ್ರಮುಖರಾದ ವಿಕ್ರಂ ಪೈ, ಕೆ.ಸಿ.ಮೋಹನ, ಶಂಕರ ಆಳ್ವ, ದಯಾನಂದ ರಾವ್, ಸುಕುಮಾರ ಮೊದಲಾದವರು ಉಪಸ್ಥಿತರಿದ್ದರು.