ಕಾಸರಗೋಡು: ಕಾಸರಗೋಡು ಜಿಲ್ಲೆಯ ಪ್ರವಾಸಿ ತಾಣಗಳಲ್ಲಿ ಇಂದಿನಿಂದ(ನ.39) ಕಟ್ಟುನಿಟ್ಟು ಏರ್ಪಡಿಸಲಾಗುವುದು. ಕೋವಿಡ್ ರೋಗ ಹರಡುವಿಕೆಯ ಎರಡನೇ ಹಂತದ ಹಿನ್ನೆಲೆಯಲ್ಲಿ ಪ್ರತಿರೋಧ ಚಟುವಟಿಕೆಗಳನ್ನು ಹೆಚ್ಚುವರಿ ಚುರುಕುಗೊಳಿಸುವ ನಿಟ್ಟಿನಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ನೇತೃಥ್ವದಲ್ಲಿ ನಡೆದ ಸಭೆಯಲ್ಲಿ ತಿಳಿಸಲಾಗಿದೆ.
ಆರೋಗ್ಯ, ಕಂದಾಯ, ಪೆÇಲೀಸ್, ಪಂಚಾಯತ್ ಇಲಾಖೆಗಳಿಗೆ ಜಂಟಿಯಾಗಿ ಈ ಹೊಣೆ ನೀಡಲಾಗಿದೆ. ಚೆಂಬರಿಕ, ಬೇಕಲ, ಪಳ್ಳಿಕ್ಕರೆ, ವಲಿಯಪರಂಬ, ಕಾಪ್ಪಿಲ್, ಅಳಿತ್ತಲ, ಕೀಯೂರು ಬೀಚ್ ಗಳಲ್ಲಿ, ರಾಣಿಪುರಂ ಹಿಲ್ ಸಟೇಷನ್ ಗಳಲ್ಲಿ ಜನ ನಿಬಿಢತೆ ನಡೆಯದಂತೆ ಅಕ್ರಮ ಹಾದಿಗಳನ್ನು ಮುಚ್ಚುಡೆ ನಡೆಸಿ ಸಂದರ್ಶನ ಅವಧಿಯನ್ನು ಒಂದು ತಾಸಿಗೆ ಸೀಮಿತಗೊಳಿಸಲು ನಿರ್ಧರಿಸಲಾಗಿದೆ.
ಚೆಂಬರಿಕ್ಕ ಬೀಚ್ ನಲ್ಲಿ ಬಾರಿಕೇಡ್ ಗಳನ್ನು ಬಳಸಿ ಅಕ್ರಮ ಪ್ರವೇಶ ತಡೆಯಲಾಗುವುದು. ಪ್ರಧಾನ ದ್ವಾರದಲ್ಲಿ ಮಾತ್ರ ಪ್ರವೇಶಾನುಮತಿಯಿದ್ದು, ಏಕಕಾಲಕ್ಕೆ ಗರಿಷ್ಠ 50 ಮಂದಿಗೆ ಅನುಮತಿಯಿರುವುದು.
ಪಳ್ಳಿಕ್ಕರೆ ಬೀಚ್ ಮತ್ತು ಬೇಕಲ ಕೋಟೆಯಲ್ಲೂ ದಿನವೊಂದಕ್ಕೆ ಗರಿಷ್ಠ ಒಂದು ಸಾವಿರ ಮಂದಿಗೆ ಪ್ರವೇಶಾತಿ ಮಂಜೂರು ಮಾಡಲಾಗುವುದು. ಪಳ್ಳಿಕ್ಕರೆ ಬೀಚ್ ಆವರಣದಲ್ಲಿ ಪ್ರದಾನ ದ್ವಾರ ಹೊರತುಪಡಿಸಿ ಇತರ ಎಲ್ಲ ಅಕ್ರಮ ಹಾದಿಗಳನ್ನು ಬಾರಿಕೇಡ್ ಬಳಸಿ ನಿಯಂತ್ರಿಸಲಾಗುವುದು. ಬೇಕಲ ಕೋಟೆಯಲ್ಲಿ ಪಾಸ್ ವಿತರಣೆ ನಡೆಸಿ ಪ್ರವೇಶಾತಿ ಸೌಲಭ್ಯ ಒದಗಿಸಲಾಗುವುದು. ಗರಿಷ್ಠ ಸಂಖ್ಯೆ ಪೂರ್ಣಗೊಂಡಲ್ಲಿ ಹೌಸ್ಫುಲ್ ಫಲಕ ತೂಗುಹಾಕಲಾಗುವುದು.
ವಲಿಯಪರಂಬ ಬೀಚ್ ನಲ್ಲಿ ಸಮುದ್ರ ಕಿನಾರೆ ಬಳಿಯ ಎರಡು ಸೇತುವೆಗಳಲ್ಲೂ ಬಾರಿಕೇಡ್ ಸ್ಥಾಪಿಸಿ 300 ಸಂದರ್ಶಕರಿಗೆ(100 ವಾಹನಗಳು) ಮಾತ್ರ ಮಂಜೂರಾತಿ ನೀಡಲಾಗುವುದು, ಕಾಪಿಲ್ ಬೀಚ್ ನಲ್ಲಿ ಬಾರಿಕೇಡ್ ನಿಯಂತ್ರಣ ಇರುವುದು. ಅಳಿತ್ತಲದಲ್ಲಿ ಸಂಚಾರಿಗಳ ನಿಯಂತ್ರಣ ಹೊಣೆ ಕರಾವಳಿ ಪೆÇಲೀಸರಿಗೆ ವಹಿಸಲಾಗಿದೆ.
ರಾಣಿಪುರಂನಲ್ಲಿ ಮಸೀದಿ ಬಳಿ ಬಾರಿಕೇಡ್ ಇರಿಸಿ ನಿಯಂತ್ರಣ ಮಾಡಲಾಗುವುದು. 400 ಮಂದಿಗೆ ಮಾತ್ರ ಒಂದುದಿನ ಪ್ರವೇಶಾತಿ ಇರುವುದು. ರಾಣಿಪುರಂ ನಲ್ಲಿ ಡಿಸೆಂಬರ್ ತಿಂಗಳಲ್ಲಿ ಆನ್ ಲೈನ್ ಬುಕ್ಕಿಂಗ್ ಸೌಲಭ್ಯ ಜಾರಿಗೆ ಬರಲಿಉದೆ. ಈ ಪ್ರವಾಸಿ ಕೇಂದ್ರಗಳಲ್ಲಿ ಆರೋಗ್ಯ ಇಲಖೆಯ ಕಿಯಾಸ್ಕ್ ಗಳನ್ನು ಸ್ಥಾಪಿಸಿ ಆಂಟಿಜೆನ್ ಟೆಸ್ಟ್ ನಡೆಸಲಾಗುವುದು. ಆಯಾ ಸ್ಥಳೀಯಾಡಳಿತ ಸಂಸ್ಥೆಗಳಲ್ಲಿ ಸ್ವಯಂಸೇವಕರನ್ನು ನೇಮಿಸಿ ಪ್ರವಾಸಿ ಕೇಂದ್ರಗಳಿಗೆ ತೆರಳುವ ಪ್ರವಾಸಿಗಳ ಮಾಹಿತಿ ನೋಂದಣಿ ನಡೆಸಲಾಗುವುದು.
ನಿಷೇಧಾಜ್ಞೆ ಹಿಂತೆಗೆತ, ಮಂಗಳೂರಿಗೆ ಕೆ.ಎಸ್.ಆರ್.ಟಿ.ಸಿ. ಬಸ್ ಸೇವೆ ಪುನರಾರಂಭ, ಸೆಕ್ಟರ್ ಮೆಜಿಸ್ಟ್ರೇಟ್ ಗಳ ಸೇವೆ ಸಂಪನ್ನಗೊಳಿಸಿದ, ಸ್ಥಳೀಯಾಡಳಿತ ಸಂಸ್ಥೆಗಳ ಚುನಾವಣೆ ಚಟುವಟಿಕೆ ಆರಮಭಗೊಂಡ, ಕೋವಿಡ್ ಸಂಬಂಧ ಪ್ರತಿಕೂಲ ಹಿನ್ನೆಲೆ ಸಾಧ್ಯತೆಯಿರುವ ಹಿನ್ನೆಲೆಯಲ್ಲಿ ಪ್ರವಾಸಿ ತಾಣಗಳಲ್ಲಿ ಕಟ್ಟುನಿಟ್ಟು ಏರ್ಪಡಿಸಲಾಗಿದೆ.
ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅಧ್ಯಕ್ಷತೆ ವಹಿಸಿದ್ದರು. ಹೆಚ್ಚುವರಿ ದಂಡನಾಧಿಕಾರಿ ಎನ್.ದೇವಿದಾಸ್, ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್, ಡಿ.ಟಿ.ಪಿ.ಸಿ. ಕಾರ್ಯದರ್ಶಿ ಬಿಜು ರಾಘವನ್. ಬೇಕಲ ಎಸ್.ಐ. ಅಜಿತ್ ಕುಮಾರ್, ಮೇಲ್ಪರಂಬ ಎಸ್.ಎಚ್.ಒ. ಬೆನ್ನಿ ಲಾಲು, ಪಂಚಾಯತ್ ಕಾರ್ಯದರ್ಶಿಗಳು, ಮಾಸ್ಟರ್ ಯೋಜನೆಯ ಪ್ರತಿನಿಧಿಗಳು ಮೊದಲಾದವರು ಉಪಸ್ಥಿತರಿದ್ದರು.