ಕಾಸರಗೋಡು: 2018ರಲ್ಲಿ ನಡೆದ ಕೊಲೆ ಪ್ರಕರಣವೊಂದಕ್ಕೆ ಸಂಬಂಧಿಸಿ, ಬೇಕಲ ಪೆÇಲೀಸ್ ಠಾಣೆಯಲ್ಲಿ ದಾಖಲಿಸಲಾದ ಕೇಸಿನ ಎರಡನೇ ಆರೋಪಿ ಅಬ್ದುಲ್ ಅಝೀಝ್(33) ಎಂಬಾತನ ಬಗ್ಗೆ ಲುಕ್ ಔಟ್ ನೋಟೀಸು ಪ್ರಕಟಿಸಲಾಗಿದೆ. 2018 ಸೆ.14ರಂದು ಸುಳ್ಯದ ನ್ಯಾಯಾಲಯಕ್ಕೆ ಹಾಜರಾಗಲು ಒಯ್ಯುತ್ತಿದ್ದ ವೇಳೆ ಅಲ್ಲಿನ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದಿಂದ ಆರೋಪಿ ಪರಾರಿಯಾಗಿದ್ದು, ನಂತರ ತಲೆಮರೆಸಿಕೊಂಡಿದ್ದಾನೆ. ಈತನ ಬಗ್ಗೆ ಮಾಹಿತಿ ನೀಡಿದವರಿಗೆ 2 ಲಕ್ಷ ರೂ. ಬಹುಮಾನ ನೀಡುವುದಾಗಿ ಘೋಷಿಸಲಾಗಿದೆ. ಈತನ ಕುರಿತು ಮಾಹಿತಿಗಳಿದ್ದವರು 9497996972, 9497990148, 9497964323 ಎಂಬ ದೂರವಾಣಿ ನಂಬ್ರಗಳಲ್ಲಿ ಯಾವುದಾದರೂ ಒಂದಕ್ಕೆ ಕರೆ ಮಾಡಿ ತಿಳಿಸಬಹುದು.