ಮಂಜೇಶ್ವರ: ಪೊಳ್ಳಕಜೆ ಶ್ರೀ ದುರ್ಗಾಪರಮೇಶ್ವರಿ ü ಕ್ಷೇತ್ರದಲ್ಲಿ ನವರಾತ್ರಿ ಉತ್ಸವದ ಪ್ರಯುಕ್ತ ಇತ್ತೀಚೆಗೆ ಯಕ್ಷಬಳಗ ಹೊಸಂಗಡಿ ತಂಡದವರ ತಾಳಮದ್ದಳೆ ವಿಭೀಷಣ ನೀತಿ ಆಖ್ಯಾಯಿಕೆಯ ಪ್ರದರ್ಶನ ನಡೆಯಿತು.
ಹಿಮ್ಮೇಳದಲ್ಲಿ ರತ್ನಾಕರ ಆಳ್ವ ತಲಪಾಡಿ(ಭಾಗವತಿಕೆ), ಚೆಂಡೆ ಮದ್ದಳೆಯಲ್ಲಿ ರಾಜಾರಾಮ ಬಲ್ಲಾಳ ಚಿಪ್ಪಾರು, ಹರಿಶ್ಚಂದ್ರ ನಾಯ್ಗ ಮಾಡೂರು, ಕೀರ್ತನ ನಾಯ್ಗ ಮಾಡೂರು ಹಾಗೂ ಪಾತ್ರವರ್ಗದಲ್ಲಿ ಯೋಗೀಶ ರಾವ್ ಚಿಗುರುಪಾದೆ(ಶ್ರೀರಾಮ), ನಾಗರಾಜ ಪದಕಣ್ಣಾಯ ಮೂಡಂಬೈಲು(ರಾವಣ), ನ್ಯಾಯವಾದಿ ವಿಠಲ ಭಟ್ ಮೊಗಸಾಲೆ(ವಿಭೀಷಣ), ಸತೀಶ ಅಡಪ ಸಂಕಬೈಲು(ಕೈಕಸೆ), ರಾಜಾರಾಮ ರಾವ್ ಮೀಯಪದವು(ಇಂದ್ರಜಿತು) ಭಾಗವಹಿಸಿದ್ದರು.