ಕಾಸರಗೋಡು: ಮಹಿಳೆಯರ , ಮಕ್ಕಳ ವಿರುದ್ಧ ನಡೆಯುವ ದೌರ್ಜನ್ಯ ನಿಯಂತ್ರಿಸುವ ನಿಟ್ಟಿನಲ್ಲಿ ಕಾಸರಗೋಡು ಜಿಲ್ಲೆಯಲ್ಲಿ ಕಾಸರಗೋಡಿನಿಂದ ಕಾಞಂಗಾಡ್ ವರೆಗೆ ಸೈಕ್ಲೋತ್ತಾನ್ ಸೈಕಲ್ ರಾಲಿ ನಡೆಯಿತು.
ಮಹಿಳಾ-ಶಿಶು ಅಭಿವೃದ್ಧಿ ಇಲಾಖೆ, ಜಿಲ್ಲಾ ಮಹಿಳಾ ಶಿಶು ಅಭಿವೃಧ್ಧಿ ಕಚೇರಿ, ಕಾಸರಗೋಡು ಮಹಿಳಾ ಶಕ್ತಿ ಕೇಂದ್ರ, ಕಾಸರಗೋಡು ಪೆಡಲರ್ಸ್ ಜಂಟಿ ವತಿಯಿಂದ ಕಾರ್ಯಕ್ರಮ ಜರುಗಿತು. ಮಹಿಳೆಯರ ವಿರುದ್ಧ ನಡೆಯುತ್ತಿರುವ ದೌರ್ಜನ್ಯ ತಡೆಯುವ ನಿಟ್ಟಿನಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಜರುಗುತ್ತಿರುವ ಜಾಗೃತಿ ದಿನಾಚರಣೆ ಅಂಗವಾಗಿ ನ.25ರಿಂದ ಡಿ.10 ವರೆಗೆ ವಿವಿಧ ಕಾರ್ಯಕ್ರಮಗಳು ನಡೆಯುತ್ತಿದ್ದು, ಇದರ ಅಂಗವಾಗಿ ಈ ರಾಲಿ ಜರುಗಿತು.
ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಆರಂಭಗೊಂಡ ರಾಲಿಯನ್ನು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಉದ್ಘಾಟಿಸಿದರು. ಹೆಚ್ಚುವರಿ ದಂಡನಾಧಿಕಾರಿ ಎನ್.ದೇವಿದಾಸ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಶಿಶು ಅಭಿವೃದ್ಧಿ ಅಧಿಕಾರಿ ಕವಿತಾರಾಣಿ ರಂಜಿತ್, ಜಿಲ್ಲಾ ಸಮಾಜ ನೀತಿ ಅಧಿಕಾರಿ ಪಿ.ಬಿಜು, ಜಿಲ್ಲಾ ಕಾರ್ಮಿಕ ಅಧಿಕಾರಿ ಕೇಶವನ್, ವಿದ್ಯಾನಗರ ಸಿ.ಐ.ವಿ.ವಿ.ಮನೋಜ್, ಜಿಲ್ಲಾ ಮಹಿಳಾ ಕಲ್ಯಾಣ ಅಧಿಕಾರಿ ಸುನಾ ಎಸ್.ಚಂದ್ರನ್, ಮಹಿಳಾ ಶಕ್ತಿ ಕೇಂದ್ರ ಜಿಲ್ಲಾ ಸಂಚಾಲಕಿ ಪ್ರಸೀತಾ, ಕಾಸರಗೋಡು ಪೆಡಲರ್ಸ್ ಅಧ್ಯಕ್ಷ ರತೀಶ್, ಐ.ಸಿ.ಡಿ.ಎಸ್. ಮೇಲ್ವಿಚಾಲಕಿ ಮಣಿಯಮ್ಮ ಮೊದಲಾದವರು ಉಪಸ್ಥಿತರಿದ್ದರು.
ಕಾಞಂಗಾಡಿನಲ್ಲಿ ನಡೆದ ಸಮಾರೋಪ ಸಮಾರಂಭವನ್ನು ಉಪ ಜಿಲ್ಲಾಧಿಕಾರಿ ಮೇಘಶ್ರೀ ಉದ್ಘಾಟಿಸಿದರು. ಜಿಲ್ಲಾ ವಾರ್ತಧಿಕಾರಿ ಮಧುಸೂದನನ್ ಎಂ. ಅಧ್ಯಕ್ಷತೆ ವಹಿಸಿದ್ದರು. ಸಿ.ಐ. ಅನೂಪ್, ಸಿ.ಡಿ.ಪಿ.ಒ. ಪಿ.ಬೇಬಿ, ಸಹಾಯಕ ಸಿಡಿ.ಪಿ.ಒ. ಷೈನಿ ಇಸ್ಹಾಕ್, ಮೇಲ್ವಿಚಾರಕಿಯರಾದ ಟಿ.ಪಿ.ಗ್ರೀಷ್ಮಾ, ಬಿಂದು, ಎನ್.ಪಿ.ಜ್ಯೋತಿ, ಶೋಭಾ, ಐ.ಸಿ.ಡಿ.ಎಸ್.
ಕ್ಲರ್ಕ್ ಸುರೇಶ್ ಕೊಟ್ರಚ್ಚಾಲ್, ಕಾಸರಗೋಡು ಪೆಡಲರ್ಸ್ ಉಪಾಧ್ಯಕ್ಷ ಬಾಬು, ಕಾರ್ಯಕಾರಿ ಸಮಿತಿ ಸದಸ್ಯ ಟಿ.ಎಂ.ಸಿ.ಇಬ್ರಾಹಿಂ ಮೊದಲಾದವರು ಉಪಸ್ಥಿತರಿದ್ದರು.