ಕಾಸರಗೋಡು: ಸ್ಥಳೀಯಾಡಳಿತ ಸಂಸ್ಥೆಗಳ ಚುನಾವಣೆ ಸಮೀಪಿಸುತ್ತಿರುವಂತೆಯೇ, ರಾಜಕೀಯ ಪಕ್ಷಗಳ ಮತ್ತು ಅಭ್ಯರ್ಥಿಗಳು ಸಭೆ ನಡೆಸುವ ವೇಳೆ ಕೋವಿಡ್ ಕಟ್ಟುನಿಟ್ಟುಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ತಿಳಿಸಿದರು.
ಕಾನೂನು ಪಾಲನೆ, ಸಂಚಾರಿ ವ್ಯವಸ್ಥೆಗೆ ತಡೆಯಾಗದಂತೆ ವ್ಯವಸ್ಥೆ ನಡೆಸುವಲ್ಲಿ ಪೆÇಲೀಸರಿಗೆ ಸಹಕಾರಿಯಾಗುವ ನಿಟ್ಟಿನಲ್ಲಿ ಸಭೆ ನಡೆಸುವ ಸಮಯವನ್ನು ಪಕ್ಷಗಳು, ಅಭ್ಯರ್ಥಿಗಳು ಸ್ಥಳೀಯ ಅಧಿಕಾರಿಗಳಿಗೆ ಮುಂಗಡವಾಗಿ ತಿಳಿಸಬೇಕು ಎಂದವರು ನುಡಿದರು.
ಗಮನಿಸಬೇಕಾದ ವಿಚಾರಗಳು:
ಇತರ ಪಕ್ಷಗಳ, ಸಭೆ, ಮೆರವಣಿಗೆಗಳಿಗೆ ತಮ್ಮ ಬೆಂಬಲಿಗರು ತಡೆಮಾಡದಂತೆ, ಸಂಘರ್ಷ ನಡೆಸದಂತೆ ಪಕ್ಷಗಳು ಮತ್ತು ಅಭ್ಯರ್ಥಿಗಳು ಖಚಿತತೆ ನಿಡಬೇಕು. ಅಗತ್ಯದ ಸಂದರ್ಭಗಳಲ್ಲಿ ಪೆÇಲೀಸರ ಸಹಾಯ ಯಾಚಿಸಬಹುದು. ಒಂದು ಪಕ್ಷದ ಸಭೆ ನಡೆಯುತ್ತಿರುವ ವೆಳೆ ಇನ್ನೊಂದು ಪಕ್ಷದ ಮೆರವಣಿಗೆ ನಡೆಸಕೂಡದು. ಒಂದು ಪಕ್ಷದ ಗೋಡೆ ಪ್ರಚಾರದ ಸಾಮಾಗ್ರಿಗಳನ್ನು ಇನ್ನೊಂದು ಪಕ್ಷದ ಕಾರ್ಯಕರ್ತರು ತೆರವುಗೊಳಿಸಕೂಡದು.
ಸಭೆ ನಡೆಸಲು ಉದ್ದೇಶಿಸಿರುವ ಪ್ರದೇಶದಲ್ಲಿ ಯಾವುದೇ ರೀತಿಯ ನಿಷೇಧಾಜ್ಞೆ, ನಿಯಂತ್ರಣ ಆದೇಶ ಜಾರಿಯಲ್ಲಿಲ್ಲ ಎಂದು ಖಚಿತತೆ ಮೂಡಿಸಬೇಕು. ಇಂಥಾ ಆದೇಶ ಜಾರಿಯಲ್ಲಿದ್ದರೆ ಅದನ್ನು ಕಡ್ಡಾಯವಾಗಿ ಪಾಲಿಸಬೇಕು. ಇದರಿಂದ ತೆರವುಗೊಳ್ಳಬೇಕಿದ್ದರೆ ಮುಂಗಡ ಅನುಮತಿ ಪಡೆಯಬೇಕು.
ಚುನಾವಣೆ ಸಂಬಂಧ ಕಿರುಹೊತ್ತಗೆಗಳು, ಭಿತ್ತಿಪತ್ರಗಳನ್ನು ಮುದ್ರಿಸುವ ನಿಟ್ಟಿನಲ್ಲಿ 1994ರ ಪಂಚಾಯತ್ ರಾಜ್ ಕಾಯಿದೆಯ 124ನೇ ಕಾಯಿದೆಯ ಮತ್ತು 1994 ಕೇರಳ ನಗರಸಭೆ ಕಾಯಿದೆಯ 148ನೇ ಕಾಯಿದೆಯ ನಿಬಂಧನೆಗಳನ್ನು ಚುನಾವಣೆಯಲ್ಲಿ ಸ್ಪರ್ಧಿಸುವ ರಾಜಕೀಯ ಪಕ್ಷಗಳು, ಅಭ್ಯರ್ಥಿಗಳು , ಮುದ್ರಣಾಲಯದ ಮಾಲೀಕರು ಪಾಲಿಸಬೇಕು.
ಕಿರು ಹೊತ್ತಗೆ, ಭಿತ್ತಿಪತ್ರಗಳಲ್ಲಿ ಮದ್ರಿಸುವ ಮುದ್ರಣಾಲಯದ , ಪ್ರಕಾಶಕರ ಹೆಸರು, ವಿಳಾಸ ಇರಬೇಕು.
ಚುನಾವಣೆ ಜಾಹೀರಾತಿ ಫಲಕ, ಭಿತ್ತಪತ್ರ ಇತ್ಯಾದಿಗಲ್ಲಿ ಮುದ್ರಿಸಲಾದ ಮಾಹಿತಿಗಳನ್ನು ಚುನಾವಣೆ ಅಧಿಕಾರಿಗೆ ನಿಗದಿತ ಫಾರಂ ಮುಖಾಂತರ ತಿಳಿಸಬೇಕು.
ಪ್ರಕಟಣೆಗಳಲ್ಲಿ ಅಪಮಾನಕರ ಪ್ರಚಾರ ಸಲ್ಲ:
ಚುನಾವಣೆ ಸಂಬಂಧಿ ರಾಜಕೀಯ ಪಕ್ಷಗಳು, ಅಭ್ಯರ್ಥಿಗಳು ಮುದ್ರಣ, ದೃಶ್ಯ, ಶ್ರವ್ಯ, ಸಾಮಾಜಿಕ ಜಾಲತಾಣ ಸಹಿತ ಮಾಧ್ಯಮಗಳಲ್ಲಿ ನೀಡುವ ಜಾಹೀರಾತುಗಳು ಕಾನೂನುಬದ್ಧವಾಗಿರಬೇಕು. ಅಪಪ್ರಚಾರ, ಅಪಮಾನಕರ ಪ್ರಚಾರ ಇತ್ಯಾದಿಗಳನ್ನು ನಡೆಸಕೂಡದು.
ಸಾರ್ವಜನಿಕ ಸಭೆಗಳು ನಡೆಯುತ್ತಿರುವ ಪ್ರದೇಶಗಳಲ್ಲಿ ಕಾನೂನು ವಿರುದ್ಧ ಚಟುವಟಿಕೆ ನಡೆಸುವುದು, ಅದಕ್ಕೆ ಪ್ರೇರಣೆ ನೀಡುವುದು ಇತ್ಯಾದಿ ನಡೆಸಿದವರ ವಿರುದ್ಧ ಮೂರು ತಿಂಗಳ ವರೆಗಿನ ಸಜೆ, ಒಂದು ಸಾವಿರ ರೂ. ದಂಡ ಯಾ ಎರಡೂ ಲಭಿಸುವ ರೀತಿಯ ಕ್ರಮ ಕೈಗೊಳ್ಳಲಾಗುವುದು.
ಶಿಕ್ಷಣ ಸಂಸ್ಥೆಗಳ ಮೈದಾನಗಳಲ್ಲಿ ಚುನಾವಣೆ ಸಂಬಂಧ ಸಭೆಗಳನ್ನು ನಡೆಸಕೂಡದು.
ವಾಹನಗಳಲ್ಲಿ ಧ್ವನಿವರ್ಧಕ ಬಳಸಿ ಪ್ರಚಾರ ನಡೆಸುವ ವೇಳೆ ಮೋಟಾರು ವಾಹನ ಕಾನೂನುಗಳನ್ನು ಪಾಲಿಸಬೇಕು. ಧ್ವನಿವರ್ಧಕ ಬಳಸುವ ವೇಳೆ ಮೋಟಡಾರು ವಾಹನ ಕಾಯಿದೆಯ ಕಡ್ಡಾಯ ಪಾಲನೆ ನಡೆಯಬೇಕು. ಸಂಬಮಧಪಟ್ಟ ಅಧಿಕಾರಿಗಳಿಂದ ಮುಂಗಡ ಅನುಮತಿ ಪಡೆದ ನಂತರವಷ್ಟೇ ವಾಹನಗಳಲ್ಲಿ ರೂಪಾಂತರ ನಡೆಸಬಹುದು.
ಮತದಾನದ ದಿನ ವಾಹನಗಳನ್ನು ಬಳಸುವ ಸಂಬಂಧ ಜಾರಿಗೊಳಿಸಲಾಗುವ ನಿಯಂತ್ರಣ ಖಚಿತಪಡಿಸುವ ನಿಟ್ಟಿನಲ್ಲಿ ಅಧಿಕಾರಿಗಳೊಂದಿಗೆ ಸಹಕರಿಸಬೇಕು. ಪರವಾನಗಿ ಪಡೆದು ಆಯಾ ವಾಹನಗಳಲ್ಲಿ ಸ್ಪಷ್ಟವಾಗಿ ಕಾಣಿಸುವಂತೆ ಅಂಟಿಸಬೇಕು.