ಮಂಜೇಶ್ವರ: ಕುಂಜತ್ತೂರು ಪದವು ರಸ್ತೆಯಲ್ಲಿ ಯುವಕನೊಬ್ಬ ಶನಿವಾರ ಬೆಳಿಗ್ಗೆ ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿರುವುದು ಹಲವು ಸಂಶಯಗಳಿಗೆ ಕಾರಣವಾಗಿದೆ.
ಕರ್ನಾಟಕ ಗದಗ ನಿವಾಸಿ ಹನುಮಂತ (35) ಸಾವನ್ನಪ್ಪಿದ ದುರ್ದೈವಿ. ಕಳೆದ ಕೆಲವು ವರ್ಷಗಳಿಂದ ಮಂಗಳೂರು ಕೊಡಿಯಾಲ್ ಬೈಲ್ ವಿಸಾಲ್ ನರ್ಸಿಂಗ್ ಹೋಮ್ ಕ್ಯಾಂಟೀನೊಂದರಲ್ಲಿ ನೌಕರನಾಗಿ ಸೇವೆ ಸಲ್ಲಿಸುತ್ತಿರುವ ಈತ ಪತ್ನಿ ಭಾಗ್ಯ ಹಾಗೂ ಎರಡು ಮಕ್ಕಳಿನೊಂದಿಗೆ ಕುಟುಂಬ ಸಮೇತನಾಗಿ ದೇವಿಪುರದ ಸಮೀಪ ವಾಸವಾಗಿದ್ದಾನೆನ್ನಲಾಗಿದೆ .
ಹೊಸ ರಿಜಿಸ್ಟ್ರೇಶನ್ ನೋಂದಾಯಿತವಲ್ಲದ ಸ್ಕೂಟರ್ ಮಗುಚಿದ ಹಾಗೆ ಕಂಡು ಬಂದಿದ್ದರೂ ಸ್ಕೂಟರಿಗೆ ಅಷ್ಟೊಂದು ಹಾನಿಯಾದ ಬಗ್ಗೆ ಕಾಣುತಿಲ್ಲ. ಸ್ಕೂಟರಿನಿಂದ ಪಲ್ಟಿಯಾಗಿರಬಹುದಾ? ಅಥವಾ ಬೇರೆ ಯಾವುದಾದರು ವಾಹನ ಡಿಕ್ಕಿ ಹೊಡೆದಿರಬಹುದಾ ಅಥವಾ ಕೊಲೆಗೈದು ಬಿಸಾಡಿರಬಹುದಾ, ಈ ಕಡೆ ಬರುವ ಅಗತ್ಯವೇನಿತ್ತು ಇದೆಲ್ಲಾ ಪೊಲೀಸ್ ತನಿಖೆಯಿಂದ ತಿಳಿಯಬೇಕಾಗಿದೆ .