ಬದಿಯಡ್ಕ: ಏತಡ್ಕದ ಕುಂಬ್ಡಾಜೆ ಗ್ರಾಮ ಸೇವಾ ಸಂಘ ಗ್ರಂಥಾಲಯದ ನೂತನ ಕಾರ್ಯಕಾರಿ ಸಮಿತಿ ಸದಸ್ಯರ ಸಭೆ ಗ್ರಂಥಾಲಯದಲ್ಲಿ ಇತ್ತೀಚೆಗೆ ಜರಗಿತು. 2020-23 ನೆಯ ಸಾಲಿಗೆ ಹೊಸ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಕೆ.ನರಸಿಂಹ ಭಟ್, ಉಪಾಧ್ಯಕ್ಷರಾಗಿ ವೈ.ಕೆ.ಗಣಪತಿ ಭಟ್,ಕಾರ್ಯದರ್ಶಿಯಾಗಿ ಡಾ.ವೇಣುಗೋಪಾಲ್ ಕಳೆಯತ್ತೋಡಿ, ಜೊತೆ ಕಾರ್ಯದರ್ಶಿಯಾಗಿ ಚಂದ್ರಶೇಖರ ಭಟ್ ವೈ ಆಯ್ಕೆಯಾದರು. ಜೊತೆಗೆ ಅಬ್ದುಲ್ ರಹಿಮಾನ್ ಎನ್, ವೈ.ಗೋಪಾಲಕೃಷ್ಣ ಭಟ್, ವೈ.ವಿ ಸುಬ್ರಹ್ಮಣ್ಯ, ಕೆ.ಸುಬ್ರಹ್ಮಣ್ಯ ಭಟ್,ಸುಧೀರ್ ಕೃಷ್ಣ ಪಿ.ಎಲ್,ಶಾಂತ ಕುಮಾರಿ ಎಂ,ಲೀಲಾ ಪಿ. ರನ್ನು ಸದಸ್ಯರನ್ನಾಗಿ ಆಯ್ಕೆಮಾಡಲಾಯಿತು.