ಉಪ್ಪಳ : ಯಕ್ಷರಂಗ ಮುಂಬೈ ಇದರ ಆಶ್ರಯದಲ್ಲಿ ಯಕ್ಷಗಾನ ಗುರು ರಾಮ ಸಾಲಿಯಾನ್ ಮಂಗಲ್ಪಾಡಿ ಇವರು ತರಬೇತಿ ನೀಡುವ ಓನ್ ಲೈನ್ ಭಾಗವತಿಗೆ ತರಗತಿಯ ಉದ್ಘಾಟನೆ ಇತ್ತೀಚೆಗೆ ಶ್ರೀ ಭಗವತಿ ಕೃಪಾ ವೀರಾಂಜನೇಯ ವ್ಯಾಯಾಮ ಶಾಲೆ ಹನುಮ ನಗರ ಐಲ ಉಪ್ಪಳ ಇಲ್ಲಿನ ದಿವ್ಯ ಸನ್ನಿಧಿಯಲ್ಲಿ ನಡೆಯಿತು.
ಮುಂಬೈ ಹದಿನಾರು ಸಮಸ್ತರ ಸಭಾ ವಾಮಂಜೂರು ಶ್ರೀಗುತ್ಯಮ್ಮ ಭಗವತಿ ಕ್ಷೇತ್ರ ಇದರ ಕಾರ್ಯದರ್ಶಿ ಹಾಗೂ ಯಕ್ಷಗಾನ ಕಲಾವಿದ ಯಶವಂತ ಎ.ಕೆ.ಡೊಂಬಿವಿಲಿ ತರಗತಿಯನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಯಕ್ಷಗಾನ ಗುರು ರಾಮ ಸಾಲಿಯಾನ್ ಮಂಗಲ್ಪಾಡಿ ಉಪಸ್ಥಿತರಿದ್ದ ಸಮಾರಂಭದಲ್ಲಿ ಶ್ರೀ ಭಗವತಿ ಕೃಪಾ ವೀರಾಂಜನೇಯ ವ್ಯಾಯಾಮ ಶಾಲೆ ಹನುಮಾನ್ ನಗರ ಇದರ ಅಧ್ಯಕ್ಷ ಜಯರಾಮ ಬಂಗೇರ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ಯಕ್ಷಗಾನ ಅಕಾಡೆಮಿ ಬೆಂಗಳೂರು ಇದರ ಸದಸ್ಯರಾದ ಯೋಗೀಶ ರಾವ್ ಚಿಗುರುಪಾದೆ, ವಾಮಂಜೂರು ಶ್ರೀಗುತ್ಯಮ್ಮ ಭಗವತಿ ಕ್ಷೇತ್ರ ಐಲ ಇದರ ಕಾರ್ಯದರ್ಶಿ ಕುಟ್ಟಿಕೃಷ್ಣನ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಕೆ.ಪಿ.ನಾಭ. ಐಲ ಕಾರ್ಯಕ್ರಮ ನಿರ್ವಹಿಸಿದರು ಚಿನ್ಮಯ ರಾವ್ ಚಿಗುರುಪಾದೆ ಪ್ರಾರ್ಥನೆ ಹಾಡಿದರು. ಬಳಿಕ ಯಕ್ಷಗುರು ರಾಮಸಾಲಿಯಾನ್ ಮಂಗಲ್ಪಾಡಿ ಶಿಷ್ಯರಾದ ಮಾಸ್ಟರ್ ಚಿನ್ಮಯ ರಾವ್ ಚಿಗುರುಪಾದೆ ಹಾಗೂ ಮಾಸ್ಟರ್ ಶರತ್ ಬಾುಕಟ್ಟೆ ಯವರಿಂದ ಯಕ್ಷಗಾನ ಗಾನಾರ್ಚನೆ ಜರಗಿತು. ಹಿಮ್ಮೇಳದಲ್ಲಿ ಯಕ್ಷಗುರು ರಾಮ ಸಾಲಿಯಾನ್ ಮಂಗಲ್ಪಾಡಿ ಹಾಗೂ ಜಗದೀಶ ಮಂಗಲ್ಪಾಡಿ ಪಾಲ್ಗೊಂಡರು.