ಮಂಜೇಶ್ವರ: ಸಿಪಿಐಎಂ ನೇತೃತ್ವದಲ್ಲಿ ಕೇರಳ ರಾಜ್ಯವ್ಯಾಪಕವಾಗಿ ಮಾಧ್ಯಮದ ಸುಳ್ಳು ವಾರ್ತೆಗಳ ವಿರುದ್ಧ ಬ್ರಾಂಚ್ ಮಟ್ಟದಲ್ಲಿ ಭಾನುವಾರ ಪ್ರತಿಭಟನೆ ನಡೆಯಿತು. ಹೊಸಂಗಡಿಯಲ್ಲಿ ವಿವಿಧ ಬ್ರಾಂಚ್ ಗಳ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು. ಹೊಸಂಗಡಿಯಲ್ಲಿ ನಡೆದ ಪ್ರತಿಭಟನೆಯನ್ನು ಸಿಪಿಐಎಂ ಕಾಸರಗೋಡು ಜಿಲ್ಲಾ ಕಾರ್ಯಕಾರಿ ಸದಸ್ಯ ಕೆ. ಆರ್ ಜಯಾನಂದ ಉದ್ಘಾಟಿಸಿ ಮಾತನಾಡಿದರು
ಕೇರಳದ ಎಲ್.ಡಿ.ಎಫ್. ಸರ್ಕಾರ, ಸಿಪಿಐಎಂ ಪಕ್ಷದ ವಿರುದ್ಧ ಕೇರಳದ ಮಾಧ್ಯಮಗಳು ಸಂಘಟಿತವಾಗಿ ಸುಳ್ಳು ಪ್ರಚಾರ ನಡೆಸಿ ನಿಜವಾದ ವಾರ್ತೆಗಳನ್ನು ಮರೆಮಾಚಲು ಶ್ರಮಿಸುತ್ತಿದೆ. ಮಾತ್ರವಲ್ಲದೆ ಸಿಪಿಐಎಂ ವಿರುದ್ಧ ಸಂಘಟಿತವಾಗಿ ಸುಳ್ಳು ಪ್ರಚಾರ ನಡೆಸಿ ಜನರ ಶ್ರದ್ಧೆಯನ್ನು ಬೇರೆಡೆಗೆ ಸೆಳೆಯುವ ಸಂಘಟಿತ ಪ್ರಯತ್ನ ನಡೆಯುತ್ತಿದೆ. ಚಿನ್ನ ಸಾಗಾಟದ ವಿಷಯದಲ್ಲಿ ಚಿನ್ನ ಯಾರಿಗೆ ಬಂದಿದೆ, ಯಾರು ಕೊಟ್ಟದ್ದು, ಹಾಗೂ ಯಾರ ಲಾಭಕ್ಕಾಗಿ ಉಪಯೋಗಿಸಲಾಯಿತು ಎಂಬ ಸೂಕ್ಷ್ಮದ ಬಗ್ಗೆ ಗಾಢ ಮೌನವಹಿಸುವ ಸಿಬಿಐ, ಕೇಂದ್ರ ಸರ್ಕಾರದ ತನಿಖಾ ತಂಡಗಳು ಸರ್ಕಾರ ವಿರುದ್ಧ ಸುಳ್ಳು ಆಪಾದನೆಗಳನ್ನು ಸೃಷ್ಟಿಸಲು ಮಾತ್ರ ಶ್ರಮಿಸುವುದು ವ್ಯಕ್ತವಾಗುತ್ತಿದೆ ಎಂದು ಅವರು ತಿಳಿಸಿದರು.
ಕೇರಳ ಸರ್ಕಾರ ಕ್ಷೇಮ ಪಿಂಚಣಿ ಹಾಗೂ ಲಾಕ್ ಡೌನ್ ಕಾಲದಲ್ಲಿ ಜನರು ಹಸಿದಿರಬಾರದೆಂದು ಪಡಿತರ ಕಿಟ್ ಗಳನ್ನು ಹಾಗೂ ಕೊರೊನೋ ರೋಗಕ್ಕೆ ಉಚಿತವಾಗಿ ಚಿಕೆತ್ಸೆ ಕೊಡುತ್ತಿದೆ. ದೇಶದ ಯಾವುದೇ ರಾಜ್ಯದಲ್ಲಿ ಉಚಿತ ಚಿಕಿತ್ಸೆ ನೀಡುತ್ತಿಲ್ಲ ಎಂಬುದು ಗಮನಾರ್ಹ. ಲೈಫ್ ಮಿಷನ್ ಯೋಜನೆ ಹಾಗೂ ಕೆ ಫೆÇೀನ್ ಯೋಜನೆ, ರಾಜ್ಯದ ವಿವಿಧ ಇಲಾಖೆಗಳಲ್ಲಿ ನಡೆಯುವ ಜನಪರ ಕೆಲಸಗಳನ್ನು ವಾರ್ತಾ ಮಾಧ್ಯಮಗಳು ಚಿಕ್ಕ ವಿಷಯಕ್ಕೆ ಸೀಮಿತ ಗೊಳಿಸಿ ಸರ್ಕಾರದ ವಿರುದ್ಧ ನಡೆಸುವ ಸುಳ್ಳುವಾರ್ತೆಗಳನ್ನು ಮಾತ್ರ ಚರ್ಚೆ ನಡೆಸುತ್ತಿದೆ. ಇದೇ ವೇಳೆ ಪ್ರತಿಪಕ್ಷಗಳ ಹಲವು ಹಗರಣಗಳು ಚರ್ಚೆಗೊಳಗಾಗದಿದ್ದು ಜನರ ಶ್ರದ್ದೆ ತಪ್ಪಿಸುವ ಪಿತೂರಿಯಷ್ಟೇ ಇದರಲ್ಲಿದೆ ಎಂದು ಅವರು ಹರಿಹಾಯ್ದರು.
ಪ್ರತಿಭಟನಾ ಸಂಗಮದ ಅಧ್ಯಕ್ಷತೆಯನ್ನು ಪ್ರಶಾಂತ್ ಕನಿಲ ವಹಿಸಿದ್ದರು. ಕರುಣಾಕರ ಶೆಟ್ಟಿ, ದಯಾಕರ ಕೆ., ಮೊದಲಾದವರು ನೇತೃತ್ವ ವಹಿಸಿದ್ದರು. ಕೆ ಕಮಲಾಕ್ಷ ಸ್ವಾಗತಿಸಿ, ವಂದಿಸಿದರು.