ಕೊಚ್ಚಿ: ಕೆಎಸ್‍ಆರ್‍ಟಿಸಿ ಚಾಲಕರ ಕೆಲಸದ ಹೊರೆ ಕಡಿಮೆ ಮಾಡಲು
ಶೀಘ್ರದಲ್ಲೇ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ಎ.ಕೆ.ಶಶೀಂದ್ರನ್ ಹೇಳಿದ್ದಾರೆ.
ಕೋವಿಡ್ ಕಾರಣ ಕೆಲವೇ ಬಸ್ ಗಳ ಸೇವೆಗಳನ್ನು ಪುನರಾರಂಭಿಸಲಾಗಿದೆ. ಸಂಪೂರ್ಣವಾಗಿ
ಬಸ್ ಸೇವೆಗಳು ಕಾರ್ಯನಿರ್ವಹಿಸತೊಡಗಿದಾಗ ಕೆಲಸದ ಹೊರೆ ಇಳಿಸುವ ಕ್ರಮ
ಕಾರ್ಯಗತಗೊಳಿಸಲಾಗುತ್ತದೆ. ಭಾನುವಾರ ವಿಟ್ಟಿಲಾದಲ್ಲಿ ನಡೆದ ಅಪಘಾತದ ಕಾರಣದ ಬಗ್ಗೆ
ತನಿಖೆ ನಡೆಸಲಾಗುವುದು ಎಂದು ಸಚಿವರು ಹೇಳಿದರು. ಕೆಎಸ್‍ಆರ್‍ಟಿಸಿ ಬಸ್ ಅಪಘಾತದ
ಸ್ಥಳಕ್ಕೆ ಸೋಮವಾರ ಭೇಟಿ ನೀಡಿದ ಬಳಿಕ ಸಚಿವರು ಈ ಪ್ರತಿಕ್ರಿಯೆ ನೀಡಿರುವರು.
ಕೊಚ್ಚಿಯ ವಿಟ್ಟಿಲಾ ಬಳಿಯ ಚಕ್ಕರಪ್ಪರಂನಲ್ಲಿ ಕೆಎಸ್‍ಆರ್‍ಟಿಸಿ ಬಸ್ ಮರಕ್ಕೆ
ಡಿಕ್ಕಿ ಹೊಡೆದ ಪರಿಣಾಮ ಚಾಲಕ ಸಾವನ್ನಪ್ಪಿದ್ದು, 24 ಮಂದಿ ಗಾಯಗೊಂಡಿದ್ದಾರೆ.
ಮೃತನನ್ನು ತಿರುವನಂತಪುರದ ಪಜಾಯೋಡು ಮೂಲದ ಅರುಣ್ ಸುಕುಮಾರ್ (45) ಎಂದು
ಗುರುತಿಸಲಾಗಿದೆ. ನಿರ್ವಾಹಕ ಸುರೇಶ್ ಸೇರಿದಂತೆ ಇಬ್ಬರು ವ್ಯಕ್ತಿಗಳ ಸ್ಥಿತಿ
ಗಂಭೀರವಾಗಿದೆ.
ಕೆಎಸ್‍ಆರ್‍ಟಿಸಿ ಚಾಲಕರ ಕೆಲಸದ ಹೊರೆ ಕಡಿಮೆ ಮಾಡಲು ಶೀಘ್ರದಲ್ಲೇ ಕ್ರಮ-ಸಚಿವ ಎ.ಕೆ.ಶಶೀಂದ್ರನ್
0
ನವೆಂಬರ್ 30, 2020
Tags