ಕಣ್ಣೂರು: ಬಿನೀಶ್ ಕೊಡಿಯೇರಿ ಸ್ನೇಹಿತ ಮೊಹಮ್ಮದ್ ಅನಸ್ ಅವರ ಮನೆಯಲ್ಲಿ ಜಾರಿ ನಿರ್ದೇಶನಾಲಯ ನಿನ್ನೆ ಶೋಧ ನಡೆಸಿತು. 12 ಗಂಟೆಗಳ ಕಾಲ ನಡೆದ ತಪಾಸಣೆಯ ಸಮಯದಲ್ಲಿ, ಇಡಿ ಹಲವಾರು ದಾಖಲೆಗಳನ್ನು ವಶಪಡಿಸಿತೆಂದು ತಿಳಿದುಬಂದಿದೆ. ಚೀಲದಲ್ಲಿರುವ ದಾಖಲೆಗಳನ್ನು ಸುಟ್ಟ ಸ್ಥಿತಿಯಲ್ಲಿ ಇಡಿ ಕಂಡುಹಿಡಿದಿದೆ. ಮೊಹಮ್ಮದ್ ಅನಸ್ ಅವರು ಕೇರಳ ಕ್ರಿಕೆಟ್ ಸಂಘದ ಕಣ್ಣೂರು ಜಿಲ್ಲಾ ಕಾರ್ಯದರ್ಶಿಯೂ ಆಗಿದ್ದಾರೆ.
ಜಾರಿ ನಿರ್ದೇಶನಾಲಯದ ತಂಡ ಬಿನೀಶ್ ಕೊಡಿಯೇರಿ ಅವರ ಮನೆಯ ಧಾಳಿಯೂ ನಿನ್ನೆ ನಡೆದಿತ್ತು. ಡ್ರಗ್ಸ್ ಪ್ರಕರಣದಲ್ಲಿ ಬೆಂಗಳೂರಿನಲ್ಲಿ ಬಂಧಿಸಲ್ಪಟ್ಟ ಅನೂಪ್ ಮೊಹಮ್ಮದ್ ಅವರ ಹೆಸರಿನಲ್ಲಿ ಎಟಿಎಂ ಕಾರ್ಡ್ ಬಗ್ಗೆ ವಿವಾದ ಸಂಶಯಗಳಿರುವುದಾಗಿಯೂ ಇಡಿ ತಿಳಿಸಿದೆ. ಈ ಎಟಿಎಂ ಕಾರ್ಡ್ ಬಿನೀಶ್ ಅವರ ಮನೆಯಲ್ಲಿ ಕಂಡುಬಂದಿತ್ತೆಂದು ಜಾರಿ ನಿರ್ದೇಶನಾಲಯ ತಿಳಿಸಿದೆ. ಆದರೆ ಈ ಕಾರ್ಡ್ ನ್ನು ಎಪ್ಪೋರ್ಸ್ ಮೆಂಟ್ ಅಧಿಕಾರಿಗಳೇ ತಂದಿರುವುದೆಂದು ಬಿನೀಶ್ ಅವರ ಕುಟುಂಬ ಹೇಳಿಕೊಂಡಿದೆ.